ಮುತ್ಯಾನಟ್ಟಿ ಲಕ್ಷ್ಮಣ ದಡ್ಡಿ ಮೇಲೆ ಮಾರಣಾಂತಿಕ ಹಲ್ಲೆ..!
ಇಬ್ಬರ ಮೇಲೆ ಹಿಂದಿನಿಂದ ಬಂದು 25 ಜನರಿಂದ ಮಾರಕಾಸ್ತ್ರಗಳಿಂದ ದಾಳಿ..?
ದಾಳಿಗೆ ಪ್ರತಿದಾಳಿ ನಡೆಸುತ್ತಾ ದಡ್ಡಿ ಗ್ಯಾಂಗ್..?
ಬೆಳಗಾವಿ : ಮುತ್ಯಾನಟ್ಟಿ ಗ್ರಾಮದ ಡಾನ್ ಲಕ್ಷ್ಮಣ ದಡ್ಡಿ ಹಾಗೂ ಸಹಚರನ ಮೇಲೆ ಸುಮಾರು 25ಕ್ಕೂ ಹೆಚ್ಚು ಜನರು ಸೇರಿಕೊಂಡು ಮಾರಕಾಸ್ತ್ರ, ದೊಣ್ಣೆ ಹಾಗೂ ಬಡಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಂದು ಮುಂಜಾನೆ ಹೊನಗಾ ಗ್ರಾಮದಲ್ಲಿ ನಡೆದಿದೆ.
ಹೊನಗಾ ಇಂಡಸ್ಟ್ರಿಯಲ್ ಸ್ಟೀಲ್ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲಿನ ಬಿಹಾರಿ ಮ್ಯಾನೇಜರ್ ನೊಂದಿಗೆ ವ್ಯವಹಾರದ ಮಾತುಕತೆ ನಡೆಸುವ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಬಿಹಾರಿ ಹಾಗೂ ಸ್ಥಳಿಯ ಕೆಲಸಗಾರರೆಲ್ಲರೂ ಸೇರಿಕೊಂಡು ಲಕ್ಷ್ಮಣ ದಡ್ಡಿ ಮಾರಣಾಂತಿಕವಾಗಿ ಹಲ್ಲೆ ನಡೆದಿದ್ದಾರೆ ಹಾಗೂ ಆತನೊಂದಿಗೆ ಬಂದಿದ್ದ ದಿಲೀಪ್ ಎಂಬ ವ್ಯಕ್ತಿಯನ್ನು ಹೊಡೆದು , ಬಡಿದು 200 ಅಡಿ ದೂರು ತಂದು 20 ಅಡಿ ಎತ್ತರದ ಪ್ರದೇಶದಲ್ಲಿ ಮೇಲಿಂದ ಕೆಳಗೆ ಎಸೆದು ಹೋಗಿದ್ದಾರೆ.
ಈ ಘಟನೆ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇರುವುದಾಗಿ ತಿಳಿದು ಬಂದಿದೆ.
ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸ್ಥಳಕ್ಕೆ ಪಿಐ ಸುರೇಶ ಶಿಂಗಿ, ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿ ತಿವ್ರ ತನಿಖೆ ಕೈಕೊಂಡಿದ್ದಾರೆ.
ದಡ್ಡಿ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ನೂರಾರು ಯುವಕರು ಜಮಾವನೆಗೊಂಡಿದ್ದು, ಹಲ್ಲೆ ಮಾಡಿದವರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರೆ ಮತ್ತೆ ಬೆಳಗಾವಿ ಹೊತ್ತಿ ಉರಿಯುವುದಂತೂ ಪಕ್ಕಾ.