ಜನ ಜೀವಾಳ ಜಾಲ ಬೆಳಗಾವಿ :
ಇಲ್ಲಿನ ಹಾಲಭಾವಿ ಗ್ರಾಮದಲ್ಲಿರುವ ITBP ತರಬೇತಿ ಕೇಂದ್ರದಲ್ಲಿ ನಡೆದಿರುವ ಟ್ರೇಡ್ ಮೇನ್ ಹುದ್ದೆಯ ಭರ್ತಿವೇಳೆ ಮಧ್ಯಪ್ರದೇಶದ ಅಭ್ಯರ್ಥಿಯೋರ್ವ ತನ್ನ ವೈದ್ಯಕೀಯ ಪರೀಕ್ಷೆಗೆ ಗೆಳೆಯನೊಬ್ಬನನ್ನು ಕಳಿಸಿದ್ದಾನೆ. ಈ ವೇಳೆ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದು ಅಸಲಿ ಪರಾರಿಯಾಗಿದ್ದಾನೆ.
ದಿ 23 ನವೆಂಬರ್ ದಂದು ನಡೆದ ನೇಮಕಾತಿಗೆ ಮಧ್ಯಪ್ರದೇಶ ರಾಜ್ಯದ ಮರೈನ್ ತಾಲೂಕಿನ ಸರ್ಜನಪೂರ ಗವಾ ಗ್ರಾಮದ ಚೋಟು ದೇವೆಂದರ ಸಿಂಗ್ ಎಂಬಾತ ಹಾಜರಾಗಿದ್ದಾನೆ. ಈ ವೇಳೆ ಆತ ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತಿರ್ಣನಾಗಿದ್ದಾನೆ. ಮತ್ತೆ ಮಾರನೇ ದಿನ ನಡೆಯುತ್ತಿದ್ದ ಮರು ವೈದ್ಯಕೀಯ ಪರೀಕ್ಷೆಯಲ್ಲಿ ತನ್ನ ಬದಲಿಗೆ ಮಧ್ಯಪ್ರದೇಶದ ಜನಕಪೂರ ಗ್ರಾಮದ ಅಂಕಿತ ಬಾಸುದೇವ ಎಂಬಾತನನ್ನು ಕಳಿಸಿದ್ದಾನೆ. ಈ ಸಮಯದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ಅಧಿಕಾರಿಗಳು ನಕಲಿ ಪರೀಕ್ಷಾರ್ಥಿಯನ್ನು ಗುರುತಿಸಿ ತನಿಖೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಅಸಲಿ ಅಭ್ಯರ್ಥಿ ಪರಾರಿಯಾಗಿದ್ದಾನೆ.
ನಕಲಿ ಅಭ್ಯರ್ಥಿ ಅಂಕಿತ ವಿರುದ್ಧ ಕಾಕತಿ ಪೊಲೀಸರಿಗೆ ITBP ಅಧಿಕಾರಿಗಳು ದೂರು ನೀಡಿದ ತಕ್ಷಣ ಕಾಕತಿ ಪಿಎಸ್ಐ ನಂಜುನಾಥ ಹುಲಕುಂದ ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ.