This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಸುಪುತ್ರರ ವಿವಾಹ ಜ.23 ಕ್ಕೆ ಆರತಕ್ಷತೆ ಫೆ. 3ಕ್ಕೆ Former DCM Lakshmana Savadi's son's wedding reception on Jan. 23 Feb. At 3


ಜನಮನದ ನಾಯಕರೆಂದೇ ಚಿರಪರಿಚಿತರಾದ ಲಕ್ಷ್ಮಣ ಸವದಿ ಸುಪುತ್ರರ ವಿವಾಹ ಹಿನ್ನಲೆಯಲ್ಲಿ ಅಥಣಿ ತಾಲೂಕಿನ ಜನತೆ ತಮ್ಮ ಮನೆ ಮಕ್ಕಳ ಮದುವೆಯಂತೆ ಓಡಾಡಲು ಸಜ್ಜುಗೊಂಡಿದ್ದಾರೆ. ಅಥಣಿ ಭಾಗದ ಯಾವುದೇ ಕಾರ್ಯಕ್ರಮವಿರಲಿ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವ ಔದಾರ್ಯದ ಗುಣ ಬೆಳೆಸಿಕೊಂಡಿರುವ ಲಕ್ಷ್ಮಣ ಸವದಿ ಅವರ ಪುತ್ರರ ವಿವಾಹವನ್ನು ತಮ್ಮ ಮನೆಯ ವಿವಾಹ ಎನ್ನುವಂತೆ ನೆರವೇರಿಸಲು ಅಥಣಿ ಜನತೆ ಇದೀಗ ಸನ್ನದ್ದರಾಗಿರುವುದು ವಿಶೇಷವಾಗಿದೆ.

ಬೆಳಗಾವಿ ಮತ್ತು ಅಥಣಿಯಲ್ಲಿ ವಿವಾಹ ಸಮಾರಂಭಗಳು ನಡೆಯಲಿದ್ದು ಎರಡು ಕಡೆ ಐತಿಹಾಸಿಕ ಎನ್ನುವಂತೆ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಒಟ್ಟಾರೆ ವಿವಾಹ ಸಮಾರಂಭವನ್ನು ಅತ್ಯಂತ ವೈಭವಯುತವಾಗಿಸಲು ಲಕ್ಷ್ಮಣ ಸವದಿ ಕುಟುಂಬ ಹಾಗೂ ಅಥಣಿ ತಾಲೂಕಿನ ಜನತೆ ತೀರ್ಮಾನಿಸಿದ್ದಾರೆ.

ಅಥಣಿ : ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂ.ಸವದಿಯವರ ಇಬ್ಬರು ಸುಪುತ್ರರ ವಿವಾಹ ಆರತಕ್ಷತೆ ಸಮಾರಂಭ ಫೆ. 3ರಂದು 2023 (ಶುಕ್ರವಾರ) ಹಲ್ಯಾಳದ ಶ್ರೀ ಕೃಷ್ಣಾ ರೈತ ಭವನದಲ್ಲಿ ಜರುಗಲಿದೆ. ಅದ್ಧೂರಿ ಆರತಕ್ಷತೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ಸೋಶಿಯಲ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನಲ್ಲಿ ದಿ. 20-01-23 ರಂದು ಸಾಯಂಕಾಲ ಬೃಹತ್ ಪೂರ್ವಭಾವಿ ಸಭೆ ಜರುಗಿತು. ಅಥಣಿ ಪಟ್ಟಣ ಸೇರಿದಂತೆ ಮತಕ್ಷೇತ್ರದ ಎಲ್ಲ ಗ್ರಾಮಗಳ ಮುಖಂಡರು, ಅಭಿಮಾನಿ ಬಳಗದವರು, ಸವದಿ ಪರಿವಾರದ ಬಂಧು-ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಸಲಹೆ, ಸೂಚನೆ ನೀಡಿದರು.

ರೈತ ನಾಯಕರು, ಹಸಿರುಕ್ರಾಂತಿ ಹರಿಕಾರರು, ಅಥಣಿ ಕ್ಷೇತ್ರದ ಅಭಿವೃದ್ಧಿ ರೂವಾರಿ ಲಕ್ಷ್ಮಣ ಸಂ. ಸವದಿಯವರು ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಆದ್ದರಿಂದ ಅವರಿಗಾಗಿ ನಾವು ಒಂದಿಷ್ಟು ದುಡಿಯುವ ಸಮಯ ಬಂದಿದೆ. ಅಲ್ಲದೆ, ಈ ಶುಭ ಸಂದರ್ಭದಲ್ಲಿ ನಮ್ಮ ಜನರಿಗಾಗಿ ಇಷ್ಟೊಂದು ದೊಡ್ಡ ಸಮಾರಂಭವನ್ನು ನೆರವೇರಿಸಲು ಮುಂದಾಗಿದ್ದಾರೆ. ಲಕ್ಷ್ಮಣ ಸವದಿಯವರು ಜನರ ನೆಮ್ಮದಿ, ಸಂತಸದಲ್ಲಿಯೇ ತಮ್ಮ ಖುಷಿ, ಸಂತಸ ಕಾಣುವ ಹೃದಯವಂತ ರಾಜಕಾರಣಿ. ಆದ್ದರಿಂದ ಅವರ ಮಕ್ಕಳ ಈ ವಿವಾಹ ಆರತಕ್ಷತೆಯ ಸಮಾರಂಭವು ನಮ್ಮ ಅಥಣಿ ಮತಕ್ಷೇತ್ರದ ಸರ್ವ ಜನರ ಕುಟುಂಬದ ಸಂಭ್ರಮದ ಕಾರ್ಯಕ್ರಮವಾಗಿದೆ. ಇದನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಜನಮನದಲ್ಲಿ ಸ್ಮರಣೀಯವಾಗುವಂತೆ ನೆರವೇರಿಸಲು ಒಗ್ಗಟ್ಟಿನಿಂದ ಶ್ರಮಿಸೋಣ ಎಂಬ ಮಾತುಗಳು ಸರ್ವರಿಂದ ವ್ಯಕ್ತವಾದವು.

ಎಲ್ಲರ ಅನಿಸಿಕೆ, ಸಲಹೆಗಳನ್ನು ಆಲಿಸಿ ಬಳಿಕ ಮಾತನಾಡಿದ, ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂ. ಸವದಿಯವರು , ದೇವರ ಕೃಪೆ ಹಾಗೂ ಗುರು-ಹಿರಿಯರ ಆಶೀರ್ವಾದದಿಂದ ನನ್ನ ಸುಪುತ್ರರಾದ ಶಶಿಕಾಂತ ಹಾಗೂ ಸುಮಿತ್ ಅವರ ವಿವಾಹವನ್ನು ನೆರವೇರಿಸುವ ಸುಸಂದರ್ಭ ಬಂದಿದೆ. ಇದು ನಮಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ತಾವೆಲ್ಲರೂ ನಿಮ್ಮ ಮನೆ ಮಕ್ಕಳು, ಸಹೋದರರಂತೆ ನಿಂತು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು. ಮದುವೆ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಹಾಗೂ ಕೇಂದ್ರದ ರಾಜಕೀಯ ನಾಯಕರು, ನಾಡಿನ ವಿವಿಧ ಮಠಾಧೀಶರು, ಹಲವಾರು ಗಣ್ಯ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಿ. 23-01-23 ರಂದು ಬೆಳಗಾವಿಯಲ್ಲಿ ವಿವಾಹ ಸಮಾರಂಭ ಜರುಗಲಿದೆ. ಬಳಿಕ 03-02-23 ರಂದು ಹಲ್ಯಾಳದ ಕೃಷ್ಣಾ ರೈತ ಭವನದಲ್ಲಿ ವಿವಾಹ ಆರತಕ್ಷತೆ ಸಮಾರಂಭ ಜರುಗಲಿದೆ. ಅಥಣಿ-ಕಾಗವಾಡ ಮತಕ್ಷೇತ್ರದ ಜನತೆಯನ್ನು ವಿವಾಹ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಗುವುದು. ಸ್ಥಳೀಯ ನಾಯಕರು ನಮ್ಮ ಕುಟುಂಬದ ಸದಸ್ಯರೊಂದಿಗೆ ಅಥಣಿ ಪಟ್ಟಣದಲ್ಲಿ ಬಹುತೇಕ ಈಗಾಗಲೇ ಎಲ್ಲರ ಮನೆಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅಥಣಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ 15-20 ಮುಖಂಡರು ಹಾಗೂ ಯುವಕರ ತಂಡ ರಚಿಸಲಾಗುವುದು. ಈ ತಂಡದೊಂದಿಗೆ ನಮ್ಮ ಕುಟುಂಬದ ಸದಸ್ಯರೊಬ್ಬರ ಮೂಲಕ ಪ್ರತಿಯೊಬ್ಬರ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಲಾಗುವುದು. ಈ ಮೂಲಕ ಎಲ್ಲರನ್ನು ಅತ್ಯಂತ ಗೌರವ, ಪ್ರೀತಿ, ಆದರ, ಆತ್ಮೀಯತೆಯಿಂದ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಹೋಳಿಗೆ ತುಪ್ಪದ ಭೋಜನ:
ನಮ್ಮ ಹಿಂದಿನ ಹಿರಿಯರು ಹೋಳಿಗೆ ಊಟ ಯಾವಾಗ್ರೀ…ಅಂತಾ ಕೇಳುತ್ತಿದ್ರು. ಅಂದ್ರೆ ಮದುವೆ ಯಾವಾಗ ಎಂದು ಕೇಳಲಿಕ್ಕೆ ಹೋಳಿಗೆ ಊಟ ಯಾವಾಗ್ರೀ..ಎಂದು ಹೇಳುತ್ತಿದ್ರು. ಆಗ ಮದುವೆಯಂದ್ರೆ ಹೋಳಿಗೆ ತುಪ್ಪದ ಊಟ ಕಾಯಂ ಆಗಿತ್. ಎಲ್ಲರೂ ಹೋಳಿಗೆ ಊಟ ಮಾಡಿಸುತ್ತಿದ್ರು. ಆದ್ರ್ ಈಗ ಬದಲಾದ ಕಾಲದಲ್ಲಿ ಊಟದ ಪದ್ಧತಿ ಕೂಡ ಚೇಂಜ್ ಆಗಿದೆ. ಆದ್ದರಿಂದ ನಮ್ಮ ದೇಸಿ ಹೋಳಿಗೆ ತುಪ್ಪದ ಊಟ ಹಾಗೂ ಇದರೊಂದಿಗೆ ಹಲವು ರುಚಿಕರ ಆಹಾರ ಖಾದ್ಯ, ತಿಂಡಿ ತಿನಿಸುಗಳ ಸವಿಯನ್ನು ಎಲ್ಲರಿಗೂ ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 1200 ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಬರಲಿದ್ದಾರೆ. ಒಂದು ಕೌಂಟರ್‌ನಲ್ಲಿ 15-20 ಸಾವಿರ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುವಂತಹ 5-6 ಬೃಹತ್ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿಯೊಬ್ಬರಿಗೂ ಕುಡಿಯವ ಫಿಲ್ಟರ್ ನೀರಿನ ಬಾಟಲಿ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಯಾರಿಗೂ ಊಟ ಹಾಗೂ ನೀರು, ಟ್ರಾಫಿಕ್ ಸೇರಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುವುದು. ಎಲ್ಲ ಗ್ರಾಮಗಳ ಜನತೆಗೆ ಆಗಮಿಸಲು ಆಯಾ ಗ್ರಾಮಕ್ಕೆ ಬಸ್ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಆದ್ದರಿಂದ ಎಲ್ಲರೂ ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ಹಿರಿಯರು, ರೈತ ಬಾಂಧವರು, ಮಹಿಳೆಯರು, ಅಥಣಿ ಮತಕ್ಷೇತ್ರದ ಸಮಸ್ತ ಜನತೆ ಈ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿ, ಶುಭ ಹಾರೈಸಬೇಕೆಂದು ತಮ್ಮೆಲ್ಲರಲ್ಲಿ ಕೈ ಮುಗಿದು ಕೇಳಿಕೊಳ್ಳುವುದಾಗಿ ಲಕ್ಷ್ಮಣ ಸಂ. ಸವದಿಯವರು ವಿನಂತಿಸಿದರು.


Jana Jeevala
the authorJana Jeevala

Leave a Reply