ಬೆಳಗಾವಿ : ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಜಿಯವರ ಪ್ರೇರಣಾದಾಯಕ ನೇತೃತ್ವದಲ್ಲಿ ಕೆಎಲ್ ಇ ಸಂಸ್ಥೆಯ ಸಮರ್ಪಿತ ಬೋಧಕ ವರ್ಗದ ಸಹಕಾರದಿಂದ ಮಹತ್ತರ ಬದ್ಧತೆಯೊಂದಿಗೆ ಕೆಲಸ ಮಾಡಿವೆ. ಇಂದು ಆ ದೃಷ್ಟಿ ವಿಸ್ತರಿಸಿ 38 ಇದ್ದ ಸಂಸ್ಥೆ 316ಕ್ಕೂ ಹೆಚ್ಚು ಸಂಸ್ಥೆಗಳಾಗಿ ಬೆಳೆದಿದೆ. ಎಂತಹ ಅದ್ಭುತ ಸಾಧನೆ ಎಂದು ಬೆಂಗಳೂರು ರಾಮಯ್ಯ ಅನ್ವಯಿಕ ವಿಶ್ವವಿದ್ಯಾಲಯದ ಕುಲಪತಿ ಡಾಎಂ.ಆರ್. ಜಯರಾಮ ಶ್ಲಾಘಿಸಿದರು.
ನಗರದ ಬಿ .ಎಸ್ .ಜೀರಗೆ ಸಭಾಭವನದಲ್ಲಿ ಗುರುವಾರ ನಡೆದ ಕೆ ಎಲ್ ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕೆಎಲ್ ಇ ಸಂಸ್ಥೆ ತನ್ನನ್ನು ದೇಶದ ಪ್ರಮುಖ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ.
ಕರ್ನಾಟಕ ರಾಜ್ಯದಲ್ಲಿ ಇಂತಹ ಸಂಸ್ಥೆಗಳು ಕೇವಲ ಮೂರು ಮಾತ್ರ ಇವೆ. ಒಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಬೆಂಗಳೂರು), ಎರಡನೆಯದು ಮೈಸೂರು ವಿಶ್ವವಿದ್ಯಾಲಯ, ಮೂರನೆಯದು ಕೆ.ಎಲ್.ಇ. ಸಂಸ್ಥೆ. ಇದು ಡಾ. ಪ್ರಭಾಕರ ಕೋರೆ ಅವರ ಅಮೂಲ್ಯ ಕೊಡುಗೆ ಎಂದು ಅವರು ಬಣ್ಣಿಸಿದರು.
ಒಂದು ಉದಾಹರಣೆ ನೀಡುತ್ತೇನೆ ನಾನು EPSI ಸಂಸ್ಥೆಯ ಅಧ್ಯಕ್ಷನಾಗಿದ್ದಾಗ,
ಅಧ್ಯಕ್ಷನಾದ ನಂತರ ಸಚಿವರನ್ನು ಭೇಟಿಯಾಗಬೇಕಿತ್ತು. “ಮೊದಲು ನಾವು EPSI ಯ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳೋಣ; ಅದಾದ ನಂತರವೇ ಸಚಿವರನ್ನು ಭೇಟಿಯಾಗೋಣ ಎಂದು ಹೇಳಿದರು.
ಚೀನಾದಲ್ಲಿ 90% ಮಟ್ಟದಲ್ಲಿ ಅಭಿವೃದ್ಧಿ ಕಂಡುಬರುತ್ತಿದೆ ಎಂದರೆ, ನಾವು 16% ಮಟ್ಟದಲ್ಲಿದ್ದೇವೆ. ಹೀಗಾದರೆ ನಾವು ಎಲ್ಲಿದ್ದೇವೆ?” ಸಂಸ್ಥೆಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದರೆ ಪ್ರಶ್ನೆ ಏನೆಂದರೆ ಆ ಜವಾಬ್ದಾರಿ ಅಂದ್ರೆ ಏನು? ಎಂದು ಚಿಂತನೆ ನಡೆಸಬೇಕು ಎಂದು ಹೇಳಿದರು.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಇದೇ ನಮ್ಮ ದೇಶದ ಭವಿಷ್ಯ. ನಾವು ನಿಮ್ಮಂತಹ ಸಂಸ್ಥೆಗಳನ್ನು ಬಯಸುತ್ತೇವೆ, ಇವುಗಳೇ ಮುಂದಿನ ಪೀಳಿಗೆಯ ದಾರಿ ತೋರಿಸುವವು. ಈಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕೂಡ ಈ ದಿಕ್ಕಿನಲ್ಲಿ ಪ್ರಾರಂಭಿಸಿದೆ. ಈ ಹೊಣೆಗಾರಿಕೆಯನ್ನು ಯಾರು ಹೊತ್ತುಕೊಳ್ಳಬಲ್ಲರು? ನಿಮ್ಮ ಮೇಲಿರುವ ಜವಾಬ್ದಾರಿ ಬಹಳ ದೊಡ್ಡದು. ಜನರು ಆ ನಾಯಕತ್ವಕ್ಕಾಗಿ ನಿಮ್ಮತ್ತ ನೋಡುವರು. ನಾನೂ ಕೂಡ ಈ ದೇಶಕ್ಕೆ ನೀಡಬೇಕಾದ ಆ ನಾಯಕತ್ವವನ್ನು ನಿಮ್ಮಿಂದಲೇ ನಿರೀಕ್ಷಿಸುತ್ತಿದ್ದೇನೆ. ಭವಿಷ್ಯದ ಭಾರತಕ್ಕಾಗಿ ಜ್ಞಾನದಲ್ಲಿ ಮುಂದುವರಿಯಿರಿ, ಸರ್ಕಾರದೊಂದಿಗೆ ಕೈಜೋಡಿಸಿ,
ಈ ದೇಶವನ್ನು ಗರ್ವದಿಂದ ಮಾತನಾಡಬಹುದಾದ, ಗೌರವದಿಂದ ಬದುಕಬಹುದಾದ, ಆತ್ಮಗೌರವದಿಂದ ಸಮಾಜವನ್ನು ಬದಲಿಸುವ ಒಂದು ಅದ್ಭುತ ಪ್ರಯಾಣ ನಿಜಕ್ಕೂ ಅದ್ಭುತ ಯಾನ.
ಆ ಪರಿಪೂರ್ಣ ಸೌಹಾರ್ದತೆ, ಸಹಕಾರ ಇಲ್ಲದಿದ್ದರೆ ನಾವು ಈ ಮಟ್ಟಕ್ಕೆ ತಲುಪಲಾಗುತ್ತಿರಲಿಲ್ಲ.
ಹೀಗಾಗಿ ಈಗ ಭವಿಷ್ಯವನ್ನು ನೋಡಿ, ಹಿಂದಿನ ಸಾಧನೆ ನೆನಪಿಸಿಕೊಳ್ಳಿ ಮತ್ತು ನಿಮ್ಮ ಕೊಡುಗೆಯನ್ನು ಗುರುತಿಸಿ. ಪೂರ್ಣ ವಿನಯದಿಂದ ನಾನು ನನ್ನನ್ನು ಈ ಮಹಾನ್ ಸಂಸ್ಥೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಸಮಾಜವನ್ನು ಬದಲಿಸುವ ಒಂದು ಅದ್ಭುತ ಶೈಕ್ಷಣಿಕ ಯಾನ ರೋಮಾಂಚನಕಾರಿ. ಒಂದು ಶೈಕ್ಷಣಿಕ ಬೀಜವನ್ನು ಭಿತ್ತಿ ಅಸಂಖ್ಯ ಮರಗಳನ್ನು ಬೆಳೆದವರು ಅವರು. ಅವರ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆ ಇಂದು ಅಗಾಧವಾಗಿ ಬೆಳೆದಿದೆ. ಅದರ ಹಿಂದೆ ಡಾ.ಪ್ರಭಾಕರ ಕೋರೆಯವರ ಪರಿಶ್ರಮವನ್ನು ನಾವು ಶ್ಲಾಘಿಸಬೇಕೆಂದು ಹೇಳಿದರು.
ಸಮಾಜದ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವ ನೆಲೆಯಲ್ಲಿ ಸಪ್ತರ್ಷಿಗಳು ಹಗಲಿರುಳು ಶ್ರಮಿಸಿದರು. ಅವರ ತ್ಯಾಗ ಹಾಗೂ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆಯು ಬೆಳೆದುನಿಂತಿದೆ. ಅಖಂಡವಾಗಿ ನಾಲ್ಕು ದಶಕಗಳಿಂದ ಈ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸುವಲ್ಲಿ ಡಾ.ಕೋರೆಯವರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಮೇಲಿರುವ ಜವಾಬ್ದಾರಿ ಬಹಳ ದೊಡ್ಡದು. ಜನರು ಉತ್ತಮವಾದ ನಾಯಕತ್ವಕ್ಕಾಗಿ ನಿಮ್ಮತ್ತ ನೋಡುವರು. ನಾನೂ ಈ ದೇಶಕ್ಕೆ ನೀಡಬೇಕಾದ ಶ್ರೇಷ್ಠ ನಾಯಕತ್ವವನ್ನು ನಿಮ್ಮಿಂದಲೇ ನಿರೀಕ್ಷಿಸುತ್ತಿದ್ದೇನೆ. ಭವಿಷ್ಯದ ಭಾರತಕ್ಕಾಗಿ ಜ್ಞಾನದಲ್ಲಿ ಮುಂದುವರಿಯಿರಿ, ಸರ್ಕಾರದೊಂದಿಗೆ ಕೈಜೋಡಿಸಿ, ಹೀಗಾಗಿ ಈಗ ಭವಿಷ್ಯವನ್ನು ನೋಡಿ, ಹಿಂದಿನ ಸಾಧನೆಗಳನ್ನು ನೆನಪಿಸಿಕೊಳ್ಳಿ, ಮತ್ತು ಶ್ರೇಷ್ಠವಾದ ಕೊಡುಗೆಯನ್ನು ನೀಡಲು ಸಿದ್ಧರಾಗಿರಿ. ಇದೆಲ್ಲದಕ್ಕೂ ಮುಖ್ಯವಾದುದು ಉತ್ತಮವಾದುದುನ್ನು ಆಲೋಚಿಸುವುದು. ಸಪ್ತರ್ಷಿಗಳು ಉದಾತ್ತವಾದುದುನ್ನು ಆಲೋಚಿಸಿದರು ಅಮರವಾದ ಕಾರ್ಯವನ್ನು ನಿರ್ವಹಿಸಿದರು ಎಂದು ಕೆಎಲ್ಇ ಅನ್ನು “ದೃಷ್ಟಿ, ಬದ್ಧತೆ ಮತ್ತು ತ್ಯಾಗದಿಂದ ನಿರ್ಮಿಸಲಾದ ಪರಂಪರೆ” ಎಂದು ಶ್ಲಾಘಿಸಿದರು.
ಕೆಎಲ್ ಇ ವಿಸ್ತರಣೆ ಮತ್ತು ಶ್ರೇಷ್ಠತೆಯ ಹೊಸ ಯುಗಕ್ಕೆ ಕೊಂಡೊಯ್ದಿದ್ದಕ್ಕಾಗಿ ಡಾ. ಕೋರೆ ಅವರನ್ನು ವಿಶೇಷವಾಗಿ ಶ್ಲಾಘಿಸಿದರು. ರಾಷ್ಟ್ರೀಯ ಬೆಳವಣಿಗೆಗೆ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಕೆಲಸ ಮಾಡಲು ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಈ ರಾಷ್ಟ್ರೀಯ ಧ್ಯೇಯವನ್ನು ಬೆಂಬಲಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದ ಮೇಲೆ ಕೇಂದ್ರೀಕರಿಸುವ STEM ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅವರು ಕೆಎಲ್ಇಗೆ ಕರೆ ನೀಡಿದರು.

ಆಶೀರ್ವಚನ ನೀಡಿದ ಹೈದರಾಬಾದ್ನ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಬೋಧಮಯಾನಂದ ಮಹಾರಾಜ್ ಅವರು ನಾವು ದೇವರನ್ನು ತಾಯಿಯಾಗಿ ಪೂಜಿಸುತ್ತೇವೆ.ಆ ತಾಯಿಯ ಒಂದು ರೂಪವೇ ಸರಸ್ವತಿ. ಅಂದರೆ ಜ್ಞಾನದ ದೇವಿ. ಜ್ಞಾನ, ವಿವೇಕ ಮತ್ತು ವಿದ್ಯೆಯ ಪ್ರತೀಕ.
ಇನ್ನೊಂದು ರೂಪವೇ ಮಹಾಲಕ್ಷ್ಮಿ, ಅಂದರೆ ಐಶ್ವರ್ಯ ಮತ್ತು ಸಂಪತ್ತಿನ ದೇವಿ. ಈ ಎರಡೂ ಶಕ್ತಿಮತ್ತಾದ ದೇವಿಯರು. ಈ ಮಹಾ ತಾಯಿಯರು ಒಟ್ಟುಗೂಡಿದಾಗ ಅಲ್ಲಿ ಕಲ್ಯಾಣ ಉಂಟಾಗುತ್ತದೆ,
ಅಲ್ಲಿ ಸಮಾಜದ ಪ್ರಗತಿ ಉಂಟಾಗುತ್ತದೆ ಎಂದು ಹೇಳಿದರು.
ಆದರೆ ಸಪ್ತರ್ಷಿಗಳ ಆದ್ಯತೆ, ನಾನು ಅರ್ಥಮಾಡಿಕೊಂಡಂತೆ ಮೊದಲನೆಯದು ಜ್ಞಾನ, ಎರಡನೆಯದು ಜ್ಞಾನ, ಮೂರನೆಯದು ಜ್ಞಾನವೇ ಆಗಿತ್ತು. ಒಮ್ಮೆ ನಾವು ಜ್ಞಾನದ ಹಿಂದಿರುವ ಆತ್ಮ, ಅರ್ಥ ಮತ್ತು ಸ್ಪೂರ್ತಿಯನ್ನು ಕಳೆದುಕೊಂಡರೆ, ಅದು ಕೇವಲ “ಜಾಂಬಿ” ಅಂದರೆ ಜೀವವಿಲ್ಲದ ದೇಹದಂತಾಗುತ್ತದೆ. ಆದರೆ ನಮ್ಮ ದೇಶದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ರಿಸರ್ಚ್ (ಇಸ್ರೋ), ಬೆಂಗಳೂರು ಅವರು ವಿಶ್ವಮಟ್ಟದ ಸಾಧನೆಯನ್ನು ಮಾಡಿದರು. 4,400 ಕಿಲೋ ತೂಕದ ಉಪಗ್ರಹವನ್ನು ಕಕ್ಷೆಗೆ ಕಳುಹಿಸಿದರು. ನಮ್ಮ ಸಮಾಜದ ವಿರೋಧಾಭಾಸಗಳನ್ನು ನೋಡಿ. ಅದು ಕಪ್ಪು ಮತ್ತು ಬಿಳಿಯಂತೆ, ಬೆಳಕು ಮತ್ತು ನೆರಳಿನಂತೆ ಇದೆ. ಒಬ್ಬ ವ್ಯಕ್ತಿ, ಮತ್ತಿಬ್ಬರು ಹೆಣ್ಮಕ್ಕಳ ಹಿಂದೆ ಓಡುವ ಕಾಮ, ಲೋಭ, ಅಸೂಯೆ ಇವುಗಳೆಲ್ಲ ಮನುಷ್ಯನ ಮೆದುಳಿನ ಜೀವಶಕ್ತಿಯನ್ನೇ ಕಸಿದುಕೊಳ್ಳುತ್ತಿವೆ ಎಂದರು.
ಒಬ್ಬ ವೈದ್ಯನು ತನ್ನದೇ ಹೆಂಡತಿಯನ್ನು ಆಕೆ ಸಹ ವೈದ್ಯೆಯೇ. ಕೊಲ್ಲಲು ಹೇಗೆ ಮುಂದಾಗಬಹುದು? ಇದು ಯೋಚನೆಗೆ ದಿಕ್ಕು ತೋರುವ ಪ್ರಶ್ನೆಯಾಗಿದೆ.ಭಾರತವು ಸುಧಾಂಶು ಶುಕ್ಲಾಜಿಯನ್ನು ನಾಸಾ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿತು.ಅವರ ತರಬೇತಿಗಾಗಿ 600 ಕೋಟಿ ರೂ. ಖರ್ಚುಮಾಡಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ18 ದಿನಗಳ ಸಂಶೋಧನೆಗಾಗಿ ಕಳುಹಿಸಲಾಯಿತು. ನಿಮ್ಮಲ್ಲಿ ಎಷ್ಟು ಜನರು ಸುಧಾಂಶು ಶುಕ್ಲಾ ಅವರ ತಾಯಿಯ ಆನಂದದ ಕಣ್ಣೀರನ್ನು ನೋಡಿದ್ದೀರಿ? ಅದು ಕೇವಲ ಒಬ್ಬ ತಾಯಿಯ ಕಣ್ಣೀರು ಅಲ್ಲ . ಭಾರತ ಮಾತೆಯ ಆನಂದಾಶ್ರುಗಳು ಆಗಿದ್ದವು ಎಂದರು.
ಇಂದಿನ ಸಮಾಜದಲ್ಲಿ ತೀವ್ರ ಮಾನಸಿಕ ಒತ್ತಡ ಮತ್ತು ಸಾಮಾಜಿಕ ಮಾಧ್ಯಮದ ಅತಿಯಾದ ಪ್ರಭಾವದಿಂದ ಕೆಲವರು ಅಸಹಜ ಮಾರ್ಗಕ್ಕೆ ತಿರುಗುತ್ತಿದ್ದಾರೆ.
ಯುವ ಪೀಳಿಗೆ ಕೆಲವೊಮ್ಮೆ ಅಭಿಮಾನ ಮತ್ತು ಪ್ರೇಮದ ಭ್ರಮೆಯಲ್ಲಿ ದೊಡ್ಡ ತಪ್ಪುಗಳನ್ನು ಮಾಡುತ್ತಿರುವುದು ನೋವಿನ ವಿಷಯ. ಒಂದು ಕಡೆ ನಾವು ಭಾರತದ ವಿಜ್ಞಾನಿಗಳು ಬಾಹ್ಯಾಕಾಶದತ್ತ ಏರುತ್ತಿರುವಾಗ, ಇನ್ನೊಂದು ಕಡೆ ಮೌಲ್ಯಗಳ ಕುಸಿತದಿಂದ ಸಮಾಜ ನೋವಿನ ಘಟನೆಗಳನ್ನು ನೋಡುತ್ತಿದೆ. ಇದು ನಾವು ಎಲ್ಲರೂ ಚಿಂತಿಸಬೇಕಾದ ಸಮಯ. ಶುದ್ಧತೆ ಬರುವುದು, ಮಹತ್ವ ಮತ್ತು ಶ್ರೇಷ್ಠತೆ ಬರುವುದು. ಅದಕ್ಕಾಗಿ ನಿದ್ರಿಸುತ್ತಿರುವ ಆತ್ಮವನ್ನು ಜಾಗೃತಗೊಳಿಸಿ,
ಅದನ್ನು ಸ್ವ-ಜಾಗೃತ ಕ್ರಿಯಾಶೀಲತೆಯತ್ತ ಕರೆದೊಯ್ಯಬೇಕು. ಇದನ್ನೇ ಲಾನಿಸ್ಟರ್ಸ್ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ,
ಇದನ್ನೇ ಕೆ.ಎಲ್.ಇ. ಸಂಸ್ಥೆ ಸಾಧಿಸಲು ಹೋರಾಡುತ್ತಿದೆ. ವಿಸ್ತರಣೆ ಎಂದರೆ ಜೀವನ, ಸಂಕೋಚನೆ ಎಂದರೆ ಮರಣ.
ಶಕ್ತಿ, ಕೀರ್ತಿ, ಶ್ರೇಷ್ಠತೆ, ಶುದ್ಧತೆ ಇವುಗಳೆಲ್ಲ ಬರುವುದು. ಇದು ಕಲ್ಪನೆ ಅಲ್ಲ. ಇದು ನಿಜವಾದ ತತ್ವ. ಶುದ್ಧತೆ ಬರುವುದು, ಮಹತ್ವ ಮತ್ತು ಶ್ರೇಷ್ಠತೆ ಬರುವುದು.
ಅದಕ್ಕಾಗಿ ನಿದ್ರಿಸುತ್ತಿರುವ ಆತ್ಮವನ್ನು ಜಾಗೃತಗೊಳಿಸಿ, ಅದನ್ನು ಸ್ವ-ಜಾಗೃತ ಕ್ರಿಯಾಶೀಲತೆಯತ್ತ ಕರೆದೊಯ್ಯಬೇಕು ಎಂದು ಹೇಳಿದರು. ಕೆಎಲ್ ಇಯ ಸಪ್ತರ್ಷಿಗಳಿಗೆ ಗೌರವ ಸಲ್ಲಿಸಿದರು. ಸಮಗ್ರ ಶಿಕ್ಷಣವನ್ನು ಒತ್ತಿ ಹೇಳುತ್ತಾ, ಜ್ಞಾನದಿಂದ ಅದ್ಭುತವಾದುದನ್ನು ಸಾಧಿಸಲು ಸಾಧ್ಯ. ಜ್ಞಾನವೆಂಬ ಶಕ್ತಿ ಮಾತ್ರ ಸಮಾಜವನ್ನು ರಾಷ್ಟ್ರವನ್ನು ಸಬಲಗೊಳಿಸುತ್ತದೆ. ಅಂತಹ ಜ್ಞಾನ ದಾಹವನ್ನು ನೀಗಿಸಿ ಈ ಭಾಗದಲ್ಲಿ ಅಕ್ಷರಕ್ರಾಂತಿಯನ್ನು ಮಾಡಿದ ಕೆಎಲ್ಇ ಸಂಸ್ಥೆಯ ಏಳು ಜನ ಸಪ್ತರ್ಷಿಗಳನ್ನು ನಾನು ಮನಸಾರೆ ಸ್ಮರಿಸುವುದಾಗಿ ನುಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಎಲ್ಇ ಅನ್ನು ಸ್ಥಾಪಿಸಿದ ದಾರ್ಶನಿಕ ಸ್ಥಾಪಕ ಪಿತಾಮಹರಾದ ಸಪ್ತಋಷಿಗಳಿಗೆ, ಸಂಸ್ಥಾಪಕರಿಗೆ, ದಾನಿಗಳಿಗೆ ಎಷ್ಟೇ ಗೌರವ ಸಲ್ಲಿಸಿದರು ಕಡಿಮೆಯೇ ಸಲ್ಲಿಸಿದರು. ಕೆಎಲ್ಇಯ ಪ್ರಜಾಪ್ರಭುತ್ವ ತಳಹದಿಯ ಮೇಲೆ ನಿಂತಿದೆ. ಭಾಷಾತೀತವಾಗಿ-ಧರ್ಮಾತೀತವಾಗಿ-ಜಾತ್ಯಾತೀತವಾಗಿ ಸಂಸ್ಥೆಯು ಬೆಳೆದಿದೆ. ಶಿಕ್ಷಣ ಎಲ್ಲ ಬೇಕುಬೇಡಿಕೆಯನ್ನು ಪೂರೈಸಿದೆ. ಶೈಕ್ಷಣಿಕ-ಆರೋಗ್ಯ-ಸಂಶೋಧನಾ ಕ್ಷೇತ್ರದಲ್ಲಿ ಅದ್ವಿತೀಯವಾದ ಕೊಡುಗೆಯನ್ನು ನೀಡಿ ರಾಷ್ಟ್ರನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಿದೆ. 2025 ರಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ಕೃಷಿ ಕಾಲೇಜು ಪ್ರಾರಂಭವಾದದ್ದು ಮಹತ್ವದ ಸಾಧನೆ ಎಂದು ಅವರು ಒತ್ತಿ ಹೇಳಿದರು.
ಕೆಎಲ್ಇಯ ಆರೋಗ್ಯ ಸೇವೆಯ ಕೊಡುಗೆಗಳನ್ನು ಡಾ. ಕೋರೆ ವಿವರಿಸಿದರು. ಕೆಎಲ್ಇ ವೈದ್ಯರು ಜಾಗತಿಕವಾಗಿ ಅತ್ಯುತ್ತಮ ಸೇವೆಗಳನ್ನು ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮುಂಬರುವ ದಿನಗಳಲ್ಲಿ 1000 ಹಾಸಿಗೆಗಳ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದರು.
ಇದು ಕೆಎಲ್ಇಯ ಒಟ್ಟು ಆರೋಗ್ಯ ರಕ್ಷಣಾ ಸಾಮರ್ಥ್ಯವನ್ನು 4500 ಹಾಸಿಗೆಗಳಿಗೆ ತಲುಪಿಸಿದೆ ಎಂದು ಹೇಳಿದರು.
ಜನರ ಮನೆ ಬಾಗಿಲಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೊಂಡೊಯ್ಯಲು ಈ ಪ್ರದೇಶದಲ್ಲಿ ಹೆಚ್ಚಿನ ಆಸ್ಪತ್ರೆಗಳನ್ನು ಸ್ಥಾಪಿಸುವ ಯೋಜನೆಗಳ ಬಗ್ಗೆಯೂ ಡಾ. ಕೋರೆ ಪ್ರಸ್ತಾಪಿಸಿದರು.
ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯ ಮಂಡಳಿಯ ಕಾರ್ಯಧ್ಯಕ್ಷೆ ಡಾ.ದೀಪಾ ಮೆಟಗುಡ್ ಉಪಸ್ಥಿತರಿದ್ದರು. ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಆಜೀವ ಸದಸ್ಯರು ಪಾಲ್ಗೊಂಡಿದ್ದರು.
ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕೆಎಲ್ಇ ಸಂಸ್ಥೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು, ವೈದ್ಯರನ್ನು, ಶಿಕ್ಷಕರನ್ನು, ನರ್ಸಿಂಗ್ ಸಿಬ್ಬಂದಿ ವರ್ಗದವರನ್ನ ಗೌರವಿಸಿ ಸತ್ಕರಿಸಲಾಯಿತು. 66 ಚಿನ್ನ, 49 ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಡಾ.ನೇಹಾ ದಡೇದ, ಡಾ.ಮಹೇಶ ಗುರನಗೌಡರ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಡಾ.ದೀಪಾ ಮೆಡಗುಡ್ ವಂದಿಸಿದರು.
ಡಾ.ಪ್ರಭಾಕರ ಕೋರೆಯವರದ್ದು ಅದ್ಬುತ ಪ್ರೇರಣಾದಾಯಕ ವ್ಯಕ್ತಿತ್ವ : ದೇಶದ ಅತ್ಯಂತ ದೊಡ್ಡ ಸಂಸ್ಥೆ ಕಟ್ಟಿದ ಜನ ನಾಯಕರು : ಜಯರಾಮ ಬಣ್ಣನೆ


