- ಕರೆಂಟ್ ನಲ್ಲಿ ಬೇಕಾಬಿಟ್ಟಿ ಕಡಿತ ; ಕಮರುತ್ತಿರುವ ರೈತರ ಬೆಳೆಗಳು..!
ಹೆಸ್ಕಾಂ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ನವಲಗಟ್ಟಿ ಜನ.
ಬೈಲಹೊಂಗಲ: ಕೃಷಿ ಪಂಪಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳುವಂತೆ ತಾಲೂಕಿನ ನಾವಲಗಟ್ಟಿ ಗ್ರಾಮಸ್ಥರು ಹೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೃಷಿ ಪಂಪಸೆಟ್ ಗಳಿಗೆ ಪೂರೈಯಿಸುತ್ತಿರುವ ವಿದ್ಯುತ್ ನಲ್ಲಿ ಬೇಕಾಬಿಟ್ಟಿ ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಬೆಳೆಗಳಿಗೆ ಸಮರ್ಪಕ ನೀರಿಲ್ಲದೆ ಕಮರುತ್ತಿವೆ. ಈ ಕುರಿತು ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರವಾಗಿ ಕಡಿತಮಾಡದೆ ಸತತ ವಿದ್ಯುತ್ ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೆದ್ದಾರಿ ತಡೆದು ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯ ಶಿವಾನಂದ ಕಲ್ಲೂರ, ಶಂಕರ ಕಲ್ಲೂರ, ಸಿದ್ರಾಮಯ್ಯ ವಿರಕ್ತಮಠ, ಸಿದ್ದಯ್ಯ ಹಿರೇಮಠ, ಬಸವರಾಜ ಪಾತ್ರೋಟ, ಶಂಕರ ಹುದಲಿ, ಅರ್ಜುನ ಹುದಲಿ, ಅಡಿವೆಪ್ಪ ನೇಗಿನಹಾಳ,ಶಿವಾನಂದ ತಿಗಡಿ , ಸದಾಶಿವ ತಿಗಡಿ ಸೇರಿದಂತೆ ಪುಲಾರಕೊಪ್ಪ, ಹಿರೇಮೆಳೆ ಗ್ರಾಮದ ರೈತರು ಇದ್ದರು.