ಮೂಡಲಗಿ: ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಗೆ ಇಡೀ ರಾಜ್ಯದಾದ್ಯಂತ ಅದರಲ್ಲೂ ಬೆಳಗಾವಿ ಜಿಲ್ಲೆಗೆ ಅನುದಾನಕ್ಕಾಗಿ ಬಹಳ ಬೇಡಿಕೆಯಿದ್ದು ಅದರಲ್ಲೂ ವಿಶೇಷವಾಗಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಅನುದಾನವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಮೂಡಲಗಿ ಪುರಸಭೆಯವರು ನನ್ನ ಅನುದಾನವನ್ನು ಉಪಯೋಗಿಸಿಕೊಳುವಲ್ಲಿ ನಿರಾಸಕ್ತಿ ತೋರಿದ್ದು, ಓಪನ್ ಜಿಮ್ ಮತ್ತು ಬಸ್ ಪ್ರಯಾಣಿಕರ ತಂಗುದಾನಗಳ ಬೇಡಿಕೆಗಳಿಗೆ ಸ್ಥಳ ಒದಗಿಸುವಲ್ಲಿ ವಿಫಲರಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಮೂಡಲಗಿ ತಾಲೂಕಿನ ಜನ ಈ ರೀತಿಯಾದ ಆಡಳಿತ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕಾಗದ ಮತ್ತು ಚರ್ಚೆ ಮಾಡಬೇಕಾದ ಅಗತ್ಯವಿದೆೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಜು-19 ರಂದು ಅರಭಾವಿ ವಿಧಾನಸಭಾ ಮತಕ್ಷೇತ್ರದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾನ ಮತ್ತು ಸಮುದಾಯ ಭವನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯಾಧ್ಯಂತ ಎಲ್ಲಾ ಕಡೆ ಸಂಸದರ ಅನುದಾನವನ್ನು ಸಾಧ್ಯವಿದಷ್ಟು ಎಲ್ಲ ಕಡೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ನಾನು ಅನುದಾನವನ್ನು ನೀಡುತ್ತಿದ್ದು ಕೇವಲ ಸಂಸದರ ನಿಧಿ ಅಷ್ಟೇ ಅಲ್ಲದೇ ಬೇರೆ ಬೇರೆ ಇಲಾಖೆಗಳಿಂದ, ಬೇರೆ ಬೇರೆ ಸಂಸ್ಥೆಗಳಿ0ದ ವಿಶೇಷ ಅನುದಾನವನ್ನು ತಂದು ನನ್ನ ಸೇವಾಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ. ಆದರೆ ಕೆಲವು ವಿಘ್ನ ಸಂತೋಷಿ ಜನ ಅಧಿಕಾರಿಗಳ ಮೂಲಕ ಈ ರೀತಿಯಾದ ಅಡೆ ತಡೆಗಳನ್ನು ಒಡ್ಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅಭಿವೃದ್ದಿ ಕಾರ್ಯಗಳಲ್ಲಿ ಸ್ಪರ್ಧೆ ಇರಬೇಕು ಹೊರತು ಅಡೆತಡೆಗಳನ್ನು ಒಡ್ಡುವುದರಲ್ಲಿ ಅಲ್ಲ ಎಂದು ವಿರೋಧಿಗಳಿಗೆ ಕಿವಿ ಮಾತು ಹೇಳಿದರು.
ಈ ಮೂರು ಗ್ರಾಮಗಳಲ್ಲಿ ನಡೆದ ಅಡಿಗಲ್ಲು ಪೂಜಾ ಕಾರ್ಯಕ್ರಮದಲ್ಲಿ ಸಿದ್ರಾಮ ಕುಳ್ಳೂರ, ಸುನೀಲ ಈರೇಶನವರ, ಕಲ್ಲಪ್ಪ ಪಾಗಾದ, ವಿಠ್ಠಲ ಸುಣಧೋಳಿ, ಬಸವಣ್ಣಿ ತೆಳಗಡೆ, ದಶರಥ ಪಾಟೀಲ, ಬಸಪ್ಪ ಪಾಗಾದ, ಅಡಿವೆಪ್ಪ ಬಿಲಕುಂದಿ, ಅಲ್ಲಯ್ಯ ಪೂಜೇರಿ, ಸದಾ ಗುದಗಗೋಳ, ಲಗಮಣ್ಣ ಕುಳ್ಳೂರ, ಬಸವರಾಜ ಕೊಟಗಿ, ಮಾರುತಿ ಮೆಳವಂಕಿ, ಸತ್ತೆಪ್ಪ ಕಳಜಕನ್ನವರ, ಪ್ರಕಾಶ ಜಾಗನೂರ, ಲಗಮಣ್ಣ ಕಳಸಣ್ಣವರ, ಶಂಕರ ಮುದೆಪ್ಪಗೋಳ, ಗುರಸಿದ್ಧ ಪೊಟಿ, ಮುದಕಪ್ಪ ಈರೇಶನವರ, ಪ್ರಕಾಶ ಕರೆಪ್ಪಗೋಳ, ಮುದಕಪ್ಪ ಬೆಳವಿ, ಭೀಮಪ್ಪ ಕೌಜಲಗಿ, ಭೀಮಶೆಪ್ಪಾ ಕರೆಪ್ಪಗೋಳ, ಬಸವರಾಜ ಬೆಳವಿ, ಭೀಮಶೆಪ್ಪಾ ಚೆನ್ನಬಸಪ್ಪಗೋಳ, ದೇವಪ್ಪ ಕರಿಗಾರ, ಬಸವಣ್ಣಿ ಸಂಪಗಾAವ, ಸಂಜೀವ ತಿಪ್ಪವ್ವಗೋಳ, ಬಸಲಿಂಗ ತೆಳಗಡೆ, ರಾಮಪ್ಪ ಬೆನವಾಡ, ಬಸಪ್ಪ ಮಾನಗಾಂವಿ, ರಮೇಶ ಸಂಪಗಾ0ವಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಗಣೇಶ ತೋಟಗಂಟಿ, ನಾರಾಯಣ ಸರ್ವಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.