ಮೂಡಲಗಿ:ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೈನಿಕರು ಮತ್ತು ಅವರ ಕುಟುಂಬಗಳಿಗೆ ರಿಯಾಯತಿ ದರದಲ್ಲಿ ಅಗತ್ಯ ಸರಕುಗಳು ಸುಲಭವಾಗಿ ದೊರೆಯುವಂತಾಗಲು ಗೋಕಾಕನಲ್ಲಿ ಸಿಎಸ್ಡಿ ಆರ್ಮಿ ಕ್ಯಾಂಟೀನ್ ಸ್ಥಾಪನೆ ಮಾಡಬೇಕೆಂದು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಭೇಟಿಯಾಗಿ ಅವರೊಂದಿಗೆ ವಿಸ್ತೃತ ಚರ್ಚೆ ಮಾಡಿ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿ ಸಚಿವರು ಸರ್ಕಾರದ ನಿಯಮಾವಳಿಗಳ ಪ್ರಕಾರ ಗೋಕಾಕನಲ್ಲಿ ಸಿಎಸ್ಡಿ ಆರ್ಮಿ ಕ್ಯಾಂಟೀನ್ ಸ್ಥಾಪನೆಗೆ ಪರಿಶೀಲಿಸಲಾಗುವುದು. ನಿಯಮಾವಳಿಗೆ ಒಳಪಟ್ಟಿದ್ದರೆ ಆದಷ್ಟು ಬೇಗ ಕ್ಯಾಂಟಿನ್ ಪ್ರಾರಂಭಿಸಲು ನಿರ್ಣಯಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಈರಣ್ಣ ಕಡಾಡಿ ತಿಳಿಸಿದ್ದಾರೆ.