ದೆಹಲಿ : ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಿಮಾರ್ಪುರ್ ಮತಕ್ಷೇತ್ರದ ಮಲ್ಕಾ ಗಂಜ್ ಮಂಡಲದ ಪ್ರಮುಖ ಭಾಗಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಸೂರ್ಯ ಪ್ರಕಾಶ ಖತ್ರಿ ಅವರ ಪರವಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಚುನಾವಣೆಯ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ನಾರಾಯಣಸಾ ಬಾಂಡಗೆ, ಮಂಡಲ ಅಧ್ಯಕ್ಷ ಉಮೇಶ್ ಮಾತೂರ್, ನಗರ ಸೇವಕಿ ರೇಖಾ, ಚುನಾವಣೆ ಪ್ರಭಾರಿ ಮುಖೇಶ ವರ್ಮಾ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.