ದೆಹಲಿ :
ಕಾಂಗ್ರೆಸ್ನ ಮಾಜಿ ನಾಯಕ ಸಿ. ರಾಜಗೋಪಾಲಾಚಾರಿ ಅವರ ಮರಿಮೊಮ್ಮಗ ಸಿ.ಆರ್ .ಕೇಶವನ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಸೇರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದೀಗ ಈ ಎಲ್ಲ ರಾಜಕೀಯ ಚಟುವಟಿಕೆ ಪ್ರಧಾನಿ ಮೋದಿ ತಮಿಳುನಾಡಿನಲ್ಲಿರುವ ನಡೆದದ್ದು ಇನ್ನು ವಿಶೇಷವಾಗಿತ್ತು ಎಂದು ಸಿಆರ್ ಕೇಶವನ್ ಹೇಳಿದರು. ಪ್ರಧಾನಿ ಮೋದಿಯವರ ಜನಪರ ನೀತಿಗಳು , ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸುಧಾರಣೆ ನೀತಿ , ಅಂತರ್ಗತ ಅಭಿವೃದ್ಧಿ ಕಾರ್ಯಸೂಚಿ , ಭಾರತವನ್ನು ದುರ್ಬಲ ಆರ್ಥಿಕತೆಯಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತಿಸುತ್ತಿರುವುದು ನೋಡಿ ನಾನು ( ಸಿಆರ್ ಕೇಶವನ್ ) ಸೇರ್ಪಡೆಯಾಗಿದ್ದೇನೆ ಎಂದು ಮಾಧ್ಯಮಗಳೊಂದಿಗೆ ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ಪಡೆದವರು ನನಗೆ ಗೊತ್ತು . 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ . ಅಮಿತ್ ಶಾ ಅವರು ಡಿಬಿಟಿ ಈ ಹಿಂದೆ ‘ ಡೀಲರ್ ಬೋಕರ್ ಟ್ರಾನ್ಸ್ಫರ್ ‘ ಎಂದು ಹೇಳಿದ್ದರು , ಆದರೆ ಈಗ ಅದು ನೇರ ಲಾಭದ ವರ್ಗಾವಣೆಯಾಗಿದೆ , ಎಂದು ಅವರು ಪ್ರಧಾನಿಯನ್ನು ಶ್ಲಾಘಿಸಿದರು .
ಕಾಂಗ್ರೆಸ್ ಮಾಧ್ಯಮ ಪ್ಯಾನಲಿಸ್ಟ್ ಮತ್ತು ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರ ಮೊಮ್ಮಗ ಸಿಆರ್ ಕೇಶವನ್ ಅವರು ಫೆಬ್ರವರಿಯಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಮಾಡಿದರು , ಎರಡು ದಶಕಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದೆ . ಆದರೆ ಅಲ್ಲಿ ನನ್ನ ಕೆಲಸಕ್ಕೆ ಯಾವುದೇ ಗೌರವ ನೀಡಿಲ್ಲ ಎಂದು ಹೇಳಿದ್ದಾರೆ .