ಇಂದು ಅತ್ಯಾಧುನಿಕ ಯುಗ. ಇಂದಿನ ಜನಸಾಮಾನ್ಯರು ಹಾಗೂ ಯುವ ಪೀಳಿಗೆ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳನ್ನೇ ಅವಲಂಬಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗವಾಗಿ ಜನಸಾಮಾನ್ಯರನ್ನು ಮುಟ್ಟುತ್ತಿವೆ. ಇಂದು ಎಲ್ಲಾ ಕೆಲಸಗಳು ಸಾಮಾಜಿಕ ಜಾಲತಾಣಗಳ ಮೂಲಕವೇ ಅನಿವಾರ್ಯವಾಗಿದೆ. ಅಂತಹ ಸಂದರ್ಭದಲ್ಲಿ ಅದು ಒಂದು ಕ್ಷಣ ಸ್ಥಗಿತವಾದರೆ ಹೇಗಾದೀತು ? ಆದರೆ ಮಂಗಳವಾರ ರಾತ್ರಿ ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿ ಆಯಿತು. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ತೆಗಿತಕೊಂಡಿದ್ದರಿಂದ ಜನರು ಕಂಗಾಲಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು.
ನವದೆಹಲಿ: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಬಳಕೆದಾರರಿಗೆ ಆ್ಯಂಡ್ರಾಯ್ಡ್, ಐಒಎಸ್ ಹಾಗೂ ಪಿಸಿಯಲ್ಲಿ ಬಳಸಲು ಸಮಸ್ಯೆ ಎದುರಾಗಿದೆ.
ಜಗತ್ತಿನಾದ್ಯಂತ ರಾತ್ರಿ 9:00 ಗಂಟೆ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ ಎಕ್ಸ್ (ಈ ಹಿಂದೆ 336) #Zuckerberg, #facebookDown, #InstagramDown ಆಗುತ್ತಿದೆ.
ಜಗತ್ತಿನಾದ್ಯಂತ ಸುಮಾರು 200ಕೋಟಿಗೂ ಅಧಿಕ ಫೇಸ್ ಬುಕ್ ಬಳಕೆದಾರರಿದ್ದು, ಇಷ್ಟು ಪ್ರಸಿದ್ದಿ ಪಡೆದುಕೊಂಡಿರುವ ಆ್ಯಪ್ಗಳು ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ. ಏಕಾಏಕಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ಇದರಿಂದ ಬಳಕೆದಾರರು ಕಂಗಾಲಾಗಿದ್ದಾರೆ.