This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

State News

ಬಸವತತ್ವ ಅರಿತವರನ್ನು ಮಾತ್ರ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ: ಡಾ. ಎಸ್. ಎಂ. ಜಾಮದಾರ


ಜನಜೀವಾಳಜಾಲ  ಬೆಳಗಾವಿ: ಲಿಂಗಾಯತರ ಪ್ರಮುಖ ಮಠವಾದ ಚಿತ್ರದುರ್ಗ ಮುರುಘಾ ಮಠದಲ್ಲಿ ನಡೆದ ಅನಿಷ್ಠಗಳ ನಂತರ ಈಗ ಆಡಳಿತಾಧಿಕಾರಿ ನೇಮಕ ಮಾಡಲು ಸರಕಾರ ನಿರ್ಧರಿಸುವುದು ಸುಸ್ವಾಗತ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಸ್. ಎಂ. ಜಾಮದಾರ ತಿಳಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿದ ಅವರು 300-400 ವರ್ಷಗಳ ಇತಿಹಾಸ ಹೊಂದಿರುವ ಈ ಮಠ ಬಸವತತ್ವ ಪಸರಿಸುತ್ತ ಬಂದಿದೆ. ಈ ಮಠಕ್ಕೆ ಈಗ ಹೊಸ ಆಡಳಿತಾಧಿಕಾರಿ ನೇಮಕ ಮಾಡಲು ನಮ್ಮ ಸಂಪೂರ್ಣ ಬೆಂಬಲ ಇದೆ.

ಆಡಳಿತಾಧಿಕಾರಿಯಾಗಿ ಬಸವತತ್ವ ಆಚರಿಸಿ ಅರಿತವರು ಇರಬೇಕು.
ಬಸವತತ್ವದ ಸಾಮಾನ್ಯ ಜ್ಞಾನ ಇದ್ದವರನ್ನು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ವೀರಶೈವ ಮತ್ತು ವೈದಿಕ ಹಿನ್ನೆಲೆಯ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಬಕೂಡದು. ಲಿಂಗಾಯತ ಸಂಸ್ಕೃತಿ ಅರಿಯದ ವ್ಯಕ್ತಿಯನ್ನು ನೇಮಕ ಮಾಡಿದರೆ ನಮ್ಮ ಸಂಪೂರ್ಣ ವಿರೋಧ ಇದೆ ಎಂದರು.

ಕಳಂಕ ಹೊತ್ತು ಜೈಲು ಸೇರಿರುವ ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿಯನ್ನು ಪೀಠದಿಂದ ಇಳಿಸಿದ ನಂತರ ಈಗ ಯೋಗ್ಯ ವ್ಯಕ್ತಿಯನ್ನು ಸರಕಾರ ಆಡಳಿತ ಅಧಿಕಾರಿಯನ್ನು ನೇಮಕ ಮಾಡುವಾಗ ಬಸವ ತತ್ವ  ಅರಿತವನನ್ನೇ ನೇಮಕ ಮಾಡಿ ಎಂದರು. ಬಸವರಾಜ ರೊಟ್ಟಿ, ಅಶೋಕ ಮಳಗಲಿ ಇತರರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply