ಬೆಳಗಾವಿ :ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಹಲವರಿಗೆ ಚಾಕು ಇರಿದ ಘೋರ ಘಟನೆ ಶನಿವಾರ ನಡೆದಿದೆ.
ಬೆಳಗಾವಿ ನೆಹರೂ ನಗರದ ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ ಬೆಟಗೇರಿ, ಮಹೇಶ ಸುಂಕದ, ವಿನಾಯಕ ನರಟ್ಟಿ, ನಜೀರ್ ಪಠಾಣ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಇವರ ತಲೆ, ಹೊಟ್ಟೆ, ಬೆನ್ನು, ಗುದದ್ವಾರ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಚಾಕು ಇರಿತವಾಗಿದೆ.
ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಎದುರಿನ ವೈ ಜಂಕ್ಷನ್ ಬಳಿ ನೆಹರು ನಗರದ ಡಾಲ್ಬಿ ರೂಪಕ ವಾಹನದೊಂದಿಗೆ ಬಂದಿತ್ತು. ಆಗ ಮತ್ತೊಂದು ಗುಂಪಿನ ಯುವಕರು ಏಕಾಏಕಿ ನುಗ್ಗಿ ಜನಸಂದಣಿಯಲ್ಲಿ ಬಂದು ಜಗಳ ಮಾಡಿದೆ. ನೆಹರು ನಗರದ ಯುವಕರ ಮೇಲೆ ಚಾಕು, ಜಂಬೆಯಿಂದ ಇರಿಯಲಾಗಿದೆ. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾದರನೃತ್ಯ ಮಾಡುತ್ತಿದ್ದಾಗ ಏಕಾ ಏಕಿಯಾಗಿ ನುಗ್ಗಿದ ಗುಂಪು ಈ ಕೃತ್ಯ ಎಸಗಿದೆ. ಯುವಕರು ಬಿದ್ದು ಒದ್ದಾಡುತ್ತಿದ್ದಂತೆ ಚಾಕು ಇರಿದ ಗುಂಪು ಪರಾರಿಯಾಗಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.


