This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಲಿಂಗರಾಜ ಜಯಂತಿಯನ್ನು ಅಧಿಕೃತವಾಗಿ ಸರಕಾರ ಮಾಡುವಂತಾಗಬೇಕು : ಡಾ.ಪ್ರಭಾಕರ ಕೋರೆ The government should make Lingaraja Jayanti official: Dr. Prabhakar Kore


ಕಾಲಘಟ್ಟ ನೆನೆಯಬೇಕು. ಸಂಪತ್ತನ್ನು ಸಮಾಜದ ಶ್ರೇಯಸ್ಸಿಗಾಗಿ ಬಿಟ್ಟುಕೊಡುವವನ ಗುಣ, ಶ್ರೇಯಸ್ಸು ನಿಜಕ್ಕೂ ಮಾಗುವಿಕೆಯ ಸಂಕೇತ. ಸಂಪತ್ತಿನ ಹಿಂದೆ ಓಡಬೇಡಿ. ಮನದಲ್ಲಿನ ಮೋಹದ ಮಾಲಿನ್ಯ ದೂರಮಾಡಿ.

-ಪ್ರಜ್ಞಾ ಮತ್ತಿಹಳ್ಳಿ, ಪ್ರಾಧ್ಯಾಪಕಿ

 

ಬೆಳಗಾವಿ :
ಜನತೆಯ ಏಳ್ಗೆಗೆ ಸರಿಯಾದ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಇಡೀ ಸಂಪತ್ತನ್ನು ಮತ್ತಾವುದಕ್ಕಾದರೂ ಬಳಸಬಹುದಾಗಿತ್ತು, ಆದರೆ ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆದ ಅವರು ಭವ್ಯಮಾನವರು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಅವರು ಲಿಂಗರಾಜ ಕಾಲೇಜಿನಲ್ಲಿ ಬೆಳಗಾವಿ ಎಲ್ಲ ಕೆಎಲ್‌ಇ ಅಂಗಸಂಸ್ಥೆಯ ಆಶ್ರಯದಲ್ಲಿ ಜರುಗಿದ ಲಿಂಗರಾಜ 162ನೇ ಜಯಂತಿ ಉತ್ಸವದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಲಿಂಗರಾಜರು ಉದಾತ್ತ ಉದ್ದೇಶಕ್ಕಾಗಿ ಅರ್ಥಾತ್ ಶಿಕ್ಷಣ ಪ್ರೀತಿಗಾಗಿ, ಸಮಾಜದ ಉಜ್ವಲ ಭವಿಷ್ಯಕ್ಕಾಗಿ ದಾನ ನೀಡಿ ಔದರ‍್ಯವನ್ನು ಮೆರೆದಿದ್ದಾರೆ. ಅವರೊಂದಿಗೆ ಸಮಾಜದಲ್ಲಿ ಉದಾರವಾಗಿ ದಾನ ನೀಡಿದವರೆಂದರೆ ರಾಜಾಲಖಮಗೌಡರು ಹಾಗೂ ಭೂಮರಡ್ಡಿ ಬಸಪ್ಪನವರು. ಇವರೆಲ್ಲ ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ನೀರುಗೊಬ್ಬರವಾಗಿ ಉತ್ತರ ಕರ್ನಾಟಕದ ಶೈಕ್ಷಣಿಕ ದಾಹವನ್ನು ನೀಗಿಸುವಲ್ಲಿ ಪ್ರಯತ್ನಿಸಿದರು. ನಮ್ಮ ಸಮಾಜವನ್ನು ಪೋಷಿಸಿ ಬೆಳೆಸಿದರು. ಒಂದು ಆದರ್ಶವಾಗಿ ಮುಂದಿನ ತಲೆಮಾರಿನವರಿಗೆ ದಾನ ನೀಡಲು ಪ್ರೇರಣೆ ಒದಗಿಸಿದರು.
ಇಂದು ಸರಕಾರ ಈಗ ಮಕ್ಕಳಿಗೆ ಸ್ಕಾಲರಶಿಫ್ ನೀಡುತ್ತಿದ್ದಾರೆ, ಯಾರೂ ಕಲ್ಪನೆ ಮಾಡದ ಸಮಯದಲ್ಲಿ ಲಿಂಗರಾಜರು ಸಮಾಜದ ಏಳ್ಗೆಗೆ ಮಹಾದಾನ ನೀಡಿ ಶಿಕ್ಷಣಕ್ಕೆ ಒತ್ತು ನೀಡಿದರು. ಲಿಂಗರಾಜ ಟ್ರಸ್ಟಿಗಳು ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಲು ನಾನು ಬಹಳ ಸಲ ಹೇಳಿದ್ದೆ. ಅದು ಸಾಧ್ಯವಾಗಲಿಲ್ಲ. ಕೆಎಲ್‌ಇಯ ಎಲ್ಲ ಅಂಗ ಸಂಸ್ಥೆಗಳಲ್ಲಿ ಅವರ ಜಯಂತಿಯನ್ನು ಆಚರಿಸಿ ನಮ್ಮ ಸಂಸ್ಥೆಯ ಮಕ್ಕಳಲ್ಲಿ ಅವರ ದಾನದ ತ್ಯಾಗದ ಕುರಿತು ಹೇಳುತ್ತಿದ್ದೇವೆ. ಅದು ಸಾಲದು ಆದರೆ ಸಮಸ್ತ ನಾಡಿಗೆ ಲಿಂಗರಾಜರ ಆದರ್ಶವನ್ನು ಪರಿಚಯಿಸುವುದು ಅತೀ ಮುಖ್ಯವಾಗಿದ್ದು, ಜಯಂತ್ಯೋತ್ಸವವನ್ನು ಸರಕಾರವೇ ಪ್ರತಿವರ್ಷ ಜರುಗಿಸುವಂತಾಗಬೇಕು. ಸರ್ಕಾರದ ನೇತೃತ್ವದಲ್ಲಿ ಜರುಗಿದರೆ ಇನ್ನೂ ಔಚಿತ್ಯಪೂರ್ಣವಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಕೇಳಲಾಗುವುದು ಎಂದು ಹೇಳಿದರು.

ಚೆನ್ನಮ್ಮ ಕಿತ್ತೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಉಪನ್ಯಾಸ ನೀಡುತ್ತಾ, ‘ಕಾಮಾನೆಗಳು ಪುರಸ್ಕಾರ ಯಾವುದು ನಿಜವಲ್ಲ. ಸೋಜಿಗದ ಸೂಜಿಮಲ್ಲಿಗೆ ಆಯುಷ್ಯ ಎಷ್ಟು ಸೆಳೆಯುತ್ತೆ. ನಶ್ವರತೆಯ ಎಳೆಯನ್ನು ಇಟ್ಟುಕೊಂಡು ಬದುಕಬೇಕು. ತನ್ನದೇ ಒಡಲಿನಿಂದ ಬಲಿ ಹಾಕಿಕೊಂಡ ಜೇಡನಂತೆ ಒದ್ದಾಡಬೇಕಾಗುತ್ತೆ. ಈ ಜಡ ದೇಹಕ್ಕೆ ಎಷ್ಟೊಂದು ಸಡಗರ ಸಂಭ್ರಮ. ಒಂದು ಸಲಜ್ಞಾನದ ಕಿರಣಬಂದ ಮೇಲೆ ಬದುಕುವದು ಕಷ್ಟ. ನಮ್ಮ ಹುಟ್ಟಿನೊಂದಿಗೆ ಸದ್ಘುಣಬೇಕು. ಅಂತಹ ಸದ್ಗುಣದ ವ್ಯಕ್ತಿ ಲಿಂಗರಾಜರು ಆಗಿದ್ದರು. ಸಮಸ್ತ ನಾಡಿ ಅವರು ನೀಡಿದ ಕೊಡುಗೆ ಅನನ್ಯ ಅನುಪಮ. ಅವರ ಪಥ ದಾರ್ಶನಿಕವಾಗಿತ್ತು. ಅನೇಕ ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದರು. ಲಿಂಗರಾಜರ ತ್ಯಾಗದಲ್ಲಿ ಒಂದು ವೈಶಿಷ್ಟ್ಯವುಂಟು. ಅವರು ಸ್ವಾರ್ಥವನ್ನು ಸಂಪೂರ್ಣವಾಗಿ ಮರೆತು ತಮ್ಮ ಇಡಿಯ ಆಸ್ತಿಯನ್ನು ಸಮಾಜದ ಶಿಕ್ಷಣಕ್ಕಾಗಿ ಧಾರೆಯೆರೆದರು. ಔದರ‍್ಯ ಮತ್ತು ಕರುಣೆ ಲಿಂಗರಾಜರ ಉದಾತ್ತ ಬದುಕಿನ ಮೌಲ್ಯಗಳಾಗಿದ್ದವು. ಲಿಂಗರಾಜರು ಮರಣ ಹೊಂದುವ ಪೂರ್ವದಲ್ಲಿ ತಮ್ಮ ಆತ್ಮೀಯ ಮಿತ್ರರಾಗಿದ್ದ ರಾವಬಹದ್ದೂರ ಅರಟಾಳ ರುದ್ರಗೌಡರ ಸಮ್ಮುಖದಲ್ಲಿ ಸಂಸ್ಥಾನದ ಸಕಲ ಸಂಪತ್ತನ್ನು ಮಕ್ಕಳ ಶಿಕ್ಷಣಕ್ಕಾಗಿ ಮುಡುಪಾಗಿಟ್ಟರು. ಅಂತಹ ಮಹಾತ್ಮರನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮೀಜಿಯವರು ಮಾತನಾಡುತ್ತ,
12ನೇ ಶತಮಾನದಲ್ಲಿ ಬಸವಣ್ಣನವರ ದಾಸೋಹ ಪರಂಪರೆಯ ಫಲವಾಗಿ ಲಿಂಗರಾಜ ಅಂತವರು ಸಮಾಜವನ್ನು ಉಳಿಸುವ ಕಾರ್ಯ ಮಾಡಿದರು. ಕಾಲಘಟ್ಟ ಬದಲಾಗಿದೆ. ಶತಮಾನದ ಹಿಂದೆ ಶಿಕ್ಷಣ ಇರಲಿಲ್ಲ ಸಂಸ್ಕಾರ ಇತ್ತು. ಆದರೆ ಇಂದು ಶಿಕ್ಷಣ ಇದೆ ಸಂಸ್ಕಾರ ಇಲ್ಲ. ಜನರ ಮತ ಬೇಕು ಜನ ಹಿತ ಬೇಡ. ಸಂಸ್ಕಾರ ನೀಡುವ ಕಾರ್ಯ, ಮಗುವಿನ ಹುಟ್ಟು ಮಾತೃಭಾಷೆ ಇವೆರಡು ಮಗುವಿನ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆ. ಲಿಂಗರಾಜರು, ಅರಟಾಳ ರುದ್ರಗೌಡರು, ಹರ್ಡೇಕರ ಮಂಜಪ್ಪನವರಂತಹ ಹಲವು ವ್ಯಕ್ತಿಗಳಂತಹ ಕಾಲಘಟ್ಟ ಒಂದಾದರೆ, 1980ರ ಕಾಲಘಟ್ಟದ ವರೆಗೆ ಎಸ್.ನಿಜಲಿಂಗಪ್ಪ, ಶಿವಬಸವ ಮಹಾಸ್ವಾಮಿಗಳ ಅಂತಹ ದಾರ್ಶನಿಕರ, ನಿಸ್ಪೃಹ ರಾಜಕಾರಣಿಗಳ ಒಂದು ಕಾಲವಾಗಿತ್ತು. ತದನಂತರದಲ್ಲಿ ಇಂದು ಸಮಾಜಕ್ಕಾಗಿ ಸಮರ್ಪಿಸಿಕೊಂಡ ಡಾ.ಪ್ರಭಾಕರ ಕೋರೆಯವರದು ಮೂರನೇ ಕಾಲಘಟ್ಟವೆಂದುಕೊಂಡಿದ್ದೇನೆ. ಅವರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ರಾಜಕೀಯವಾಗಿ ಉತ್ತಮ ಭವಿಷ್ಯವನ್ನು ಹೊಂದಿದ್ದರೂ ಅವರು ಅದನ್ನು ಬದಿಗೆ ಸರಿಸಿ ಶಿಕ್ಷಣದ ಏಳ್ಗೆಗಾಗಿ ಬದುಕನ್ನು ಸವಿಸಿದ್ದಾರೆ. ಅವರನ್ನು ಲಿಂಗರಾಜ ಜಯಂತಿ ಉತ್ಸವದ ಸಂದರ್ಭದಲ್ಲಿ ಸತ್ಕರಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದು ನುಡಿದರು.

ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಎಚ್.ಎಂ. ಚೆನ್ನಪ್ಪಗೋಳ ವಂದಿಸಿದರು. ಡಾ.ಮಹೇಶ ಗುರನಗೌಡರ ಹಾಗೂ ಪ್ರೊ.ಸಿದ್ಧನಗೌಡ ಪಾಟೀಲ ನಿರೂಪಿಸಿದರು. ಪ್ರಾಚಾರ್ಯ ಡಾ.ಎಚ್.ಎಂ. ಮೇಲಿನಮನಿ ಉಪಸ್ಥಿತರಿದ್ದರು.
ಡಾ.ಎಫ್.ವ್ಹಿ.ಮಾನ್ವಿ, ಡಾ.ಬಸವರಾಜ ಜಗಜಂಪಿ, ಪ್ರಿ.ಬಿ.ಎಸ್.ಗವಿಮಠ, ಪ್ರೊ.ಎಂ.ಎಸ್.ಇಂಚಲ, ಯ.ರು.ಪಾಟೀಲ, ಪ್ರೊ.ಎಸ್.ಆರ್.ಗುಂಡಕಲ್ಲೆ, ಕೆಎಲ್‌ಇ ಸಹ ಕಾರ್ಯದರ್ಶಿಗಳಾದ ಡಾ.ಪ್ರಕಾಶ ಕಡಕೋಳ, ಡಾ.ಸುನಿಲ ಜಲಾಲಪುರೆ, ಆಜೀವದ ಸದಸ್ಯರಾದ ಎಂ.ಎಸ್.ಬಳಿಗಾರ, ಡಾ.ಶಿವಯೋಗಿ ಹೂಗಾರ, ಪ್ರೊ.ಶೀತಲ ನಂಜಪ್ಪನವರ, ಡಾ.ಎಸ್.ಸತೀಶ ಪಾಟೀಲ ಉಪಸ್ಥಿತರಿದ್ದರು. ಮಾಹೇಶ್ವರ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು, ಹಾಗೂ ಕೀರ್ತಿ ಕಡಕೋಳ ಸಂಗಡಿಗರು ಪ್ರಾರ್ಥಿಸಿದರು.
ಜಯಂತಿ ಉತ್ಸವದ ನಿಮಿತ್ತ ಡಾ.ಪ್ರಭಾಕರ ಕೋರೆ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರು ರಕ್ತದಾನವನ್ನು ಮಾಡಿದರು.


Jana Jeevala
the authorJana Jeevala

Leave a Reply