ಹಿಂಡಲಗಾ ಜೈಲಿನಲ್ಲಿ ಮುತ್ಯಾನಟ್ಟಿ ಖೈದಿ ಮೇಲೆ ಮಾರಣಾಂತಿಕ ಹಲ್ಲೆ..?
ಅಂಧೇರಿ ವಾರ್ಡನಲ್ಲಿ ಅಪರಾಧಿ ತಲೆ ಹೊಡೆದ ಮಂಗಳೂರಿನ ಆರೋಪಿ..?
ಎರಡು ತಿಂಗಳ ಹಿಂದಷ್ಟೇ ಹವಾಲ್ದಾರ ಮೇಲೆ ಹಲ್ಲೆ ಮಾಡಿ ಬಂದಿರುವ ಫಯಾನ್..!
ಬೆಳಗಾವಿ: ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಮುತ್ಯಾನಟ್ಟಿ ಗ್ರಾಮದ ಸುರೇಶ್ ಬೆಳಗಾವಿ ಈತನನ್ನು ಮಂಗಳೂರು ಮೂಲದ ಮುಸ್ಲಿಂ ಆರೋಪಿ ಫಯಾನ್ ಎಂಬಾತ ಕ್ಷುಲ್ಲಕ ಕಾರಣಕ್ಕೆ ತಲೆಗೆ ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವ ಘಟನೆ ಇಂದು ಮಧ್ಯಾಹ್ನ ಹಿಂಡಲಗಾ ಜೈಲಿನ ಅಂಧೇರಿ ವಾರ್ಡದಲ್ಲಿ ನಡೆದಿದೆ.
ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಸುರೇಶ್ ಬೆಳಗಾವಿ (32) ಈತ ಜೈಲಿನ ಸಿಬ್ಬಂದಿಗಳೊಂದಿಗೆ ವಾಚ್ಮನ್ ಕೆಲಸ ಮಾಡುತ್ತಿದ್ದು, ಈ ಸಮಯದ ವೇಳೆ ಪಯಾನ್ ಎಂಬಾತನಿಗೆ ಸರಿಯಾಗಿ ಇರುವಂತೆ ಹೇಳಿದಾಗ ಆತ ಈತನ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಮಂಗಳೂರಿನ ಮುಸ್ಲಿಂ ಯುವಕ ಪಯಾನ್ ಸೆಕ್ಷನ್ ಐಪಿಸಿ 38೦ ಅಡಿಯಲ್ಲಿ ಬಂಧೀತನಾಗಿ ಕಾರವಾರ ಜೈಲು ಸೇರಿದ್ದ ಎರಡು ತಿಂಗಳ ಹಿಂದಷ್ಟೇ ಕಾರ್ವಾರ ಜೈಲಿನ ಸಿಬ್ಬಂದಿ ಹವಾಲ್ದಾರ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಆತನನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈಗ ಮತ್ತೆ ಎರಡು ತಿಂಗಳೊಳಗೆ ಆತ ಇಲ್ಲಿ ಮತ್ತೊಂದು ಅಪರಾಧ ಕೃತ್ಯ ಎಸಗಿದ್ದಾನೆ.
ಹಿಂಡಲಗಾ ಜೈಲಿನಲ್ಲಿ ಎಲ್ಲವೂ ಹಣದ ಮೇಲೆ ನಡೆಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಜೈಲಿನಲ್ಲಿಯೂ ಅಪರಾಧಿಗಳಿಗೆ ರಾಜಾತಿಥ್ಯ ಸಿಗುತ್ತಿದ್ದು ಹಣಕೊಡದವರಿಗೆ ಸುರಕ್ಷತೆ ಇಲ್ಲದಂತಾಗಿದೆ.
ಕ್ರಮ ಕೈಗೊಳ್ಳುತ್ತಾರೆ ಕಡಕ್ ಅಧಿಕಾರಿ..?
ಸದಾ ಕೆಟ್ಟ ಕೆಲಸಗಳಿಂದ ಸುದ್ದಿಯಲ್ಲಿರುವ ಹಿಂಡಲಗಾ ಜೈಲಿನಲ್ಲಿ ಇಂತಹ ಘಟನೆಗಳು ತಿಂಗಳಿನಲ್ಲಿ ಒಂದೆರಡು ನಡೆದೆ ನಡೆಯುತ್ತವೆ. ಇವುಗಳನ್ನು ಮಟ್ಟ ಹಾಕಲು ಹಿರಿಯ ಅಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.


