ಸಾಂಗಲಿ :ಡಾ.ಶಿವಯೋಗಿ ಎಂ.ಹೂಗಾರ ಪ್ರೊಫೆಸರ್ ಮತ್ತು ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರು, ಕೆಎಲ್ಇ ವಿಕೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಕೆಎಲ್ಇ ವಿಶ್ವವಿದ್ಯಾನಿಲಯ ಬೆಳಗಾವಿ ಅವರನ್ನು ಭಾರತಿ ವಿದ್ಯಾಪೀಠ ಡೀಮ್ಡ್ ವಿಶ್ವವಿದ್ಯಾಲಯ ಸಾಂಗಲಿಯವರು ಅತಿಥಿ ಉಪನ್ಯಾಸಕರಾಗಿ ಇಂಟರ್ಲೆಕ್ಚುವಲ್ ಪ್ರಾಪರ್ಟಿ ರೈಟ್ (ಐಪಿಆರ್) ಕುರಿತು ಅತಿಥಿ ಉಪನ್ಯಾಸಕರಾಗಿ ಆಹ್ವಾನಿಸಿದ್ದರು.
12ನೇ ಸೆಪ್ಟೆಂಬರ್ 2023 ರಂದು ನಡೆದ ಈ ಕಾರ್ಯಕ್ರಮದಲ್ಲಿ “ನನ್ನ ಕಥೆ – ಯಶಸ್ವಿ ಆವಿಷ್ಕಾರಕ” ಎಂಬ ಶೀರ್ಷಿಕೆಯೊಂದಿಗೆ ಆರೋಗ್ಯ ವೃತ್ತಿಪರರಲ್ಲಿ ಎಂಬ ವಿಷಯದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಭಾರತಿ ವಿದ್ಯಾಪೀಠ ಕಾಲೇಜಿನ ಪ್ರಾಂಶುಪಾಲ ಡಾ. ಶರದ್ ಕಾಮತ್ ಅಧ್ಯಕ್ಷರಾಗಿದ್ದರು. ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಉಪನ್ಯಾಸ ನೀಡಿದರು. ಒಟ್ಟು 438 ಸಿಬ್ಬಂದಿ, ಸ್ನಾತಕೋತ್ತರ ಪದವೀಧರರು ಈ ಅತಿಥಿ ಉಪನ್ಯಾಸದ ಪ್ರಯೋಜನ ಪಡೆದರು.