ಸಿರಸಿ :
ಕುಡಿಯಲು ನೀರು ಕೇಳುವ ನೆಪದಲ್ಲಿ ಕೆನರಾ ಮಾಜಿ ಸಂಸದ ದೇವರಾಯ ನಾಯ್ಕ ಅವರ ಪತ್ನಿಯ ಸರವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಬುಧವಾರ ಮಧ್ಯಾನ ಸಿರಸಿಯ ಯಲ್ಲಾಪುರನಾಕಾದಲ್ಲಿರುವ ಮನೆಯಲ್ಲಿ ದೇವರಾಯ ನಾಯ್ಕ ಅವರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದರು. ಆಗ ಅಪರಿಚಿತ ವ್ಯಕ್ತಿಯು ಇವರ ಮನೆಗೆ ಬಂದಿದ್ದಾನೆ. ಗೀತಾ ಅವರು ನೀರು ಕೊಡಲು ಮುಂದಾದಾಗ ಅವರ ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಅಂದಾಜು 3,00,000 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನದ ಸರ ಇದಾಗಿದ್ದು ಅವರ ಮಗ ನಾಗರಾಜ ನಾಯ್ಕ ಶಿರಸಿ ಪೊಲೀಸರಿಗೆ ದೂರು ನೀಡಿದ್ದಾರೆ.