ಮೂಡಲಗಿ : ನಮ್ಮ ದಿನ ನಿತ್ಯದ ಅವಧಿಯಲ್ಲಿ ಯೋಗಕ್ಕಾಗಿ ಒಂದು ಗಂಟೆ ಮೀಸಲಿಟ್ಟರೆ ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಿ ರೋಗಗಳನ್ನು ದೂರವಾಗಿಸಲು ಯೋಗವನ್ನು ಪ್ರತಿಯೊಬ್ಬರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಮೇ 24 ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೇಂದ್ರ ಆಯುಷ್ಯ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ, ಕಲ್ಲೋಳಿಯ ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ ಸಂಸ್ಥೆ, ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ ಹಾಗೂ ತಾಲೂಕಾಡಳಿತ ಮೂಡಲಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ-2025 ರ ಅಂಗವಾಗಿ ಯೋಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಒತ್ತಡದ ಜೀವನದಲ್ಲಿ ಆಹಾರ ಕಲಬೆರಕೆ, ವಾಯ್ಯು ಮಾಲಿನ್ಯ, ಪಾಶ್ಚಿಮಾತ್ಯದ ಅನುಕರಣೆ, ವ್ಯಾಮಾಮದ ಕೊರತೆಯಿಂದ ದೇಹವು ನಿತ್ಯ ದಣಿಯುತ್ತಿದೆ. ಇದರಿಂದ ಮುಕ್ತರಾಗಬೇಕಾದರೆ ಯೋಗದ ಅವಶ್ಯಕತೆ ಇದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಬರುವ ಜೂನ 21ರವರೆಗೆ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಎಲ್ಲರೂ ಸೇರಿ ಇಡಿ ತಾಲೂಕಿನಾದ್ಯಂತ ಪ್ರತಿ ಗ್ರಾಮ ಪಂಚಾಯತ ಹಾಗೂ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಜೂನ್ 21 ರಂದು ಮೂಡಲಗಿಯಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಜಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಭಾರತವು ಸೇರಿದಂತೆ ವಿಶ್ವದಾಧ್ಯಂತ 150 ಕೋಟಿಗೂ ಅಧಿಕ ಜನರಿಗೆ ಎಲ್ಲ ಹಂತಗಳಲ್ಲಿ ಯೋಗವನ್ನು ತಲುಪುವಂತೆ ಮಾಡಿದೆ. ಪ್ರತಿ ವರ್ಷವು ಒಂದೊAದು ಧ್ಯೇಯವಾಕ್ಯದೊಂದಿಗೆ ಯೋಗಾಚರಣೆ ನಡೆದಿದೆ.. ಈ ವರ್ಷವು “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ವಾಕ್ಯದೊಂದಿಗೆ ಜೂನ್-21 ರಂದು ಯೋಗ ದಿವಸವನ್ನು ಆಚರಿಸಲಾಗುತ್ತದೆ. ಇದು ಯೋಗದ ಮೂಲಕ ಜಾಗತಿಕ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ ಅವರು ಮಾತನಾಡಿ,ನಮ್ಮ ಮೂಡಲಗಿ ಶಿಕ್ಷಣ ಸಂಸ್ಥೆಯಿAದ ಪ್ರತಿ ವರ್ಷ ಯೋಗ ದಿನವನ್ನು ಆಚರಿಸುತ್ತೇವೆ ಇನ್ನೂ ಬರುವ ಜೂನ್-21 ರ ಯೋಗ ದಿವಸವನ್ನು ಇಡಿ ತಾಲೂಕಿನ ಜನರು ಸೇರಿ ಆಚರಿಸೋಣ ಎಂದರು.
ಯೋಗ ಪಟು,ಚಿನ್ನದ ಪದಕ ಪಡೆದ ಕುಮಾರಿ ನಿರ್ಮಲಾ ಕೊಡ್ಲಿಕರ ಯೋಗ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಯೋಗ ಪಟು ಸಾಧನೆಯನ್ನು ಶ್ಲಾಘಿಸಿ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಶಿವಾನಂದ ಬಬಲಿ, ತಾಲೂಕ ಪಂಚಾಯತ ಕಾರ್ಯನಿವಾಹಕ ಅಧಿಕಾರಿ ಎಫ್. ಜಿ. ಚಿನ್ನನವರ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ತಾಲೂಕಾ ಆರೋಗ್ಯಧಿಕಾರಿ ಎಂ.ಎಚ್. ಕೊಪ್ಪದ, ಶಿಶು ಅಭಿವೃದ್ದಿ ಅಧಿಕಾರಿ ಯಲ್ಲಪ್ಪ ಗದಾಡಿ, ಸಂಸ್ಥೆಯ ಉಪಾಧ್ಯಕ್ಷ ರವಿ ಸೋನವಾಲಕರ, ವಿಜಯ ಸೋನವಾಲಕರ, ಸುಭಾಸ ಸೋನವಾಲಕರ, ಪ್ರಮುಖರಾದ ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಈರಪ್ಪ ಢವಳೇಶ್ವರ, ಈಶ್ವರ ಮುರಗೋಡ, ಮಹಾನಿಂಗ ಒಂಟಗೂಡೆ, ಡಾ. ಬಿ.ಎಂ. ಪಾಲಭಾಂವಿ, ಎಸ್. ಎಲ್ ಚಿತ್ರಗಾರ, ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ ಸೇರಿದಂತೆ ಮಂಜುನಾಥ ಹಾಗೂ ಕರುನಾಡು ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಯೋಗಾಸಕ್ತರು ಭಾಗವಹಿಸಿದ್ದರು.
ದೈಹಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಮ್ ಕೆ ಕಂಕಣವಾಡಿ ಸ್ವಾಗತಿಸಿದರು, ನಾಗನೂರಿನ ಆಯುಷ್ಯ ವೈದ್ಯ ಡಾ ಭೂಷಣ ಉಪಾಧ್ಯಯ ಪ್ರಸ್ತಾವಿಕವಾಗಿ ಮಾತನಾಡಿದರು, ಪ್ರೋ ಎಲ್ ಪಿ ಹಿಡಕಲ್ ನಿರೂಪಿಸಿದರು, ಪ್ರಾಚಾರ್ಯ ಜಿ ವ್ಹಿ ನಾಗರಾಜ ವಂದಿಸಿದರು,