ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಬೆಂಡಿಗೇರಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಘಟಕ ವಿಶೇಷ ವಾರ್ಷಿಕ ಶಿಬಿರ ನಡೆಯಿತು.
ಎರಡನೇ ದಿನದ 21-05.2024 ಮಂಗಳವಾರ ಮುಂಜಾನೆ ಧ್ವಜಾರೋಹಣ ಸಿದ್ಧತೆಯನ್ನು ಸಂಗೊಳ್ಳಿ ರಾಯಣ್ಣ ತಂಡದವರು ಸಿದ್ಧತೆ ನಡೆಸಿದರು.ಹಾಗೂ ಎಲ್ಲ ಸ್ವಯಂ ಸೇವಕರು ಆವರಣವನ್ನು ಸ್ವಚ್ಛಗೊಳಿಸಿದರು. ರಂಗೋಲಿಯನ್ನು ಹಾಕಿದರು. ಧ್ವಜಾರೋಹಣವನ್ನು ಬೆಂಡಿಗೇರಿ ಗ್ರಾಮದ ನಿವಾಸಿ ರೇವಣ್ಣ ಮೇಳದ, ರವಿ ಉಪ್ಪಿನ ಹಾಗೂ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಶಶಿಕಾಂತ ಕೊಣ್ಣೂರ ಶಿಕ್ಷಕರೊಂದಿಗೆ 6:30ಕ್ಕೆ ಧ್ವಜಾರೋಹಣವನ್ನು ನೆರವೇರಿಸಿಕೊಟ್ಟರು ನಂತರ ಎಲ್ಲಾ ಸ್ವಯಂಸೇವಕರು ಎನ್ಎಸ್ಎಸ್ ಗೀತೆಯನ್ನು ಹಾಡಿದರು. ಇಮ್ಮಡಿ ಪುಲಕೇಶಿ ತಂಡದವರು ಹಿಂದಿನ ದಿನದ ವರದಿಯನ್ನು ಸಲ್ಲಿಸಿದರು.
ಶಿಬಿರದ ಸಂಯೋಜನಾಧಿಕಾರಿ ಡಾ. ಶಶಿಕಾಂತ್ ಕೊಣ್ಣೂರ ಅಂದಿನ ದಿನದ ಕಾರ್ಯ ಚಟುವಟಿಕೆಗಳ ಕುರಿತು ಸ್ವಯಂಸೇವಕರಿಗೆ ಮಾಹಿತಿಯನ್ನು ನೀಡಿದರು. ನಂತರ ವ್ಯಾಯಾಮ, ಯೋಗಾಭ್ಯಾಸ 7:30ರ ವರೆಗೆ ನಡೆಯಿತು. 9:30 ರಿಂದ 12 ಗಂಟೆಯವರೆಗೆ ಶಾಲಾ ಸುತ್ತಮುತ್ತಲ ಆವರಣವನ್ನು ಸ್ವಚ್ಛಗೊಳಿಸುವುದರ ಮೂಲಕ ಶ್ರಮದಾನವನ್ನು ಮಾಡಲಾಯಿತು. 12:30ರಿಂದ 1:30 ಗಂಟೆಯ ವರೆಗೆ ಎನ್ಎಸ್ಎಸ್ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಹಾಗೂ ಎಲ್ಲಾ ಸ್ವಯಂಸೇವಕರು ಸೇರಿ ಕೆಲವು ಮನರಂಜನಾ ಕಾರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟರು.
ಮಧ್ಯಾಹ್ನದ ಊಟದ ತಯಾರಿ ಸಿದ್ಧತೆಯನ್ನು “ವೀರಮದಕರಿ” ತಂಡದವರು ವಹಿಸಿಕೊಂಡಿದ್ದರು. ಸರಿಯಾಗಿ 3 ಗಂಟೆಯಿಂದ 4:30ರವರೆಗೆ ಬೆಂಡಿಗೇರಿ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ಮಣ್ಣು ಪರೀಕ್ಷೆ ಕುರಿತು ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮವು ಜರುಗಿತು. ಈ ಈ ಕಾರ್ಯಕ್ರಮ ಅಲಂಕಾರ ವ್ಯವಸ್ಥೆಯನ್ನು’ ಬೆಳವಡಿ ಮಲ್ಲಮ್ಮ’ ತಂಡದವರು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ಅತಿಥಿಯಾದ ಡಾ. ಶಿವ ಸೋಮನಾಥ ಕಸ್ತೂರಿ ರಮೇಶ್ ಇವರು ಮುಖ್ಯಸ್ಥರು ಪ್ರಾದೇಶಿಕ ಉಸ್ತುವಾರಿ ಅಧಿಕಾರಿಗಳು ಮಣ್ಣು ಪರೀಕ್ಷೆ ಮತ್ತು ಆರೋಗ್ಯ ನಿರ್ವಾಣ ಸಚಿವಾಲಯ ಭಾರತ ಸರ್ಕಾರ ಹಾಗೂ ಅಧ್ಯಕ್ಷತೆಯನ್ನು ಪಂಚಾಯತ್ ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿಕೊಂಡರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ ಮಣ್ಣಿನ ಸಂರಕ್ಷಣೆ ನಿರ್ವಹಣೆ ಹಾಗೂ ಮಣ್ಣು ಪ್ರೇಮ ಸಂವಾದದ ಬಗ್ಗೆ ರೈತರಿಗೆ ತಿಳಿವಳಿಕೆ /ಮಾರ್ಗದರ್ಶನ ನೀಡುವುದಾಗಿತ್ತು. ಮತ್ತೆ 8 ರಿಂದ 8:30 ಗಂಟೆಗೆ ಮತ್ತೆ ಮಣ್ಣಿನ ಬಗ್ಗೆ ಸಂವಾದವನ್ನು ನಡೆಸಿದರು.