ಬೆಳಗಾವಿ :
ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ಸಿ.ರಾಮರಾವ್ ಅವರು ಥೈಲ್ಯಾಂಡ್ನ ಚುಲಾಂಕರ್ನ್ ವಿಶ್ವವಿದ್ಯಾಲಯದ ಬ್ಯಾಂಕಾಕ್ನಲ್ಲಿ ಜು.22 ರಿಂದ 26 ರ ವರೆಗೆ ಜರುಗಲಿರುವ ‘ಇಂಟರ್ನ್ಯಾಷನಲ್ ಆರ್ಗ್ನೈಝೇಶನ್ ಫಾರ್ ಹೆಲ್ಥ್ ಸೋರ್ಟ್ಸ ಅಂಡ್ ಕಿನಿಸಿಯಾಲಾಜಿ’ ಅಂತಾ ರಾಷ್ಟೀಯ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಪ್ರಬಂಧವನ್ನು ಮಂಡಿಸಲಿದ್ದಾರೆ. ಅವರಿಗೆ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಥೈಲ್ಯಾಂಡ್ ಸಮ್ಮೇಳನಕ್ಕೆ ಡಾ.ಸಿ.ರಾಮರಾವ್ ಆಯ್ಕೆ
