ಪ್ರಾಮಾಣಿಕವಾಗಿ ಬದುಕು ಬೆಳಗಿಸುತ್ತಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಳೆದ 17 ವರ್ಷಗಳಲ್ಲಿ ಸಂಖ್ಯೆಯಿಲ್ಲದ ಬದುಕುಗಳನ್ನು ಉತ್ತಮ ಗೊಳಿಸಿದೆ, ಜನ ಸಮುದಾಯಗಳಿಗೆ ನೆರವಾಗಿದೆ ಮತ್ತು ಗ್ರಾಹಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ನ್ಯಾಯಯುತ ನಡವಳಿಕೆ, ಪಾರದರ್ಶಕತೆ ಮತ್ತು ಸಹಾನುಭೂತಿ ಮುಂತಾದ ಗುಣಗಳೇ ನಮ್ಮ ದಾರಿಯನ್ನು ರೂಪಿಸುತ್ತಾ ಬಂದಿದ್ದು, ದೇಶದ ಉದ್ದಗಲಕ್ಕೂ ಇರುವ ಅಸಂಖ್ಯಾತ ಬದುಕಗಳನ್ನು ಪರಿವರ್ತಿಸಲು ನೆರವಾಗಿವೆ.
ಇತ್ತೀಚೆಗೆ ಬೆಳಗಾವಿ ನಗರದಲ್ಲಿ ನಡೆದ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕರಣದಲ್ಲಿ ಈಕ್ವಿಟಾಸ್ ಸಂಸ್ಥೆಯು ಮಗು ಸೇರಿದಂತೆ ಕೆಲವು ಕುಟುಂಬ ಸದಸ್ಯರನ್ನು ಮನೆಯಿಂದ ಆಚೆ ಹಾಕಿದೆ ಮತ್ತು ಬ್ಯಾಂಕ್ ಗೆ ಅಡವಿಟ್ಟ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ಆದೇಶದ ಅನುಸಾರವಾಗಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿಂದ ಗ್ರಾಹಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಂಟಾದ ಅನನುಕೂಲತೆಗಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಈ ಗ್ರಾಹಕರು ಮುಂದೆ ಯಾವುದೇ ತೊಂದರೆಗೆ ಒಳಗಾಗದಂತೆ ನಾವು ಅವರ ಜೊತೆ ಸಂಪರ್ಕದಲ್ಲಿರುತ್ತೇವೆ ಮತ್ತು ಬ್ಯಾಂಕ್ ಗೆ ಅವರು ಪೂರೈಸಬೇಕಾದ ಹಣಕಾಸು ಬಾಕಿಗಳನ್ನು ಪೂರೈಸಲು ಅನುವು ಮಾಡಿಕೊಡುತ್ತೇವೆ.
ಸತ್ಯಾಂಶ ಏನೆಂದರೆ ಈ ಖಾತೆಯು ಕಳೆದ ಸುಮಾರು ಒಂದೂವರೆ ವರ್ಷದಿಂದ ಎನ್ಪಿಎ (ನಾನ್ ಪರ್ಫಾರ್ಮಿಂಗ್ ಅಸೆಟ್) ನಲ್ಲಿದೆ. ಸದ್ಯ ಬ್ಯಾಂಕ್ ಕೈಗೊಂಡಿರುವ ವಸೂಲಾತಿ ಪ್ರಕರಣದಲ್ಲಿ ಸಾಲಗಾರರು ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ತೋರಿಸಿಲ್ಲ. ಬ್ಯಾಂಕ್ ಸಾಮಾನ್ಯವಾಗಿ ಬಾಕಿ ಉಳಿಸಿರುವ ಗ್ರಾಹಕರಿಗೆ ಸಹಾಯ ವಾಗಲು ಬಡ್ಡಿ ಮನ್ನಾ ಮತ್ತು ಕೆಲವು ಅರ್ಹ ಸಂದರ್ಭಗಳಲ್ಲಿ ಅಸಲು ಮನ್ನಾದಂತಹ ಸವಲತ್ತುಗಳನ್ನು ಅಥವಾ ಸೆಟಲ್ ಮೆಂಟ್ ಅವಕಾಶಗಳನ್ನು ಕೂಡ ಒದಗಿಸುತ್ತದೆ. ನಾವು ಇವರಿಗೂ ಅವಕಾಶ ಒದಗಿಸುದ್ದೆವು.
ಹಾಗಿದ್ದರೂ ಗ್ರಾಹಕರು ಯಾವುದೇ ಪ್ರತಿಕ್ರಿಯೆ ತೋರಿಸಿಲ್ಲ. ಪಾವತಿ ಮಾಡುವುದಾಗಲಿ ಅಥವಾ ಇತ್ಯರ್ಥಕ್ಕೆ ಮುಂದಾಗುವುದಾಗಲಿ ಹೀಗೆ ಯಾವುದೇ ವಿಚಾರದಲ್ಲಿ ಪ್ರಗತಿ ಕಂಡುಬಂದಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಬ್ಯಾಂಕ್ ಗೆ ನ್ಯಾಯಾಲಯವನ್ನು ಸಂಪರ್ಕಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಈ ಸಂದರ್ಭದಲ್ಲಿ ನ್ಯಾಯಾಲಯವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಕಮಿಷನರ್ ಅನ್ನು ನೇಮಿಸಿತ್ತು ಮತ್ತು ನ್ಯಾಯಾಲಯ ನೇಮಿಸಿದ ಕಮಿಷನರ್ ಸ್ವಾಧೀನ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಿದರು.
ಈಕ್ವಿಟಾಸ್ ಸಂಸ್ಥೆಯು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮತ್ತು ನಿಯಮಗಳ ಚೌಕಟ್ಟಿನೊಳಗೆ ಎಲ್ಲಾ ಸಂಸ್ಥೆಯಲ್ಲಿ ಸಾಲ ಪಡೆದ ಎಲ್ಲಾ ಗ್ರಾಹಕರಿಗೆ ಸಹಾಯ ಮಾಡಲು ಬದ್ಧವಾಗಿದೆ. ಅಂತೆಯೇ ಈ ಪ್ರಕರಣದಲ್ಲಿಯೂ ಇತರ ಎಲ್ಲಾ ಪ್ರಕರಣಗಳಂತೆ ಸಹಾಯ ಮಾಡಲು ಮುಂದಾಗಿತ್ತು. ಗ್ರಾಹಕರು ತಮ್ಮ ಡೀಫಾಲ್ಟ್ ಗಳಿಂದ ಹೊರಬರಲು ಸಹಾಯ ಮಾಡಲು ಬ್ಯಾಂಕ್ ಯಾವಾಗಲೂ ಇತ್ಯರ್ಥ ಕ್ರಮಗಳಿಗೆ ಅಥವಾ ಸೆಟಲ್ ಮೆಂಟ್ ಗೆ ಸದಾ ಸಿದ್ಧವಿರುತ್ತದೆ.
ಈಕ್ವಿಟಾಸ್ ಸಂಸ್ಥೆಯು ಅತ್ಯಂತ ಮಾನವೀಯ ಗುಣ ಹೊಂದಿರುವ ಬ್ಯಾಂಕ್ ಆಗಿದೆ. ಕೋವಿಡ್ ನ ಮೊದಲ ಅಲೆ ದೇಶವನ್ನು ಸಂಚಲನಗೊಳಿಸಿದ ಸಂದರ್ಭದಲ್ಲಿ ಈಕ್ವಿಟಾಸ್ ಸಂಸ್ಥೆಯು ಸುಮಾರು ಶೇ.97ರಷ್ಟು ಸಾಲಗಾರರು ಮೊರಟೋರಿಯಂ ಸೌಲಭ್ಯ ಪಡೆದಿದ್ದರು. ಅಂದರೆ ನಿಗದಿತ ಸಮಯದವರೆಗೆ ಸಾಲ ಮರು ಪಾವತಿ ಪ್ರಕ್ರಿಯೆಯಿಂದ ಹೊರಗುಳಿಯುವ ಅವಕಾಶ ಪಡೆದಿದ್ದರು. ಬಹುಶಃ ದೇಶದ ಯಾವುದೇ ಬ್ಯಾಂಕ್ ಗಿಂತಲೂ ಅತಿ ಹೆಚ್ಚಿನ ಜನರಿಗೆ ಈ ಸೌಲಭ್ಯ ಒದಗಿಸಿದ ಹೆಮ್ಮೆ ನಮ್ಮದು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆದಾಯದ ಮೂಲಕ್ಕೆ ಪೆಟ್ಟು ಬಿದ್ದ ನೂರಾರು ಸಾವಿರಾರು ಗ್ರಾಹಕರಿಗಾಗಿ ನಾವು ₹ 2,000 ಕೋಟಿ ಮೌಲ್ಯದ ಸಾಲಗಳನ್ನು ಮತ್ತೆ ಒದಗಿಸಿದ್ದೇವೆ.
ನಾವು ನಮ್ಮ ಎಲ್ಲಾ ಗ್ರಾಹಕರ ಯೋಗಕ್ಷೇಮ ಕಾಪಾಡಲು ಬದ್ಧರಾಗಿರುತ್ತೇವೆ. ಈಕ್ವಿಟಾಸ್ ಎಂದರೆ ನ್ಯಾಯೋಚಿತ ಮತ್ತು ಪಾರದರ್ಶಕತೆಗೆ ಮತ್ತೊಂದು ಹೆಸರಾಗಿದೆ. ನಾವು ನಮ್ಮ ಹೆಸರು ಮತ್ತು ನಮ್ಮ ಮೂಲ ತತ್ವಕ್ಕೆ ಬದ್ಧವಾಗಿರುತ್ತೇವೆ. ನಮ್ಮ ಎಲ್ಲಾ ಪಾಲುದಾರರ ಜೊತೆಗೆ ನಾವು ಯಾವಾಗಲೂ ನ್ಯಾಯಯುತ ಮತ್ತು ಪಾರದರ್ಶಕ ವ್ಯವಹಾರದಲ್ಲಿ ನಡೆಸುತ್ತೇವೆ.
ಈ ನಿರ್ದಿಷ್ಟ ಪ್ರಕರಣದಲ್ಲಿಯೂ ಕೂಡ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಗ್ರಾಹಕರು ಹಾಗೂ ಅವರ ಕುಟುಂಬ ಸದಸ್ಯರ ಘನತೆ ಮತ್ತು ಯೋಗಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ನಮ್ಮ ಗ್ರಾಹಕರ ಜೊತೆ ಕೆಲಸ ಮಾಡುತ್ತೇವೆ.