ಬೆಳಗಾವಿ : ಹಿರೇಬಾಗೇವಾಡಿ ಗ್ರಾಮದ ಡಾ|| ಫಡಿಗೌಡ ರಾಮನಗೌಡ ಪಾಟೀಲ್..F R Patil (ದೊಡ್ಡಗೌಡ್ರ) ನಿವೃತ್ತ ಜಿಲ್ಲಾ ಅರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಚಿಕಿತ್ಸಕರು. ಇವರು ಅನಾರೋಗ್ಯದ ಕಾರಣ ದಿನಾಂಕ 11/07/2025 ಶುಕ್ರವಾರ ಸಂಜೆ 7:30 ಕ್ಕೆ ಶಿವಬಸವ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಿವೃತ್ತಿ ನಂತರ ರಾಜಕೀಯ ಒಲವು ಬೆಳೆಸಿಕೊಂಡಿದ್ದ ಇವರು ವಿಜಯ ಸಂಕೇಶ್ವರ ಅವರ ಕನ್ನಡ ನಾಡು ಪಕ್ಷದ ವತಿಯಿಂದ ಹಿರೇಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಿಂದ 2004ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ದಿನಾಂಕ 12/07/2025 ಶನಿವಾರ ಸ್ವಗ್ರಾಮ ಹಿರೇಬಾಗೇವಾಡಿಯ ತೋಟದ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಹಾ ವಿನಯತಾವಾದಿ..!
ಡಾಕ್ಟರ್ ಫಡಿಗೌಡರು ಹಿರಿಯ ನಾಗರಿಕ, ಮಹಾ ಮಾನವಿಕ ಹಾಗೂ ವಿನಯತಾವಾದಿ ಮನುಷ್ಯರಾಗಿದ್ದರು. ನಿವೃತ್ತಿ ನಂತರವೂ ಕೂಡ ಸ್ವಗ್ರಾಮ ಹಿರೇಬಾಗೇವಾಡಿ ಸೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಅದಲ್ಲದೇ ಹಿರಿಯಕಿರಿಯರನ್ನದೇ ವಿನಯತಾ ಭಾವದಿಂದ ಕಾಣುತ್ತಿದ್ದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಎರಡು ತಿಂಗಳ ಹಿಂದೆ ಇವರಿಗೆ ಪತ್ನಿ ವಿಯೋಗವಾಗಿತ್ತು.
ಇವರ ಪುತ್ರ ಸೊಸೆಯಂದಿರು ವೈದ್ಯರಾಗಿದ್ದು, ಬೆಳಗಾವಿ ಹಾಗೂ ಹೊರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒರ್ವ ಪುತ್ರ ಹಾಗೂ ಸೊಸೆ ನಗರದ ಲೇಕವ್ಯೂವ್ ಆಸ್ಪತ್ರೆಗೆ ನಿರ್ದೇಶಕರಾಗಿದ್ದಾರೆ.