ಅಥಣಿ :
ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿ ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಹಿಪ್ಪರಗಿ ಅಣಿಕಟ್ಟು ಯೋಜನೆಯಡಿ ಬರುವ ಹಲ್ಯಾಳ ಏತ ನೀರಾವರಿ ಯೋಜನೆಯ ಹಲ್ಯಾಳ ಪೂರ್ವ ಕಾಲುವೆಯ ಒಟ್ಟು ರೂ. 40,00 ಕಿ.ಮೀ. ಉದ್ದವಿದ್ದು, ಸದರಿ ಕಾಲುವೆಯು ಕಿ.ಮೀ. 5.00 ರಿಂದ 10.00 ವರೆಗೆ ಅಥಣಿ ತಾಲ್ಲೂಕಿನ ಹಲ್ಯಾಳ, ಅವರಖೋಡ, ರಡ್ಡರಹಟ್ಟಿ ಮತ್ತು ನಾಗನೂರ ಪಿ.ಕೆ. ಗ್ರಾಮಗಳ ಜಮೀನುಗಳಲ್ಲಿ ಹಾದು ಹೋಗಿರುತ್ತದೆ. ಸದರಿ ಕಾಲುವೆಯ ಸರ್ವಿಸ್ ರಸ್ತೆಯು ಎತ್ತರದ ಏರಿಯಲ್ಲಿ ನಿರ್ಮಿತವಾಗಿರುತ್ತದೆ. ಕಾಲುವೆಗಳಲ್ಲ ನೀರು ಹರಿಸಲು ಪ್ರಾರಂಭಿಸಿದಾಗ ಕೆಳಭಾಗದ ರೈತರ ಜಮೀನುಗಳು ಕಾಲುವೆ ನೀರು ಸೋರಿಕೆಯಿಂದ ಹಾಳಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಭಾಗದ ರೈತರು ಕಾಲುವೆಯನ್ನು ಮುಂಗಾರು ಹಂಗಾವು ಪ್ರಾರಂಭಗೊಳ್ಳುವುದಕ್ಕಿಂತ ಮುಂಚೆ ದುರಸ್ತಿಗೊಳಸಬೇಕೆಂದು ಮಾಧ್ಯಮ ಗೋಷ್ಠಿಯಲ್ಲಿ ಮನವಿ ಮಾಡಿರುತ್ತಾರೆ. ಆದ್ದರಿಂದ ರೈತರ ಕೃಷಿ ಚಟುವಟಿಕಗಳ ಹಿತದೃಷ್ಟಿಯಿಂದ ಕೈಗೊಳ್ಳಲು ರೂ. 4ಕೋಟಿ 99 ಲಕ್ಷಗಳ ಅನುದಾನ ಮಂಜೂರು ಮಾಡಿಸಿ ರೈತರಲ್ಲಿ ಸಂತಸ ತಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಮುರಾಗೆಪ್ಪ ಬಾವಿ, ಶ್ರೀಶೈಲ್ ನಾಯಿಕ್,ಬಸಪ್ಪ ಖೋತ, ಮಹದೇವ ಗಲಗಲಿ, ಶ್ರೀಶೈಲ್ ಖೋತ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.