ಕಲಬುರಗಿ : ಕಲಬುರಗಿಯಲ್ಲಿ ಮತ್ತೊಂದು ದೊಡ್ಡ ಹನಿಟ್ರಾಪ್ ಪ್ರಕರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ನ ಮಾಜಿ ಸಚಿವರೊಬ್ಬರಿಗೆ ಕಾಂಗ್ರೆಸ್ನ ಮಹಿಳಾ ನಾಯಕಿಯೇ ಹನಿಟ್ರಾಪ್ ಮಾಡಿ ಕೊನೆಗೆ ಪೊಲೀಸರಿಗೆ ಲಾಕ್ ಆಗಿರುವ ಘಟನೆ ನಡೆದಿದೆ.
ನಲಪಾಡ್ ಬ್ರಿಗೇಡ್ ಕಲಬುರಗಿ ಅಧ್ಯಕ್ಷೆ ಮಂಜುಳಾ ಪಾಟೀಲ ಜಿಲ್ಲೆಯ ಮಾಜಿ ಸಚಿವರಿಗೆ 20 ಲಕ್ಷ ರೂಪಾಯಿಗಾಗಿ ಹನಿಟ್ರಾಪ್ ಮಾಡಿದ್ದಾರೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಸಚಿವರ ಪುತ್ರನಿಗೆ ವಾಟ್ಸಪ್ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ.
ಹನಿ `ಲೇಡಿ’ ಲಾಕ್ ಹಾಗಿದ್ದು ಹೇಗೆ?
ತಂದೆಯ ಹನಿಟ್ರಾಪ್ ಪ್ರಕರಣ ಕೇಳಿ ಮಂಜುಳಾಗೆ ಖೆಡ್ಡಾ ತೊಡಿದ ಮಾಜಿ ಸಚಿವರ ಪುತ್ರ 20 ಲಕ್ಷ ಆಗಲ್ಲ ಕಡಿಮೆ ಮಾಡಿ ಅಂತ ಕೇಳಿದ್ದಾರೆ. ಅದಕ್ಕೆ 20 ಲಕ್ಷದಲ್ಲಿ ನಯಾ ಪೈಸೆ ಸಹ ಕಡಿಮೆ ಆಗಲ್ಲ ಅಂತ ಮಂಜುಳಾ ಹೇಳಿದ್ದಾಳೆ. ಸರಿ ಆಯ್ತು ಅಂತ ಒಪ್ಪಿಕೊಂಡ ಮೇಲೆ ಆ ಹಣ ಪಡೆಯಲು ಮಂಜುಳಾ ತನ್ನ ಪತಿಯೊಂದಿಗೆ ಬೆಂಗಳೂರಿಗೆ ತೆರಳಿದ್ದಾಳೆ. ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಹಣ ಪಡೆಯುವಾಗ ಪತಿ-ಪತ್ನಿ ಇಬ್ಬರೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಆಕೆಯನ್ನು ಬಂಧಿಸಿದ ಬಳಿಕ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಆಕೆಯನ್ನು 8 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ.