ಬೆಳಗಾವಿ : ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸೆ. 30 ರಂದು ಶ್ರೀ ದುರ್ಗಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 6.15 ಕ್ಕೆ ಉಷಾ ಕೀರ್ತನೆ, 8 ಕ್ಕೆ ವಿಶೇಷ ಪೂಜೆ, 9:30 ಕ್ಕೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, 10.15 ಕ್ಕೆ ಹೋಮ ಮತ್ತು ವೇದಘೋಷ, 12 ಕ್ಕೆ ಪ್ರವಚನ, 12:45 ಕ್ಕೆ ಪುಷ್ಪಾಂಜಲಿ ಮತ್ತು ನಾಮ ಸಂಕೀರ್ತನೆ, 1.15 ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ನಡೆಯಲಿದೆ. ಸಂಜೆ 6 ಕ್ಕೆ ಶ್ರೀ ದೇವಿ ಸ್ತುತಿ, 6:30 ಕ್ಕೆ ಶ್ರೀರಾಮಕೃಷ್ಣರಿಗೆ ಆರತಿ, 7 ಕ್ಕೆ ಶ್ರೀ ದುರ್ಗಾ ಮಾತೆಗೆ ವಿಶೇಷ ಆರತಿ, ಭಜನೆ ಮತ್ತು ನಾಮಾವಳಿ ನಡೆಯಲಿದೆ. ನವರಾತ್ರಿ ಪ್ರಯುಕ್ತ ಪ್ರತಿದಿನ ಅಕ್ಟೋಬರ್ 2 ರವರೆಗೆ ಸಂಜೆ ಪಾರಾಯಣ ನಡೆಯಲಿದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.