ಮೂಡಲಗಿ :
ಕೇಂದ್ರ ಸರ್ಕಾರ ಬೆಳಗಾವಿ ಜಿಲ್ಲೆಗೆ 100 ಬೆಡ್ ಇ.ಎಸ್.ಐ.ಸಿ (ESIC) ಆಸ್ಪತ್ರೆ ಮಂಜೂರು ಮಾಡಿದ್ದು, ಆಸ್ಪತ್ರೆ ಕಟ್ಟಡದ ಸ್ಥಳ ಆಯ್ಕೆ ಮಾಡುವುದು ಹಾಗೂ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಮಾಡುವ ಕುರಿತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಶುಕ್ರವಾರ ಅ-27 ರಂದು ಬೆಂಗಳೂರಿನಲ್ಲಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಾದ ಇ.ಎಸ್.ಐ.ಸಿ ಪ್ರಾದೇಶಿಕ ನಿರ್ದೇಶಕ ರೇಣುಕಾ ಪ್ರಸಾದ, ಇ.ಎಸ್.ಐ.ಎಸ್ ರಾಜ್ಯ ವಲಯ ನಿರ್ದೇಶಕ ವರದರಾಜು ಹಾಗೂ ಕಾರ್ಯನಿರ್ವಾಹಕ ಅಭಿಯಂತರಾದ ವಿನೋದ ಕಾತವಾರ ಅವರೊಂದಿಗೆ ಸುದೀರ್ಘ ಚರ್ಚೆ ಮಾಡಿದರು.