ಬೆಂಗಳೂರು :
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಮಾಸಿಕ ಗೌರವಧನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಇದೀಗ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಗೌರವಧನ 3000 ದಿಂದ 6000 ಕ್ಕೆ, ಉಪಾಧ್ಯಕ್ಷರ ಗೌರವಧನ 2000ದಿಂದ 4000, ಸದಸ್ಯರ ಗೌರವಧನ 1000 ದಿಂದ 2000 ಕ್ಕೆ ಹೆಚ್ಚಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.