ಬೆಳಗಾವಿ :
ನಗರದ ಖಡೇ ಬಜಾರ್ ವಿರೂಪಾಕ್ಷಿ ಸೀರೆ ಅಂಗಡಿಯಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಕಾಂಚೀವರಂ ಸೀರೆ ಕಳ್ಳತನ ಮಾಡಿದ ಕಳ್ಳರನ್ನು ಖಡೇ ಬಜಾರ್ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲುಗಿನಲ್ಲಿ ಮಾತನಾಡುತ್ತಿದ್ದ ಇವರು ಆಂಧ್ರಪ್ರದೇಶದ ಗುಂಟೂರಿನವರು. ಬೆಳಗಾವಿಯಲ್ಲಿ ಸೀರೆ ಕಳ್ಳತನ ಮಾಡಿ ಪರಾರಿಯಾಗಿದ್ದ ಇವರನ್ನು ಮಹಾರಾಷ್ಟ್ರದ ಶಿರಡಿಯಲ್ಲಿ ಬೆಳಗಾವಿ ಪೊಲೀಸರು ಬಂಧಿಸಿ ಬೆಳಗಾವಿಗೆ ಕರೆತಂದು ವಿಚಾರಣೆ ತೀವ್ರಗೊಳಿಸಿದ್ದು ಆರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದರಲ್ಲಿ ಭಾಗಿಯಾಗಿದ್ದಾರೆ.
ಬೆಳಗಾವಿಯಲ್ಲಿ ಈ ಕಳ್ಳರ ಗ್ಯಾಂಗ್ ನಲ್ಲಿದ್ದ ಮಹಿಳೆ ಯಾರಿಗೂ ಗೊತ್ತಾಗದಂತೆ ತಾನು ಧರಿಸಿದ್ದ ಸೀರೆಯೊಳಗೆ ಕಟ್ಟಿಕೊಂಡಿದ್ದ ಕಾಂಗರೂ ಚೀಲದಲ್ಲಿ ಸೀರೆಗಳ ಪ್ಯಾಕ್ ಗಳನ್ನು ಹಾಕಿಕೊಂಡಿದ್ದಾಳೆ. ನಂತರ ಅಂಗಡಿಯಿಂದ ಹೊರಗೆ ಬಂದು ಆಟೋ ರಿಕ್ಷಾ ಮೂಲಕ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿ ತಲೆಮಾರಿಸಿಕೊಂಡಿದ್ದರು.