ಜನ ಜೀವಾಳ ಜಾಲ : ಬೆಳಗಾವಿ:ಅರಣ್ಯ ಇಲಾಖೆಯ ಜೀಪ್ ದುರುಪಯೋಗ ಮಾಡಿಕೊಂಡು ಗಿಡ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿಕೊಳ್ಳುವ ರೀತಿಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಎಫ್ ಎಸ್. ಕೆ. ಕಲ್ಲೋಳಿಕರ ವಾರದ ನಂತರ ತಿಳಿಸಿದ್ದಾರೆ.
ಘಟನೆ ನಡೆದು ವಾರ ಕಳೆಯುತ್ತ ಬಂದಿದ್ದು ಈಗ ಡಿ.ಎಫ್.ಓ ಇನ್ನೂ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಸ್ಕ್ವಾಡ್ ವಿಭಾಗದ ವಲಯ ಅರಣ್ಯಾಧಿಕಾರಿ ವಾಹನ ಚಲಾಯಿಸುತ್ತಿರುವ ಚಾಲಕ ರವಿ ಎಂಬಾತ ಮಹಾಂತೇಷ ನಗರ ಬಳಿ ಪ್ರಾರ್ಥನಾ ಮಂದಿರ ಒಂದರ ಆವರಣದಲ್ಲಿ ಗಿಡ ಕಡಿಯುವ ದೃಶ್ಯ ಹೊರಗೆ ಬಿದ್ದಿತ್ತು.
ಅರಣ್ಯ ಇಲಾಖೆಯ ವಾಹನ ಕಾಣುವಂತೆ ನಿಲ್ಲಿಸಿ ಅಕ್ರಮವಾಗಿ ಗಿಡ ಕಡಿದ ಆರೋಪ ಮೊಬೈಲ್ ದೃಶ್ಯಗಳ ಮೂಲಕ ಪರಿಸರವಾದಿಗಳು ಜನ ಜೀವಾಳ ಕ್ಕೆ ತಿಳಿಸಿದ್ದರು.
ಸರಕಾರಿ ವಾಹನ ದುರ್ಬಳಕೆ ಮತ್ತು ಗಿಡ ಕಡಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಚಕ್ಷಣಾ ವಿಭಾಗದ ವಲಯ ಅರಣ್ಯಾಧಿಕಾರಿ ನೇಹಾ ತೋರಗಲ್, ಪ್ರಕರಣದ ಸಂಬಂಧ ಚಾಲಕನಿಗೆ ನೊಟೀಸ್ ಕೊಡಲಾಗಿದೆ. ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಬೇಲೆಯೇ ಹೊಲ ಮೇಯುತ್ತಿರುವ ಪ್ರಕರಣಕ್ಕೆ ಮೇಲಧಿಕಾರಿಗಳು ಜಾಣ ಮೌನ ವಹಿಸುತ್ತಿರುವುದು ಗಮನ ಸೆಳೆದಿದೆ. ನಿವೃತ್ತಿ ಅಂಚಿನ ದಿನಗಳನ್ನು ದೂಡುತ್ತಿರುವ ಡಿಸಿಎಫ್ ಶಂಕರ ಕಲ್ಲೋಳಿಕರ ಅವರ ಅಸಹಾಯಕತೆ ಗಮನಿಸಬಹುದು.