ಅಕ್ರಮ ಅಕ್ಕಿ ಸಾಗಾಟ, ಆಹಾರ ಇಲಾಖೆಯಿಂದ FIR
112 ಹಾಗೂ ಆಹಾರ ಇಲಾಖೆಗೆ ಮಾಹಿತಿ ಕೊಟ್ಟ ಪತ್ರಕರ್ತರ ಮೇಲೆ ಸುಲಿಗೆ ಕೇಸ್…!
ಮಧ್ಯರಾತ್ರಿ ನಡೆದ ಹೈಡ್ರಾಮಾ ಏನು..?
ಬೆಳಗಾವಿ : ಸರಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸುತ್ತಿರುವ ಅಕ್ಕಿಯನ್ನು ಕಾನೂನು ಬಾಹಿರವಾಗಿ ಶೇಖರಣೆ ಮಾಡಿಕೊಂಡು ಅಕ್ರಮ ಸಾಗಾಟ ಮಾಡುತ್ತಿದ್ದ ಖದಿಮ ಲಾರಿಯವನನ್ನು ಹಿಡಿದು ಪೊಲೀಸ್ ಇಲಾಖೆಯ ಸಹಾಯವಾಣಿ 112 ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಅವರಿಗೆ ಒಪ್ಪಿಸಿದ್ದ ಪತ್ರಕರ್ತರ ಮೇಲೆ ಪೊಲೀಸರು ಪ್ರತಿದೂರು ದಾಖಲು ಮಾಡಿ ಪತ್ರಕರ್ತರನ್ನು ಹೆದರಿಸುವ ಪ್ರಯತ್ನಕ್ಕೆ ಮುಂದಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ಹಿರೇಬಾಗೇವಾಡಿ ಪೊಲೀಸ ಠಾಣೆಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಬಾಗೇವಾಡಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಖದಿಮರು ಪಡಿತರ ಅಕ್ರಮ ಸಾಗಾಟ ನಡೆಸುತ್ತಿರುವುದನ್ನು ಕಂಡ ಬೆಳಗಾವಿ ಪತ್ರಕರ್ತರು ಅವರನ್ನು ಪ್ರಶ್ನಿಸಿ, ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗ ವಶಕ್ಕೆ ಪತ್ರಕರ್ತರು ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತಕ್ಷಣ ಘಟನೆ ಸ್ಥಳಕ್ಕೆ ಬಂದ ಕಾಕತಿ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಆಹಾರ ನಿರೀಕ್ಷಕ ಸತೀಶ ರಾಮು ಬೆನಗಿ ಪರಿಶೀಲನೆ ನಡೆಸಿದಾದ ಅಕ್ರಮ ಅಕ್ಕಿ ಎಂದು ಖಚಿತವಾದ ಮೇಲೆ ಸಾಗಾಟಗಾರರ ಮೇಲೆ ದೂರು ದಾಖಲಿಸಿದ್ದಾರೆ.
ನಂತರ ಎರಡು ವಾಹನಗಳಲ್ಲಿದ್ದ ಸುಮಾರು ಲಕ್ಷ ರೂ ಮೌಲ್ಯದ 74 ಅಕ್ಕಿ ತುಂಬಿದ ಚೀಲಗಳನ್ನು ಆಹಾರ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
ಸಾಗಾಟ ದಂಧೆಯಲ್ಲಿ ಭಾಗಿಯಾಗಿದ್ದ ಕೊಲ್ಹಾಪುರದ ಸದಾನಂದ ಲಕ್ಷ್ಮಣ ಪಾಟೀಲ ಹಾಗೂ ಬೈಲಹೊಂಗಲ ತಾಲೂಕಿನ ಮರಕಟ್ಟಿ ಗ್ರಾಮದ ಯಲ್ಲಪ್ಪಾ ಭಿಮಶೇಪ್ಪಾ ಬಂಡಗಿ ಎಂಬುವರ ಮೇಲೆ Essential commodities act-1955 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹಿರೇಬಾಗೇವಾಡಿ ಪಿಎಸ್ಐ ಅವಿನಾಶ್ ಯರಗೊಪ್ಪ ತನಿಖೆ ಕೈಗೊಂಡಿದ್ದಾರೆ.
ಇದರಿಂದ ರೋಷಗೊಂಡ ಸಾಗಾಟಗಾರರ ಗುಂಪಿನವರಾದ ವಡಗಾವಿ ವಿಷ್ಣುಗಲ್ಲಿಯ ಪ್ರಶಾಂತ ಪ್ರಕಾಶ ಅಜರೇಕರ(೩೫) ಎಂಬಾತ ಅಕ್ರಮ ಅಕ್ಕಿ ಸಾಗಾಣೆಯನ್ನು ಹಿಡಿದು ಪೊಲೀಸ ಹಾಗೂ ಇಲಾಖೆ ವಶಕ್ಕೆ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಕರ್ತರ ಮೇಲೆ ಲಕ್ಷ ರೂ ಸುಲಿಗೆ ಮಾಡಿರುವುದಾಗಿ ಹೇಳಿ ಹಿರೇಬಾಗೆವಾಡಿ ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ.
ಸರಕಾರ ನೀಡಿರುವ ದೂರು ಹಾಗೂ ವಾಹನ ಹಿಡಿದುಕೊಟ್ಟ ಪತ್ರಕರ್ತರ ವಿರುದ್ಧ ನೀಡಿರುವ ಪ್ರತಿ( ಕೌಂಟರ್ ಕೇಸ್)ದೂರು ದಾಖಲಿಸಿಕೊಂಡಿರುವ ಬಾಗೇವಾಡಿ ಪೊಲೀಸರು ಎರಡೂ ತನಿಖೆ ನಡೆಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆಗಳಲ್ಲಿ ದೂರುದಾರರಿಗಿಂತ ಆರೋಪಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಈಗ ಮಾಹಿತಿ ನೀಡುತ್ತಿರುವ ಪತ್ರಕರ್ತರ ಮೇಲೂ ಪ್ರಕರಣ ದಾಖಲಿಸುವಲ್ಲಿ ಪೊಲೀಸರು ಮುಂದಾಗಿರುವುದು ಖದಿಮರಿಗೆ ಮತ್ತಷ್ಟು ಅಕ್ರಮ ದಂಧೆ ಮಾಡುವಂತೆ ಪ್ರೋತ್ಸಾಹ ನೀಡಿದಂತಾಗಿದೆ.