ಬೆಳಗಾವಿ : ಸಾತ್ವಿಕ ನಡವಳಿಕೆ, ಸಾತ್ವಿಕ ಜೀವನ , ಸಸ್ಯಹಾರ , ಒತ್ತಡರಹಿತ ದಿನಚರಿ ಇವುಗಳಿಂದ ಮಾತ್ರ ಸ್ವಾಸ್ಥ್ಯ ಜೀವನ ಸಾಧ್ಯ ಎಂದು ನವದೆಹಲಿಯ ವೈದ್ಯ ಡಾ. ಕುಲದೀಪ್ ಸಿಂಗ್ ಹೇಳಿದರು.
ಅವರಿಂದು ಬೆಳಗಾವಿಯಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ
ಡಾ ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಆತ್ಮ ಸ್ವಾಸ್ಥ್ಯ ಶ್ರೀ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಶ್ರೀ ಮಠದಿಂದ ತಮಗೆ ಕೊಡಮಾಡಲಾದ ಆತ್ಮ
ಸ್ವಾಸ್ಥ್ಯ ಶ್ರೀ ಪ್ರಶಸ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಶ್ರೀ ಮಠದಿಂದ ಕೊಡ ಮಾಡಲಾದ ಆತ್ಮಸ್ವಾಸ್ಯ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಬಹಳಷ್ಟು ಜನರು ಅಶಾಂತಿಯಿಂದ ಬಳಲುತ್ತಿದ್ದಾರೆ. ಅಧ್ಯಾತ್ಮದ ಕುರಿತು ಚಿಂತನೆ ನಡೆಸುತ್ತಿಲ್ಲ. ಕೇವಲ ಧ್ಯಾನದಿಂದಲೇ ಹಲವಾರು ರೋಗಗಳನ್ನು ವಾಸಿ ಮಾಡಬಹುದು ಎಂಬ ವಿಚಾರ ನಾನು ಮೌಂಟ್ ಅಬುಧಲ್ಲಿದ್ದಾಗ ಅನುಭವಕ್ಕೆ ಬಂದಿತು ಜೀವನದಲ್ಲಿ
ಅಧ್ಯಾತ್ಮವನ್ನು ಕೂಡ ಅಳವಡಿಸಿಕೊಳ್ಳುವುದು ಅಗತ್ಯ. ಸಮಾಜದಲ್ಲಿಂದು ಎದುರಿಸುತ್ತಿರುವ
ಬಹಳಷ್ಟು ಆರೋಗ್ಯ ಸಂಬಂಧಿ ಸಮಸ್ಯೆಗಳು ನಮ್ಮ ಜೀವನ ಶೈಲಿಯಿಂದ ಬಂದಿವೆ ಅತಿಯಾದ
ಒತ್ತಡದ ಜೀವನ ನಮಗೆ ಹಲವು ರೋಗಗಳನ್ನು ತಂದಿಡುತ್ತವೆ. ಇದನ್ನು ತಪ್ಪಿಸಬೇಕಾದರೆ
ಸಾತ್ವಿಕ ಜೀವನ ನಡೆಸುವುದು ಬಹಳ ಮುಖ್ಯವಾಗಿದೆ. ಸಾತ್ವಿಕ ನಡವಳಿಕೆ ಸಾತ್ವಿಕ ಆಹಾರ ಸಸ್ಯಹಾರ ನಿರಂತರ ಬೆಳಗಿನ ವಾಕಿಂಗ್ ಸರಿಯಾದ ಸಮಯಕ್ಕೆ ಊಟ ಸರಿಯಾದ ಸಮಯಕ್ಕೆ ನಿದ್ದೆ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸ್ವಾಸ್ಥ್ಯ ಜೀವನ ನಮ್ಮದಾಗುತ್ತದೆ ಎಂದು ಅವರು ಹೇಳಿದರು.
ಜೀವನ ಬಹಳ ಮುಖ್ಯವಾದದ್ದು. ನಾವು ಆರೋಗ್ಯವಂತರಾಗಿದ್ದರೆ ಮಾತ್ರ
ಬೇರೆಯವರ ಬಗ್ಗೆ ಕಾಳಜಿ ವಹಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ
ಕಾಳಜಿಯನ್ನು ನಮ್ಮ ಬಗ್ಗೆ ನಾವು ವಹಿಸಲೇಬೇಕು. ಬೇರೆಯವರ ಬಗ್ಗೆ ಆಗಲಿ ಅನಗತ್ಯ ವಿಚಾರಗಳ ಬಗ್ಗೆ ಆಗಲಿ ಅನಗತ್ಯವಾಗಿ ಒತ್ತಡಕ್ಕೆ ಒಳಗಾಗುವುದು ಒಳ್ಳೆಯದಲ್ಲ.
ದೇಶದಲ್ಲಿಂದು ಏಳು ಕೋಟಿಗೂ ಅಧಿಕ ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕನಿಷ್ಠ
9 ಕೋಟಿ ಜನ ಹೆದರಿ ಸಕ್ಕರೆ ಕಾಯಿಲೆ ಕುರಿತು ಟೆಸ್ಟ್ ಮಾಡಿಸಿಕೊಂಡಿಲ್ಲ. ಅದೇ ರೀತಿ
ದಿನದಿಂದ ದಿನಕ್ಕೆ ಹೃದಯ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ರಕ್ತದ ಒತ್ತಡ ಸಮಸ್ಯೆಯಿಂದ ಸಂಖ್ಯೆಯು ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾರಣ ಅತಿಯಾದ
ಮಾನಸಿಕ ಒತ್ತಡ ಎಂದು ಅವರು ನುಡಿದರು. ಕೇವಲ ದುಡ್ಡು ಗಳಿಕೆಯತ್ತ ಮುಖ ಮಾಡದೆ
ರೋಗಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡು ಚಿಕಿತ್ಸೆ ನೀಡಿದಾಗ ವೈದ್ಯರ
ಮನಸ್ಸಿಗೂ ಸಮಾಧಾನವಿರುತ್ತದೆ. ಅದರೊಂದಿಗೆ ರೋಗಿಗಳು ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಆರೋಗ್ಯವಂತರಾಗುತ್ತಾರೆ ಎಂದವರು ಹೇಳಿದರು. ಪ್ರೊ.ಎ.ಕೆ.ಪಾಟೀಲ ಸ್ವಾಗತಿಸಿದರು.ಪ್ರೊ. ಸಿ.ಜೆ. ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ. ಗುಡಸಿ ಮಾತನಾಡಿ ತಾವು ನಾಗನೂರು ರುದ್ರಾಕ್ಷಿ ಮಠದಲ್ಲಿ ಕಳೆದ ವಿದ್ಯಾರ್ಥಿ ದಿನಗಳನ್ನು
ನೆನಪಿಸಿಕೊಂಡರು ತಾವು ನಿಜವಾದ ಜೀವನದ ಪಾಠವನ್ನು ಕಲಿತದ್ದೇ ಈ ಪ್ರಸಾದ ನಿಲಯದಲ್ಲಿ
ಎಂದು ಹೇಳಿದ ಅವರು ತಮ್ಮ ಜೀವನದಲ್ಲಿ ಜ್ಞಾನದ ಹಸಿವನ್ನು ಮತ್ತು ಕನಸುಗಳನ್ನು
ಬಿತ್ತಿದ್ದೆ ಈ ಪ್ರಸಾದ ನಿಲಯ ಇಲ್ಲಿನ ಶಿಸ್ತು ಬದ್ಧ ಜೀವನ ಶಿಸ್ತಿನ ಶಿಕ್ಷಣ ಪದ್ಧತಿ
ಇಲ್ಲಿದ್ದ ಗುರುವುರಂದದವರು ಹಿರಿಯ ಸ್ವಾಮೀಜಿಯವರು ಎಲ್ಲವನ್ನು ನೆನಪಿಸಿಕೊಂಡ ಅವರು ಈ ಪುಣ್ಯಭೂಮಿಯಲ್ಲಿ ತಾವು ಕಲಿತಿದ್ದೆ ಇಂದಿನ ತಮ್ಮ ಈ ಉನ್ನತ ಸ್ಥಿತಿಗೆ ಕಾರಣ ಎಂ ಖ್ಯಾತ ವೈದ್ಯ ಡಾ ಎಚ್. ಬಿ. ರಾಜಶೇಖರ ಅವರ ಬಾಯಿಯಿಂದ ಅಧ್ಯಾತ್ಮದ ಕುರಿತು ಮಾತುಗಳನ್ನು ಕೇಳಿದ್ದು ತಮಗೆ ಆಶ್ಚರ್ಯವನ್ನುಂಟು ಮಾಡಿದೆ ಸ್ವಾಸ್ಥ್ಯ ಜೀವನಕ್ಕೆ ಕೇವಲ ವೈದ್ಯಕೀಯ ಉಪಚಾರ ಸಾಲದು ಅದಕ್ಕೆ ಅಧ್ಯಾತ್ಮ ಕ ಜೀವನ ಬಹಳ ಅವಶ್ಯ ಎಂದು ಅವರು ಹೇಳಿದರು ಸ್ವಾಸ್ಥ್ಯ ಜೀವನಕ್ಕೆ ಅಗತ್ಯವಿರುವ ಚಟುವಟಿಕೆಗಳನ್ನು ಜೀವನದಲ್ಲಿ
ಅಳವಡಿಸಿಕೊಳ್ಳಬೇಕು ಎಂದು ಅವರು ನುಡಿದರು. ಅದೇ ರೀತಿ ಶ್ರೀಮಠದಿಂದ ಕೊಡ ಮಾಡಲಾಗುವ “ಪ್ರಸಾದ ಶ್ರೀ ” ಪ್ರಶಸ್ತಿಯನ್ನು
ಬೈಲಹೊಂಗಲದ ಈರಣ್ಣ ಬಗನಾಳ , ಬೆಳಗಾವಿಯ ಶ್ರೀ ಬಸವರಾಜ್ ರೊಟ್ಟಿ , ಎನ್.
ಬಿ .ಪಾಟೀಲ್ , ಬದಾಮಿಯ ನಿವೃತ್ತ ಜಿಲ್ಲಾ ಸರ್ಜನ್ ಡಾ . ಕರವೀರಪ್ರಭು ಕ್ಯಾಲಕೊಂಡ
ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿಯಿಂದ ” ಸಂಯಮ ” ಪ್ರಶಸ್ತಿ ಪುರಸ್ಕೃತರಾದ ಭಾಲ್ಕೀಯ
ಸಂಸ್ಥಾನ ಹಿರೇಮಠದ ಶ್ರೀ ಗುರುಬಸವ ಪಟ್ಟದೇವರ ಸಾನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದ ನೇತೃತ್ವವನ್ನು ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಚಿಂಚಣಿಯ ಸಿದ್ದ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗಾವಿ ಕಾರಂಜಿ ಮಠದ ಕಿರಿಯ ಶ್ರೀಗಳಾದ ಡಾ.ಶಿವಯೋಗಿ ದೇವರನ್ನು ಸನ್ಮಾನಿಸಲಾಯಿತು. ನಾಗನೂರು ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ .ಎಂ .ಆರ್. ಉಳ್ಳೆಗಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್.ಬಿ. ರಾಜಶೇಖರ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಿ.ಜಿ.ಮಠಪತಿ ನಿರೂಪಿಸಿ ವಂದಿಸಿದರು.
ಮುದುಕಲ್ಲಿನ ಶ್ರೀ ಮಹಾಂತಲಿಂಗ ಸ್ವಾಮಿಗಳು ಕಡೋಲಿಯ ಶ್ರೀ ಗುರುಬಸವಲಿಂಗ ಸ್ವಾಮಿಗಳು ಶೇಗುಣಸಿಯ ಶ್ರೀ ಮಹಾಂತ ಸ್ವಾಮಿಗಳು ಉಪಸ್ಥಿತರಿದ್ದರು ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಹಿರಿಯ ಸಾಹಿತಿ ಬಸವರಾಜ ಜಗಜಂಪಿ, ನೀಲಗಂಗಾ ಚರಂತಿಮಠ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಮಳಗಲಿ, ಮಾಜಿ ನಗರ ಸೇವಕಿ ಸರಳ ಹೇರೆಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.