ಬೆಳಗಾವಿ : ಶಿವಗಿರಿ ಕೊ ಅಪ್ ಕ್ರೆಡಿಟ್ ಸೊಸೈಟಿ ಲಿ ಮಹಾದ್ವಾರ ರೋಡ್ ಬೆಳಗಾವಿ ಇವರ ಆಶ್ರಯದಲ್ಲಿ ಬಿಲ್ಲವರ ಅಸೋಸಿಯೇಶನ್ ಬೆಳಗಾವಿ ಹಾಗೂ ಆಯು ಫೌಂಡೇಶನ್ ಮತ್ತು ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಇವರ ಸಹಯೋಗದೊಂದಿಗೆ ಎಸ್ ಪಿ ಎಂ ರಸ್ತೆಯ ವಿಶ್ವಕರ್ಮ ಸಭಾ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರಿಗೆ ವಿವಿಧ ರೀತಿಯ ಕ್ಯಾನ್ಸರ್ ತಪಾಸಣೆ ಹಾಗೂ ಎಲ್ಲರಿಗೂ ಕಣ್ಣಿನ ತಪಾಸಣೆ ಮತ್ತು ದಂತ ತಪಾಸಣೆ ಹಾಗು ಬಿಪಿ ಮತ್ತು ಶುಗರ್ ತಪಾಸಣೆ ಮಾಡಲಾಯಿತು. ರೇಡಾನ್ ಕ್ಯಾನ್ಸರ್ ಸೆಂಟರ್ ನ ನುರಿತ ತಜ್ಞ ಡಾ. ಶೀತಲ್ ಕುಲಗೋಡ ಕ್ಯಾನ್ಸರ್ ಜಾಗೃತಿ ಕುರಿತು ಮಾತನಾಡಿದರು. ನೇತ್ರ ದರ್ಶನ್ ಆಸ್ಪತ್ರೆಯ ತಜ್ಞರಿಂದ ಕಣ್ಣಿನ ತಪಾಸಣೆ ನಡೆಸಲಾಯಿತು. ಇಂಡಿಯನ್ ಡೆಂಟಲ್ ಅಸೋಸಿಯೇಶನ್ ವತಿಯಿಂದ ದಂತ ತಪಾಸಣೆ ನಡೆಸಲಾಯಿತು.
ತಾಲ್ಲೂಕು ಆರೋಗ್ಯ ಕೇಂದ್ರದ ವತಿಯಿಂದ ಎಲ್ಲರಿಗೂ ಬಿಪಿ ಹಾಗೂ ಶುಗರ್ ತಪಾಸಣೆ ನಡೆಸಲಾಯಿತು.
ಶಿವಗಿರಿ ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್ ಎಂ. ಹಾಗು ತಾಲೂಕು ಆರೋಗ್ಯ ಅಧಿಕಾರಿ ರಮೇಶ ದಂಡಗಿ, ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ಸುಂದರ್ ಕೋಟ್ಯಾನ್ , ಆಯು ಫೌಂಡೇಶನ್ ನ ಡಾ. ಮನೋಜ್ ಕುಮಾರ್ ಸುತಾರ,
ಇಂಡಿಯನ್ ಡೆಂಟಲ್ ಅಸೋಸಿಯೇಶನ್ ನ ಡಾ. ಬಂಕಾಪುರೆ ಹಾಗೂ ನೇತ್ರಾವತಿ
ಸಬ್ನಿಸ್ ವಿಶ್ವಕರ್ಮ ಮನು ಮಯ ಸಂಸ್ಥೆಯ ಅಧ್ಯಕ್ಷ ಶಿರೋಳ್ಕರ್ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಜನರು ಎಲ್ಲ ರೀತಿಯ ತಪಾಸಣೆ ಮಾಡಿಸಿಕೊಂಡರು. ಶಿವಗಿರಿ ಸೊಸೈಟಿಯ ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ವ್ಯವಸ್ಥಾಪಕ ಚಂದ್ರ ಪೂಜಾರಿ ನಿರೂಪಿಸಿ ವಂದಿಸಿದರು.


