This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಕೊನೆಗೂ ಬುಡಾ ಆಯುಕ್ತರ ಎತ್ತಂಗಡಿ ! At last Buda Commissioner's shop!


ಬೆಳಗಾವಿ :ಆರೋಪ ಹೊತ್ತು ವರ್ಗಾವಣೆ ಆಗಿರುವ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಅವರ ಜಾಗಕ್ಕೆ; ಹೊಸ ಕಮಿಷ್ನರ್ ಆಗಿ ರಾಜಶೇಖರ್ ಡಂಬಳ ಅಧಿಕಾರ ವಹಿಸಿಕೊಂಡಿದ್ದಾರೆ.ಬುಡಾ ಸೈಟ್ ಹಂಚಿಕೆ ದಂಧೆಯಲ್ಲಿ ಸಿಕ್ಕಿಬಿದ್ದು, ಅದರ ವಿಚಾರಣೆ ಜಿಲ್ಲಾಡಳಿತ ಆರಂಭಿಸುವ ಮುನ್ನವೇ ಪ್ರೀತಂ ನಸಲಾಪುರೆ ಆಗಲೇ ‘ಬುಡಾ’ ಬಿಟ್ಟು ‘ಬಿಮ್ಸ್’ಗೆ ಹೋಗಿದ್ದಾರೆ.

ಬುಡಾ ಬರ್ಖಾಸ್ತ್ ವ್ಯವಹಾರದಲ್ಲಿ ಹಲವು ಉನ್ನತಾಧಿಕಾರಿಗಳು, ರಾಜಕೀಯ ಪುಢಾರಿಗಳು ಮತ್ತಿತರರು ಸೈಟ್ ಪಡೆದ ಫಲಾನುಭವಿಗಳಾಗಿದ್ದು, ಗುಪ್ತವಾಗಿರುವ ಅವರ ಹೆಸರು ಇನ್ನಷ್ಟೇ ಬೆಳಕಿಗೂ ಬರಲಿದೆ.‌.!
ಜನರ ಮೇಲೆ ಆಡಳಿತ ನಡೆಸುವ, ಸಮಾಜವನ್ನು ರಾಜಕೀವಾಗಿ ಮುನ್ನಡೆಸುವ, ಸಮಾಜ ಮತ್ತು ಸರಕಾರದ ಅಂಕುಡೊಂಕು ವಿಮರ್ಷೆ ಮಾಡುವ ವೃತ್ತಿಯವರೇ ಬುಡಾ ಬುಡಕ್ಕೆ ಕೈ ಹಾಕಿ ಸೈಟ್ ಸೆಳೆದಿರುವ ಪ್ರಕರಣದ ವಿಚಾರಣೆಗೆ ಜಿಲ್ಲಾಡಳಿತ ಇನ್ನೂ ಮುಂದಾಗಿಲ್ಲ.

ಸರಕಾರಕ್ಕೆ ಲಾಸ್ ಮಾಡಿರುವ ಪ್ರಕರಣ ಬೆಳಕಿಗೆ ಬಂದು, ಸಾರ್ವಜನಿಕವಾಗಿ ಜಗಜ್ಜಾಹೀರಾಗಿ ಅರ್ಧ ತಿಂಗಳು ಕಳೆದರೂ ಇನ್ನೂ ಜಿಲ್ಲಾಧಿಕಾರಿ ಸುಮ್ಮನಿರುವುದು ಸಂಶಯ ಮೂಡಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ‘ಬುಡಮೇಲು’ ವರದಿ ಪಡೆಯುವುದಾಗಿ ಹೇಳಿ ಹೋದವರು ಮತ್ತೆ ಆ ಬಗ್ಗೆ ಚಕಾರ ಎತ್ತಿಲ್ಲ.

ಸಾರ್ವಜನಿಕರು ಮತ್ತು ಸಾಮಾಜಿಕ ಸಂಘಟನೆಗಳು ಡಿಸಿ ಎಡೆಗೆ ನೆಟ್ಟ ನೋಟ ನೆಟ್ಟಿದ್ದು ಪ್ರಕರಣ ಮುಚ್ಚುವುದೋ ಹೊರಬರುವುದೋ ಕಾಯ್ದು ನೋಡಬೇಕಿದೆ.ಬೆಳಗಾವಿಯಲ್ಲಿ ಹಲವು ಅಧಿಕಾರಿಗಳು ತನ್ನ ಮೇಲಾಧಿಕಾರಿಗೆ ಗೌರವವಾದರ ಕೊಡದೇ, ರಾಜಕೀಯ ಪುಢಾರಿಗಳ ಗುಲಾಮರಾಗಿ ಸಾರ್ವಜನಿಕ ಅಧಿಕಾರ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ವಿಷಾದನೀಯ.ಕಳೆದ 10-15ವರ್ಷ ಮೇಲ್ಪಟ್ಟು ಬೆಳಗಾವಿಯಲ್ಲಿಯೇ ಲಫಡಾ ಮಾಡುತ್ತ ಬಿಡಾರ ಹೂಡಿರುವ ಮೂರು ಬಿಟ್ಟ ಹಲವು ಬ್ಯೂರೊಕ್ರಾಟ್ಸ್ ಗಳ ಮುಖ ನೋಡಿ- ನೋಡಿ ಜನ ಬೇಸತ್ತಿದ್ದಾರಾದರೂ, ಅವರ ಮುಖಕ್ಕೆ ಮಾತ್ರ ಮಜುಗುರವಾಗಿಲ್ಲ ಎನ್ನುತ್ತಿದೆ ಬೆಳಗಾವಿ ಜನತೆ.


Jana Jeevala
the authorJana Jeevala

Leave a Reply