ಬೆಂಗಳೂರು:
ಮಹದಾಯಿ( ಕಳಸಾ- ಬಂಡೂರಿ) ಯೋಜನೆ ಕಾಮಗಾರಿಗೆ ನವೆಂಬರ್ 1ರಂದು ಭೂಮಿಪೂಜೆ ನೆರವೇರಿಸಲು ರಾಜ್ಯ ಸರಕಾರ ಮುಂದಾಗುತ್ತಿದೆ.
ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿ ದೊರೆತಿದ್ದು ಆದೇಶವಷ್ಟೇ ಕೈಸೇರಬೇಕಿದೆ. ಮುಂದಿನ ವಾರ ರಾಜ್ಯ ಸರಕಾರಕ್ಕೆ ಆದೇಶ ಪ್ರತಿ ಕೈಸೇರಲಿದ್ದು ನಂತರ ಅಧಿಕೃತವಾಗಿ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.