ಬೆಳಗಾವಿ: ಬೆಳಗಾವಿಯಲ್ಲಿ ರವಿವಾರ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ಯುವಕರು ಹೊಡೆದಾಡಿಕೊಂಡಿದ್ದಾರೆ. ಉಜ್ವಲ ನಗರ ಮತ್ತು ರುಕ್ಮಿಣಿ ನಗರ ಯುವಕರ ನಡುವೆ ಗಲಾಟೆ ನಡೆದಿದ್ದು ಮೆರವಣಿಗೆ ಮುಗಿಸಿ ಹೋಗುವಾಗ ತಲ್ವಾರ್ ಹಾಗೂ ಚಾಕುವಿನಿಂದ ಇರಿದ ಪರಿಣಾಮ ಮೂವರು ಯುವಕರು ಗಾಯಗೊಂಡಿದ್ದಾರೆ. ಅವರನ್ನು ಜಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಪ್ರತ್ಯೇಕ ಘಟನೆಯಲ್ಲಿ ಬೆಳಗಾವಿ ಕಾಲೇಜು ರಸ್ತೆಯಲ್ಲಿ ಪಂಚಮಸಾಲಿ ವಕೀಲರು ಬಸವ ಜಯಂತಿಯ ಸ್ವಾಮೀಜಿ ನೇತೃತ್ವದಲ್ಲಿ ಚನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಲು ತೆರಳುತ್ತಿದ್ದರು. ವಕೀಲರು ಹಾಗೂ ಈದ್ ಮಿಲಾದ್ ಮೆರವಣಿಗೆ ಎದುರು ಬದುರಾಗಿದ್ದು ಪಂಚಮಸಾಲಿ ಸಮುದಾಯದವರು ಹರ ಹರ ಮಹದೇವ್ ಘೋಷಣೆ ಕೂಗಿದರೆ, ಈದ್ ಮಿಲಾದ್ ನಲ್ಲಿ ಸಾಗುತ್ತಿರುವ ಯುವಕರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.