ಬೆಳಗಾವಿ :
ಎನ್ಎಸ್ಎಸ್ ಮತ್ತು ಉನ್ನತ ಭಾರತ ಅಭಿಯಾನ ಈ ಸಂಸ್ಥೆಗಳ ಉದ್ದೇಶವೇ ಗ್ರಾಮಾಭಿವೃದ್ಧಿ ಮತ್ತು ಸಾಮಾಜಿಕ ಸೇವೆಯಾಗಿದೆ. ಅಲ್ಲದೆ ಸರ್ಕಾರದ ಅನೇಕ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಗುರುತರ ಜವಾಬ್ದಾರಿಯನ್ನು ಹೊಂದಿವೆ. ಅದರ ಭಾಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ಮಾಡುವುದು ಅಗತ್ಯವೆನಿಸಿದೆ ಎಂದು ಲಿಂಗರಾಜ ಕಾಲೇಜಿ ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ ಡಾ.ಎಚ್.ಎಮ್.ಚನ್ನಪ್ಪಗೋಳ ಹೇಳಿದರು.
ಅವರು ಕೆ. ಎಲ್. ಇ. ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿಯ ಉನ್ನತ ಭಾರತ ಅಭಿಯಾನ, ಎನ್.ಎಸ್.ಎಸ್. ಮತ್ತು ವಿದ್ಯಾಭಿವೃದ್ಧಿ ವಿದ್ಯಾರ್ಥಿಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆ. ಎಲ್. ಸಂಸ್ಥೆಯ ಜೆ. ಎನ್. ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಬೆಂಡಿಗೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ದಿನಾಂಕ ೨೭-೮-೨೦೨೩ ರಂದು ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಚಂಡು, ಎ. ವಾಯ್. ಬೆಂಡಿಗೇರಿ, ಎಸ್ ಆರ್ ಮಾಳಾಯಿ, ರವಿ ಮೆಳೇದ ಶ್ರೀ ಸಿದ್ದಣ್ಣ ಹಾವನ್ನವರ, ಸಂತೋಷ ಅಂಗಡಿ, ಬಸವರಾಜ ಡಮ್ಮನಗಿ, ವೀರೇಂದ್ರ ಮೇಳೇದ ಸೋಮಪ್ಪ ಶೀಗಿಹಳ್ಳಿ, ಮಲ್ಲಪ್ಪ ಕಾದ್ರೊಳ್ಳಿ ಇವರೆಲ್ಲರ ಉಪಸ್ಥಿತಿಯಲ್ಲಿ ಶಿಬಿರ ಯಶಸ್ವಿಯಾಗಿ ಜರುಗಿತು. ಸುಮಾರು 3೦೦ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಕೊಂಡರು. ಉನ್ನತ ಭಾರತ ಅಭಿಯಾನದ ಸಹ ಸಂಯೋಜಕ ಡಾ. ಸಿ. ಮಲ್ಲಣ್ಣ ಮುಂತಾದವರು ಉಪಸ್ಥಿತರಿದ್ದರು.