ಬೆಳಗಾವಿ : ಬೆಳಗಾವಿಯ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪರವಾಗಿ ಬುಧವಾರ ನಗರದ ಹಿಂದವಾಡಿ ಐಎಂಇಆರ್ ಸಭಾಗೃಹದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವೈಚಾರಿಕ ಪ್ರಜ್ಞೆ ಸಂಪನ್ಮೂಲ ವ್ಯಕ್ತಿ ಎಂದು ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಖ್ಯಾತ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಗವಿಮಠ ಅವರಿಗೆ ರಾಮಚಂದ್ರಪ್ಪ ಮತ್ತು ಷಣ್ಮುಖಪ್ಪ ಗೊಣಬಾಳ ದತ್ತಿ ನಿಧಿ ಪುರಸ್ಕಾರ ನೀಡಿ ಗೌರವಿಸಲಾಯಿತು.