ಬೆಳಗಾವಿ :
ಸೋಲಾಪುರ ಗ್ರಾಮದ ಬಳಿ ಸಂಕೇಶ್ವರ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಗರ್ ಮಾನೆ ಎಂಬ ಯುವ ನ್ಯಾಯವಾದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಪೊಲೀಸರು ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯವಾದಿಯ ಸ್ವಗ್ರಾಮ ಸೊಲ್ಲಾಪುರ ಗೇಟ್ ಬಳಿ 10 ಜನ ಈ ಕೃತ್ಯ ಎಸಗಿದ್ದಾರೆ. ಸಂಕೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ತೀವ್ರಗೊಳಿಸಿದ್ದಾರೆ.
ನ್ಯಾಯವಾದಿ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ ಪ್ರಕರಣ ಖಂಡಿಸಿ ನ್ಯಾಯವಾದಿಗಳು ಇಂದು ನ್ಯಾಯಾಲಯದ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.