ಪುತ್ತೂರು: ಚಪ್ಪಲಿ ಕದಿಯುತ್ತಾರೆ ಎಂದು ಚಪ್ಪಲಿಗೆ ಬೀಗ ಹಾಕುವುದನ್ನು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯಾಗಿ ಚಿತ್ರಣ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ ಮತ್ತು ಇದನ್ನು ನೋಡಿ ನಕ್ಕವರೂ ಇದ್ದಾರೆ..ಹೀಗೂ ಇದ್ದಾರ ಎಂದು ಮೂದಲಿಸಿದವರೂ ನಮ್ಮೊಳಗಿದ್ದಾರೆ.ಚಪ್ಪಲಿಗೆ ಬೀಗ ಹಾಕುವುದು ತಮಾಷೆ,ಇದು ನೈಜ ಸಂಗತಿ ಅಲ್ಲ ಎಂದು ಎಲ್ಲರೂನಂಬಿದ್ದರು. ಆದರೆ ಈ ಚಿತ್ರದಲ್ಲಿ ಕಾಣುವ ದೃಶ್ಯ ಪುತ್ತೂರಿನದ್ದು. ಪುತ್ತೂರಿನ ಸಭಾಭವನವೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಸಭಾಂಗಣದ ಒಳಗೆ ಹೋದವರೆಲ್ಲರೂ ಚಪ್ಪಲಿ ಹೊರಗಿಟ್ಟು ತೆರಳಿದ್ದರು. ಎಲ್ಲರೂ ಸಭಾ ಭವನದ ಪ್ರವೇಶ ದ್ವಾರದ ಬಳಿ ಚಪ್ಪಲಿ ಇಟ್ಟು ತೆರಳಿದ್ದರು. ಆದರೆ ಇದೇ ಸಭಾಂಗಣದ ಸ್ವಲ್ಪ ದೂರದಲ್ಲಿ ಬೀಗ ಹಾಕಿದ ಚಪ್ಪಲಿಯನ್ನು ಕಂಡು ಒಮ್ಮೆಲೆ ಆಶ್ಚರ್ಯವಾಯಿತು. ಇದು ಸತ್ಯವೋ ಎಂದು ನನ್ನನ್ನು ನಾನೇ ಚಿವುಟಿ ನೋಡಿದೆ… ಈ ಸಂಗತಿ ಸತ್ಯವೇ ಆಗಿತ್ತು. ಹಳೆಯ ಎರಡು ಚಪ್ಪಲಿಗಳ ಬಾರನ್ನು ಜೋಡಿಸಿ ಹಳೆಯ ಬೀಗವನ್ನು ಜಡಿಯಲಾಗಿತ್ತು. ಇದು ಚಪ್ಪಲಿ ಕದಿಯದಿರಲಿ ಎಂಬ ಉದ್ದೇಶದಿಂದ ಆ ವ್ಯಕ್ತಿ ಬೀಗ ಹಾಕಿದ್ದಂತೆ.ಹಲವು ಬಾರಿ ಇವರ ಚಪ್ಪಲಿ ಕಳವಾದ ಬಳಿಕ ಬೀಗ ಹಾಕುವ ತೀರ್ಮಾನಕ್ಕೆ ಬಂದಿದ್ರಂತೆ…


