ಬೆಳಗಾವಿ: ಬೆಳಗಾಂ ಸಕ್ಕರೆ ಕಾರ್ಖಾನೆಯ ೨೦೨೪-೨೫ ನೇ ಕಬ್ಬು ನುರಿಸುವ ಹಂಗಾಮಿಗಾಗಿ ಕಬ್ಬನ್ನು ನೊಂದಣಿ ಮಾಡಿದ ಕಾರ್ಯಕ್ಷೇತ್ರದ ಎಲ್ಲಾ ರೈತ ಬಾಂಧವರಿಗೆ ಕಾರ್ಖಾನೆಯಿಂದ ವಿಶೇಷ ಪ್ರಕಟಣೆ.
ಪ್ರಸ್ತುತ 2024-25 ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಪೆ.16 ರಂದು ಸಂಜೆ ೬:೦೦ ಘಂಟೆಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ, ತಾವು ಸದರಿ ಹಂಗಾಮಿಗಾಗಿ ನೊಂದಣಿ ಮಾಡಿದಂತಹ ಎಲ್ಲ ಕಬ್ಬನ್ನು ನಮ್ಮ ಕಾರ್ಖಾನೆಯ ಕ್ಷೇತ್ರ ಸಿಬ್ಬಂದಿಗಳನ್ನು ಸಂಪರ್ಕಿಸಿ ಕಟಾವು ಮಾಡಿ ತಮ್ಮ ಸ್ವಂತ ವಾಹನದಿಂದ ಅಥವಾ ಕರಾರು ಮಾಡಲಾದ ವಾಹನ ಹಾಗೂ ಗ್ಯಾಂಗಳ ಮೂಲಕ ಪೆ. 16 ರಂದು ಸಂಜೆ ೬:೦೦ ಘಂಟೆಯ ಒಳಗಾಗಿ ಕಬ್ಬನ್ನು ಕಾರ್ಖಾನೆಗೆ ಪೂರೈಕೆ ಮಾಡ ಬೇಕಿದೆ. ಒಂದು ವೇಳೆ ದಿನಾಂಕದೊಳಗೆ ಕಾರ್ಖಾನೆಗೆ ಪೂರೈಕೆಯಾಗದೆ ಕಬ್ಬಗಳು ಉಳಿದುಕೊಂಡರೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿಯಾಗಿರುವುದಿಲ್ಲ. ದಯವಿಟ್ಟು ತಾರೀಖಿನ ಒಳಗಡೆ ಕಬ್ಬು ಕಳಿಸಿ ಕಬ್ಬು ನುರಿಸಲು ಸಹಕಾರ ನೀಡಬೇಕಿದೆ.
ಪ್ರಸಕ್ತ 2024-25 ನೇ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಮಸ್ತ ರೈತ ಬಾಂಧವರಿಗೆ, ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಕ್ತೆದಾರರಿಗೆ ಮತ್ತು ಕಾರ್ಖಾನೆಯ ಎಲ್ಲ ಅಧಿಕಾರಿಗಳಿಗೆ, ಕಾರ್ಮಿಕ ಮತ್ತು ಸಿಬ್ಬಂದಿ ವರ್ಗದವರಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿಯ ಸಹಾಯ ಸಹಕಾರವನ್ನು ಮುಂಬರುವ ಹಂಗಾಮುಗಳಲ್ಲಿಯೂ ಕೂಡಾ ನೀಡಬೇಕು ಎಂದು ಬೆಳಗಾಂ ಶುಗರ್ಸ ಪ್ರೈ ಲಿ ಪರವಾಗಿ ಹಿರಿಯ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.