ಬೆಂಗಳೂರು :
ರಾಜ್ಯ ಹೈಕೋರ್ಟ್ ಗೆ ಅಕ್ಟೋಬರ್ 3ರಿಂದ 7ರವರೆಗೆ ದಸರಾ ರಜೆ ಇರಲಿದೆ. ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್ ವಿಧಾನದಲ್ಲಿ ನಡೆಸಲಾಗುತ್ತದೆ. ಬೆಂಗಳೂರು ಪೀಠದಲ್ಲಿ ಹೈಬ್ರಿಡ್ ವಿಚಾರಣೆಗೆ ಅವಕಾಶ ಇದ್ದು ತುರ್ತು ಮಧ್ಯಂತರ ಆದೇಶ ಮತ್ತು ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿ ವಿಚಾರಣೆಗಳ ಮಾತ್ರ ನಡೆಸಲಾಗುತ್ತದೆ.