ಬೆಳಗಾವಿ: ಮದುವೆ ವಿಷಯದಲ್ಲಿ ನಡೆದ ವಾಗ್ವಾದದಲ್ಲಿ ಪುತ್ರ ಮಂಜುನಾಥ ನಾಗಪ್ಪ ಉಳ್ಳಾಗಡ್ಡಿ ಅವರನ್ನು ಕೊಲೆ ಮಾಡಿದ ತಂದೆ ನಾಗಪ್ಪ (68) ಮತ್ತು ಅಣ್ಣ ಗುರುಬಸಪ್ಪ ಉಳ್ಳಾಗಡ್ಡಿ (28) ಅವರನ್ನು ಬಂಧಿಸಲಾಗಿದೆ ಎಂದು ಚನ್ನಮ್ಮನ ಕಿತ್ತೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ ಗಂಗೋಳ ತಿಳಿಸಿದ್ದಾರೆ.
ಮರಾಠಾ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದ ಲಿಂಗಾಯತ ಸಮುದಾಯದ ಮಂಜುನಾಥ, ಮದುವೆಯಾಗಲು ಬಯಸಿದ್ದರು. ಆದರೆ, ಅವರ ಮನೆಯಲ್ಲಿ ಇದಕ್ಕೆ ವಿರೋಧವಿತ್ತು. ಮಾರ್ಚ್ 12ರಂದು ಮದುವೆ ಆಗಲು ತೀರ್ಮಾನಿಸಿದ್ದ ಮಂಜುನಾಥ ಅವರು ತಂದೆ ನಾಗಪ್ಪ ಬಳಿ ಹಣ ಕೇಳಿದ್ದಾರೆ. ಆಗ ಜಗಳ ತಾರಕಕ್ಕೇರಿತು. ರಜೆ ಮೇಲೆ ಬಂದಿದ್ದ ಸೇನೆಯಲ್ಲಿ ಇರುವ ಅಣ್ಣ ಗುರುಬಸಪ್ಪ ಹಿಂದಿನಿಂದ ಬಂದು ತಲೆಗೆ ಕಲ್ಲಿನಿಂದ ಹೊಡೆದ. ಇದರಿಂದ ಮಂಜುನಾಥ ಕೆಳಗೆ ಬಿದ್ದ ಕೂಡಲೇ ತಂದೆ ಮತ್ತು ಅಣ್ಣ ಸೇರಿ ಮತ್ತೆ ಹೊಡೆದರು. ಆಗ ಮಂಜುನಾಥ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಗ್ರಾಮಸ್ಥರು ಹೇಳಿದರು.