ಕೊನೆಗೂ ಪತ್ತೆ; ರೇಣುಕಾಚಾರ್ಯ ಸೋದರನ ಮಗ ಶವವಾಗಿ ಪತ್ತೆ
ಶಿವಮೊಗ್ಗ :
ಹೊನ್ನಾಳ್ಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅವರ ಮೃತದೇಹ ಅವರ ಕಾರಿನಲ್ಲಿ ಪತ್ತೆಯಾಗಿದೆ.
KA 17, MA 2534 ಕಾರು ಮೇಲೆತ್ತುತ್ತಿದ್ದಂತೆ ಒಳಭಾಗದಲ್ಲಿ ಪ್ರಾರ್ಥಿವ ಶರೀರ ಕಂಡು ಬಂದಿದೆ. ಕಾರು ಹೊನ್ನಾಳಿ ತಾಲ್ಲೂಕಿನ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ. ಎಸ್ಪಿ ರಿಷ್ಯಂತ್ ಹಾಜರಿದ್ದು ಮೇಲುಸ್ತುವಾರಿ ವಹಿಸಿದ್ದಾರೆ.
ಚಂದ್ರಶೇಖರ ಭಾನುವಾರ ಸಂಜೆ 7.30 ಕ್ಕೆ ಮನೆಯಿಂದ ಕಾರಿನಲ್ಲಿ ತೆರಳಿದ್ದರು. ಆದರೆ ಇದುವರೆಗೂ ವಾಪಸ್ ಬಂದಿಲ್ಲ ಎಂದು ಅವರ ತಂದೆ ಹೊನ್ನಸಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ರೇಣುಕಾಚಾರ್ಯ ಸಹಿತ ಕುಟುಂಬದವರು ತೀವ್ರ ಹುಡುಕಾಟ ನಡೆಸಿದ್ದರು. ಪೊಲೀಸರು ಹಲವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಟೋಲ್ ಗೇಟ್ ಗಳಲ್ಲೂ ಸಹ ಪರಿಶೀಲನೆ ನಡೆಸಿದ್ದರು. ಕೊನೆಗೂ ಈಇಂದು ತುಂಗಾ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.