ಬೆಳಗಾವಿ : ಶಿವಗಿರಿ ಕೋ ಆಫ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಹಬ್ಬದ ಪ್ರಯುಕ್ತ ಬಿಲ್ಲವರ ಅಸೋಸಿಯೇಶನ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ(ಆಯುರ್ವೇದಿಕ್) ಶಿಬಿರವನ್ನು ನಗರದ ಮಹಾದ್ವಾರ ರಸ್ತೆಯ ಶಿವಗಿರಿ ಸೊಸೈಟಿಯ ಕಾರ್ಯಾಲಯದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ನಿತ್ಯಾನಂದ ಆರೋಗ್ಯದಾಮ ಬೇವಿನಕೊಪ್ಪ ಬೈಲಹೊಂಗಲದ ಸ್ವಾಮೀಜಿಯವರಾದ ಸಿದ್ದಗುರು ಪರಂಪರಾಗತ ವೈದ್ಯ ವಿಜಯಾನಂದ ಸ್ವಾಮೀಜಿ ಮತ್ತು ಅವರ ತಂಡದ ನೇತೃತ್ವದಲ್ಲಿ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿ, ಇವತ್ತಿನ ದಿನದಲ್ಲಿ ಮಾನವನ ಆರೋಗ್ಯದಲ್ಲಿ ಆಗುತ್ತಿರುವ ತೊಂದರೆಗಳು ಹಾಗು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿಸಿದರು.
ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡ ಸದಸ್ಯರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಸೊಸೈಟಿಯಿಂದ ಭರಿಸುವುದಾಗಿ ಹೇಳಿದರು. ಪರಶುರಾಮ್ ವಿ ನಾಯ್ಕ, ಸಂಘದ ಉಪಾಧ್ಯಕ್ಷ ಸುಂದರ ಕೊಟ್ಯಾನ್, ಸೊಸೈಟಿಯ ನಿರ್ದೇಶಕರಾದ ಕೃಷ್ಣ ಎಸ್ ಪೂಜಾರಿ , ಬಾಳಪ್ಪ ಕಾಳೇನಟ್ಟಿ, ಸುರೇಶ್ ಕೆ ಜತ್ತನ ಉಪಸ್ಥಿತರಿದ್ದರು. ಬಿಲ್ಲವ ಸಂಘದ ಎಲ್ಲಾ ಸದಸ್ಯರು, ಮಹಿಳಾ ಮಂಡಳದ ಸದಸ್ಯರು, ಸೊಸೈಟಿಯ ಸಿಬ್ಬಂದಿ ವರ್ಗ ಮತ್ತು ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು.ನೂರಾರು ಸಂಖ್ಯೆಯಲ್ಲಿ ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡು ಔಷಧಗಳನ್ನು ಪಡೆದುಕೊಂಡರು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮನಾಥ ಎಸ್ ಕಡಕೋಳ ನಿರೂಪಿಸಿದರು. ಕೃಷ್ಣ ಎಚ್ ನಾಯ್ಕ ವಂದಿಸಿದರು.