ಅಥಣಿ:
ಇಂದಿನ ಯುವ ಪೀಳಿಗೆಗಳು ದುಷ್ಟ ಚಟಗಳಿಗೆ ಬಲಿಯಾಗದೆ ಭವ್ಯಭಾರತ ಕಟ್ಟುವಲ್ಲಿ ಈ ರಾಷ್ಟ್ರಕಂಡ ಮಹಾನ್ ನಾಯಕ ನರೇಂದ್ರ ಮೋದಿಯವರ ಕೈ ಬಲ ಪಡಿಸುವಲ್ಲಿ ಯುವ ಸಮುದಾಯ ಸಹಕಾರಿಗಳಾಗ ಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಲಕ್ಷ್ಮಣ ಸವದಿ ಹೇಳಿದರು.
ದರೂರ ಗ್ರಾಮದಲ್ಲಿ ಒಟ್ಟು ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಏಳು ವಿವಿಧ ಸಮುದಾಯ ಭವನ ಮತ್ತು ಭಗತ್ ಸಿಂಗ್ ಸರ್ಕಲ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಂದು ಅತೀ ಚಿಕ್ಕ ವಯಸ್ಸಿನಲ್ಲಿ ಸ್ವತಂತ್ರ ಸಂಗ್ರಾಮದ ಕಹಳೆ ಊದಿದ ಯುವಕರಿಗೆ ಪ್ರೇರಣೆಯಾಗಿದ್ದ ಭಗತ್ ಸಿಂಗ್ ಯುವ ಸಮುದಾಯದಲ್ಲಿ ಜಾಗೃತಿ ಜೊತೆಗೆ ಆಂಗ್ಲರ ವಿರುದ್ಧ ಕಿಚ್ಚನ್ನು ಮೂಡಿಸಿ ಸ್ವತಂತ್ರ ಚಳವಳಿಯ ದಿಕ್ಕನ್ನೇ ಬದಲಾಯಿಸಿದ ಮಹಾನ್ ನಾಯಕನಾಗಿದ್ದರು. ಅಂತಹ ನಾಯಕ ಭಗತ್ ಸಿಂಗ್ ಹೆಸರಿನಲ್ಲಿ ಸರ್ಕಲ್ ನಿರ್ಮಾಣ ಮಾಡಲು ಮುಂದಾಗಿರುವುದು ತಾಲೂಕಿನ ಇಡೀ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಸುಮಾರು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಹಾಳಮಾರ ಲಕ್ಕವ್ವದೇವಿ ಮಂದಿರದ ಹತ್ತಿರ ಸಮುದಾಯ ಭವನ, ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸೀಮಿ ಲಕ್ಕವ್ವದೇವಿ ಮಂದಿರದ ಹತ್ತಿರ ಸಮುದಾಯ ಭವನ, ಐದು ಲಕ್ಷ ರೂ. ವೆಚ್ಚದಲ್ಲಿ ತಳದಪ್ಪ ಮಂದಿರದ ಹತ್ತಿರ ಸಮುದಾಯ ಭವನ, ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಲಕ್ಕವ್ವದೇವಿ ಮಂದಿರದ ಹತ್ತಿರ ಸಮುದಾಯ ಭವನ, ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ದಿಗಂಬರೇಶ್ವರ ಮಂದಿರದ ಹತ್ತಿರ ಸಮುದಾಯ ಭವನ, ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಹಳೆ ಜೈನ ಬಸದಿ ಹತ್ತಿರ ಸಮುದಾಯ ಭವನ ನಿರ್ಮಾಣ, ಐದು ಲಕ್ಷ ರೂ. ವೆಚ್ಚದಲ್ಲಿ ಶೆಟ್ಟಿ ಮಂದಿರದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಅಥಣಿ ಬಿಜೆಪಿ ಮಂಡಳ ಅಧ್ಯಕ್ಷ ಅಣ್ಣಾಸಾಹೇಬ ನಾಯಿಕ, ರಾಮಣ್ಣ ಚೌಗಲಾ, ಗುರುಲಿಂಗ ಗುಮ್ತಾಜ್, ಜಗದೀಶ ದಳವಾಯಿ, ಉದಯ ಮಠದ, ಶಿವು ಸಾವಗಾಂವ, ದುಂಡಪ್ಪ ಅಸ್ಕಿ, ನೇಮಿನಾಥ ಅಸ್ಕಿ, ಧರೆಪ್ಪ ಬಸಗೌಡರ, ಸುರೇಶ ಮಾಯನ್ನವರ, ಶ್ರೀಕಾಂತ ಅಸ್ಕಿ, ದುಂಡಪ್ಪ ಪಡಸಲಗಿ, ಗ್ರಾಪಂ ಸದಸ್ಯರಾದ ಮಹಾವೀರ ಬಾಳಿಗೇರಿ, ಅಶೋಕ ಖುರ್ದ, ಮಹೇಶ ಬೇನಾಡಿ, ಈರಪ್ಪ ಬಸಗೌಡರ, ಫರೀದ ಅವಟಿ, ಮಹೇಶ ಢವಳೇಶ್ವರ ಉಪಸ್ಥಿತರಿದ್ದರು.