ಅಹ್ಮದಾಬಾದ್ : ಇಂದು ಇಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ 68 ವರ್ಷ ವಯಸ್ಸಿನ ವಿಜಯ ರೂಪಾನಿ ಇದ್ದರು ಎಂಬ ಮಾಹಿತಿ ಲಭಿಸಿದೆ. ವಿಮಾನದಲ್ಲಿ ಒಟ್ಟು 130ಕ್ಕೂ ಹೆಚ್ಚು ಜನ ಇದ್ದರು. ಅವರಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಸಹ ಇದ್ದರು ಎಂಬ ಮಾಹಿತಿ ಇದೆ. ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.