This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊದಲು ನೀಡಿದವರು ಶರಣರು – ಡಾ. ಮಹೇಶ್ ಗುರನಗೌಡರ The first to give freedom of expression to women was Sharan - Dr. Mahesh Guran Gowda


 

ಬೆಳಗಾವಿಯ ಕಾರಂಜಿ ಮಠದಲ್ಲಿ 261ನೇ ಶಿವಾನುಭವ ಗೋಷ್ಠಿ

ಬೆಳಗಾವಿ :
ಸ್ತ್ರೀ ಸಮಾನತೆ ಹರಿಕಾರರಾದ ಶರಣರು ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡುವ ಮೂಲಕ ಸಮಾಜಕ್ಕೆ ದಿವ್ಯ ಸಂದೇಶವನ್ನು ನೀಡಿದರು ಎಂದು ಪ್ರಾಧ್ಯಾಪಕ ಡಾ. ಮಹೇಶ ಗುರನಗೌಡರ ಹೇಳಿದರು.
ಬೆಳಗಾವಿಯ ಕಾರಂಜಿಮಠದ 261 ನೇ ಶಿವಾನುಭವ ಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ಸ್ತ್ರೀ ಸಂವೇದನೆ ವಿಷಯ ಕುರಿತು ಮಾತನಾಡಿದರು.

ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಸಮಾನತೆಯನ್ನು ನೀಡಲಾಗಿತ್ತು. ತದನಂತರದಲ್ಲಿ ಹುಟ್ಟಿಕೊಂಡ ಶಾಸ್ತ್ರ ಗ್ರಂಥಗಳು ಸಾಮಾಜಿಕ ಕಟ್ಟಲೆಗಳನ್ನ ರೂಪಿಸಿ ಸ್ತ್ರೀಯರ ಹಕ್ಕುಗಳನ್ನು ಕಸಿದುಕೊಂಡರು. ಸ್ತ್ರೀ ಶೋಷಣೆಯನ್ನು ಅನುಭವಿಸುವಂತಾಯಿತು. ಆದರೆ ಶರಣರು ಲಿಂಗ ಸಮಾನತೆಯನ್ನು ನೀಡುವುದರ ಮೂಲಕ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದರು. ಹೆಣ್ಣು ಮಾಯೆಯಲ್ಲ ಎಂದರು.

ಅವಳು ಪ್ರತ್ಯಕ್ಷ ದೇವತೆ ಎಂದು ನಿರೂಪಿಸಿದರು. ದಾಂಪತ್ಯ ಜೀವನಕ್ಕೆ ಒತ್ತು ನೀಡಿದರು. ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು. ಕಾಯಕದಲ್ಲಿಯೂ ಸಮಾನತೆಯನ್ನು ನೀಡಿದರು. ಛಲಬೇಕು ಶರಣಂಗೆ ಪರಸತಿಯನ್ನು ಒಲ್ಲೆಂಬ ಸ್ತ್ರೀಯರ ನೋಡುವ ದೃಷ್ಟಿಕೋನವನ್ನು ಬದಲಾಯಿಸಿದರು. ಇಂದು ವಿಶ್ವದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲನ್ನು ಇಟ್ಟಿದ್ದಾಳೆ. ಸಮಾಜದ ಮುಖ್ಯ ವಾಹಿನಿಯಾಗಿದ್ದಾರೆ. ಅವಳು ಮಾಡದೇ ಇರತಕ್ಕಂತಹ ಕ್ಷೇತ್ರವೇ ಉಳಿದಿಲ್ಲ. ಆದರೂ ರಾಜಕೀಯ ಹಿನ್ನಡೆಯನ್ನ ಅನುಭವಿಸುವಂಥಾಗಿದೆ. ಸಾಧನೆಯ ಶಿಖರವನ್ನು ಏರಿರುವ ಸ್ತ್ರೀ ಸುಶಿಕ್ಷಿತಳಾಗಿದ್ದಾಳೆ. ಆದರೆ ಸುರಕ್ಷತೆಯನ್ನು ಪಡೆಯುವಂತೆ ಆಗಿಲ್ಲ. ಹಲವು ಕ್ಷೇತ್ರಗಳಲ್ಲಿ ದೌರ್ಜನ್ಯಕ್ಕೆ ಈಡಾಗುತ್ತಿದ್ದಾಳೆ. ಹಾಗಾಗದ ಹಾಗೆ ಸಮಾಜದಲ್ಲಿ ಅವಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಂಗೀತಗಾರ ಶ್ರೀರಂಗ ಜೋಶಿ ಮಾತನಾಡಿ, ಪುಟ್ಟರಾಜ ಗವಾಯಿಗಳು ಈ ನಾಡು ಕಂಡ ಅಪರೂಪದ ಸಂಗೀತ ವಿದ್ವಾಂಸರಾಗಿ ಕಲೆ ಸಂಸ್ಕೃತಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು. ಬೆಳಗಾವಿಯ ಸಂಸ್ಕೃತಿಕ ಕೇಂದ್ರವಾಗಿರುವ ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, 19ನೇ ಶತಮಾನದಲ್ಲಿ ಹಾನಗಲ್ ಕುಮಾರಸ್ವಾಮಿಗಳು ಸಮಾಜವನ್ನು ಕಟ್ಟುವ ಕೆಲಸ ಮಾಡಿದರು. ಸ್ತ್ರೀ ಸಮಾನತೆಗೆ ಆದ್ಯತೆ ನೀಡಿದರು. ಅವರ ಜೀವನವನ್ನು ಅರಿತವರು ಮಾತ್ರ ಅವರ ಸಾಮಾಜಿಕ ವಿಚಾರಧಾರೆಗಳನ್ನು ಅರಿಯಲು ಸಾಧ್ಯ. ಇಂದು ಮಹಿಳೆಯರು ಮುಕ್ತವಾದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅಪಾರವಾದ ಜ್ಞಾನವನ್ನು ಸಂಪಾದಿಸುತ್ತಿದ್ದಾರೆ. ಅವರ ಸಾಧನೆಗೆ ನಾವು ಅಭಿನಂದಿಸಲೇಬೇಕು. ವಿಶ್ವ ಮಹಿಳಾ ದಿನಾಚರಣೆಯ ಶುಭ ಸಂದರ್ಭದಲ್ಲಿ ಅವರ ಕೊಡುಗೆ ಜಾಗತಿಕ ಮತ್ತಷ್ಟು ವಿಸ್ತರಿಸಿ ಎಂದು ನುಡಿದರು.
ಎ.ಕೆ. ಪಾಟೀಲ ನಿರೂಪಿಸಿದರು. ನ್ಯಾಯವಾದಿ ವಿ.ಕೆ. ಪಾಟೀಲ ವಂದಿಸಿದರು. ಮಾತೃ ಬಳಗದ ತಾಯಿಂದಿರು ಪ್ರಾರ್ಥಿಸಿದರು.
ಡಾ.ಎಫ್. ವಿ. ಮಾನ್ವಿ, ವೀರಶೈವ ಮಹಾ ಘಟಕದ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಸರಳಾ ಹೇರೇಕರ್, ಡಾ. ರಂಜನಾ ಗೋದಿ ಮೊದಲಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply