
ಬೆಳಗಾವಿ : ಪ್ರತಿಯೊಬ್ಬರೂ ಕನ್ನಡ ನಾಡಿನ ಹಿರಿಮೆ-ಗರಿಮೆ ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಎ ಕಾಲೇಜಿನ ಉಪ ಪ್ರಾಚಾರ್ಯ ಸಿ.ಪಿ.ದೇವರುಷಿ ಹೇಳಿದರು.
ನಗರದ ಕೆಎಲ್ ಇ ಸಂಸ್ಥೆಯ ಜಿಎ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು 1956 ರ ನವೆಂಬರ್ 1 ರಂದು ಮೈಸೂರು ಹೆಸರಿನಲ್ಲಿ ಮತ್ತೆ ಒಂದು ರಾಜ್ಯವಾಗಿ ಒಗ್ಗೂಡಿತು. 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ಎಂದು ಹೆಸರು ಪಡೆಯಿತು ಎಂದು ಅವರು ತಿಳಿಸಿದರು.
ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಎಂ.ಎಸ್. ಬಳಿಗಾರ,
ಪ್ರಾಚಾರ್ಯ ಡಿ.ಎಸ್.ಪವಾರ
ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್ .ಎಸ್. ಹಲವಾಯಿ ರಾಜ್ಯೋತ್ಸವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ಲಕ್ಷ್ಮೀ ಖಾನಪ್ಪನವರ, ಸ್ನೇಹಾ ಈಟಿ, ಗೌರಿ ಕೌಲದ, ಸರೋಜಿನಿ ಗಸ್ತಿ ಅವರು ಕರ್ನಾಟಕ ರಾಜ್ಯದ ವೈಶಿಷ್ಟ್ಯಗಳನ್ನು ಬಹಳ ಸುಂದರವಾಗಿ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿ ಎಲ್ಲರ ಮನ ಗೆದ್ದರು.
9ನೇ ತರಗತಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಿಯುಸಿ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು.ಸೀಮಾ ಕೋರೆ ಸ್ವಾಗತಿಸಿದರು. ಶಿಕ್ಷಕಿ ಪಿ.ಎಸ್.ಸುಣಗಾರ ನಿರೂಪಿಸಿದರು. ಶಿಕ್ಷಕ ಆರ್.ಎಸ್.ಮುಳಕೂರ ವಂದಿಸಿದರು.
ಪ್ರತಿಯೊಬ್ಬರೂ ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಬೆಳಗಾವಿ ಜಿ.ಎ. ಪ್ರೌಢಶಾಲೆಯಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ


