This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ವಿಶ್ವಕ್ಕೆ ಮಾದರಿಯಾದ ಭಾರತ ; ಡಾ.ಎಂ.ವಿ. ಜಾಲಿ India as a model for the world; Dr. M.V. jolly


 

ಬೆಳಗಾವಿ :
ಬಳ್ಳಾರಿಯ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾದ ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅವರಿಗೆ ಇತ್ತೀಚೆಗೆ ನಡೆದ ಕೊನಿಯಾಪ್ಸ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.

ಪದವಿ ಸ್ವೀಕರಿಸಿ ಮಾತನಾಡಿದ ಡಾ. ಎಂ.ವಿ. ಜಾಲಿ ಅವರು, ಭಾರತದ ಪ್ರಾಚೀನ ಪಾಂಡಿತ್ಯದಿಂದ ಪ್ರೇರಿತರಾಗಿ ಅನೇಕ ವಿದೇಶಿ ವಿಜ್ಞಾನಿಗಳು ಸಂಶೋಧನೆಗೈದು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನಧಾರಿತ ಸೇವೆಗಳಿಂದ ಭವಿಷ್ಯದಲ್ಲಿ ವಿಜ್ಞಾನ ಲೋಕದಲ್ಲಿ ಮತ್ತಷ್ಟು ಅಚ್ಚರಿಗಳನ್ನು ಕಾಣಬಹುದು ಎಂದು ಹೇಳಿದರು.
ಗುಂಟೂರು ವಿಜ್ಞಾನ ಅಕಾಡೆಮಿ ಆಫ್ ಸೈನ್ಸ್, ಟೆಕ್ನಾಲಜಿ ಮತ್ತು ರಿಸರ್ಚ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ. ನಾಗಭೂಷಣ್ ಅವರು ಸಮ್ಮೇಳನ ಉದ್ಘಾಟಿಸಿ ಮಾತಾನಾಡಿ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ ‘ದೇಶದಲ್ಲಿ ಸುಸ್ಥಿರ ಕಲಿಕೆ ಮತ್ತು ಶಿಕ್ಷಣ ಕುರಿತು ಆಲೋಚಿಸುವುದು ಕುಂಠಿತಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಶಾಲಾ ಹಂತದಿಂದ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ಕೊಟ್ಟರೆ ಮುಂದೆ ಉನ್ನತ ವ್ಯಾಸಂಗ ಮಾಡುವಾಗ ಹೊಸ ಆವಿಷ್ಕಾರಗಳ ಬಗ್ಗೆ ಯೋಚಿಸಲು ಅವರಿಗೆ ಸಾಧ್ಯವಾಗಲಿದೆ ಎಂದರು.
ಐಪಿಎಸ್ ಸಂಸ್ಥೆಯ ಕೊನಿಯಾಪ್ಸ್ ಸಮ್ಮೇಳನದ ರೂವಾರಿಯಾಗಿದ್ದ ಸಂಸ್ಥೆಯ ಸಂಸ್ಥಾಪಕರಾಗಿದ್ದ ದಿ. ಪ್ರೊ. ಪಾಂಡೆ ಅವರನ್ನು ಸ್ಮರಿಸಲಾಯಿತು.

ಐಎಪಿಎಸ್ ಸಂಸ್ಥೆ ಅಧ್ಯಕ್ಷ ಪ್ರೊ. ಎಚ್ ಎಸ್. ಧಾಮಿ ಮತ್ತು ಕಾರ್ಯದರ್ಶಿ ಪ್ರೊ. ಶುಕ್ಲಾ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಮರಿಕ ಫ್ಲೋರಿಡಾ ಕೇಂದ್ರ ವಿಶ್ವವಿದ್ಯಾಲಯದ ಪ್ರೊ. ರಾಮ್‌ಮೋಹಪಾತ್ರಾ, ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಧಾರವಾಡದ ನಿರ್ದೇಶಕ ಪ್ರೊ. ಎಸ್ ಎಂ ಶಿವಪ್ರಸಾದ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್ ಸಿ ಪಾಟೀಲ, ಪ್ರೊ. ರಮೇಶ್ ಓಲೇಕಾರ, ಕೆವಿ ಪ್ರಸಾದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply