ಅಗಸಗಿ ಅಧ್ಯಕ್ಷರಾಗಿ ಅಮೃತ ಮುದ್ದಣ್ಣವರ ಉಪಾಧ್ಯಕ್ಷರಾಗಿ ಶೋಭಾ ಕುರೇನ್ನವರ ಆಯ್ಕೆ..!
ಬೆಳಗಾವಿ : ಅಗಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಮೃತ ಮುದ್ದಣ್ಣವರ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಕುರೇನ್ನವರ ಅವಿರೋಧವಾಗಿ ಆಯ್ಕೆಯಾದರು.
ಇಂದು(ಬುಧವಾರ ದಿ: 26-7-2023) ಅಗಸಗಿ ಗ್ರಾ ಪಂ ಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ 13 ಸದಸ್ಯರು ಬಲಾಬಲ ಹೊಂದಿರುವ ಅಗಸಗಿ ಪಂಚಾಯಿತಿಯ 9 ಸದಸ್ಯರು ಚುನಾವಣೆಯಲ್ಲಿ ಭಾಗಿಯಾಗಿ ಅಧ್ಯಕ್ಷ ಹುದ್ದೆಗೆ ಅಮೃತ ಮುದ್ದಣ್ಣವರ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಕುರೇನ್ನವರ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಮೊದಲ ಬಾರಿಗೆ ಗೆದ್ದು ಅಧ್ಯಕ್ಷ ಗದ್ದುಗೆ ಏರಿದ ಮುದ್ದಣ್ಣವರ ಕುಡಿ..!
2020 ರಲ್ಲಿ ನಡೆದಿದ್ದ ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಸಾಮಾನ್ಯ ವರ್ಗದಡಿ ಸ್ಪರ್ಧಿಸಿದ್ದ ಅಮೃತ ಮುದ್ದಣ್ಣವರ ದಾಖಲೆಯ ಮತಗಳ ಅಂತರದಿಂದ ಅಗಸಗಿ ಗ್ರಾ ಪಂ ಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೊದಲೆರಡೂವರೆ ವರ್ಷ ಪರಿಶಿಷ್ಟ ಪಂಗಡಕ್ಕೆ (ST) ವರ್ಗಕ್ಕೆ ಮೀಸಲಾತಿ ಪ್ರಕಟವಾಗಿತ್ತು. ಈಗ ಮಂದಿನ ಎರಡೂವರೆ ವರ್ಷ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಹುದ್ದೆ ಪ್ರಕಟಣೆ ಯಾದ ಮೇಲೆ 13 ಸದಸ್ಯರ ಬಲಾಬಲ ಹೊಂದಿರುವ ಅಗಸಗಿ ಗ್ರಾ ಪಂ ಯ 9 ಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಅಮೃತ ಮುದ್ದಣ್ಣವರ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.
ಕೃತಜ್ಞತೆ ಸಲ್ಲಿಸಿದ ನೂತನ ಅಧ್ಯಕ್ಷರು..!
ಮೊದಲ ಬಾರಿಗೆ ಗೆದ್ದು ಅಧ್ಯಕ್ಷ ಹುದ್ದೆ ಅಲಂಕರಿಸಿದ ಅಮೃತ ಮುದ್ದಣ್ಣವರ ತಮ್ಮನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಸದಸ್ಯರಾದ ಅಪ್ಪಯ್ಯಗೌಡ ಪಾಟೀಲ, ಯಲ್ಲಪ್ಪಾ ಪಾಟೀಲ, ರಾಜು ಬಾಳೆಕುಂದ್ರಿ, ಗುಂಡು ಕುರೇನ್ನವರ, ಶೋಭಾ ಕುರೇನ್ನವರ, ನಿಂಗವ್ವಾ ಪಾಟೀಲ, ಉಮಾ ಕೊಲಕಾರ, ಮಾಜಿ ಅಧ್ಯಕ್ಷ ಚನ್ನಮ್ಮ ತಿರಮಾಳೆ ಹಾಗೂ ಯಮಕನಮರಡಿ ಶಾಸಕರು ಮತ್ತು ಸಚಿವರಾದ ಸತೀಶ ಜಾರಕಿಹೋಳಿ ಮತ್ತವರ ಆಪ್ತಸಹಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿ ಕೊಳಿ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.ಅಗಸಗಿ PDO ಎನ್ ಎ ಮುಜಾವರ ಸಿಬ್ಬಂದಿ ಮಹೇಶ್ ಹಂಪಣ್ಣವರ , ಕಾಕತಿ ಪೊಲೀಸರು ಉಪಸ್ಥಿತರಿದ್ದರು.