This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬೆಳೆಯುತ್ತಿರುವ ಬೆಳಗಾವಿಗೆ ಭಂಗ ತರದಿರಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ Don't disturb the growing Belgaum: KPCC working president Satish Jarakiholi


 

ಬೆಳಗಾವಿ:

ನಗರದ ಗೋಗಟೆ ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ಯುವಕನ ಮೇಲೆ ಬೆಳಗಾವಿ ನಗರ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿರುವ ಘಟನೆ ಅದನ್ನು ಅಲ್ಲಿಗೆ ಬಿಟ್ಟು ಬಿಡುವುದು ಒಳ್ಳೆಯದು. ಪದೇ ಪದೇ ಕನ್ನಡ, ಮರಾಠಿ ಆಗಬಾರದು.ಬೆಳಗಾವಿ ಬೆಳೆಯುತ್ತಿರುವ ನಗರ ಇದಕ್ಕೆ ಭಂಗ ತರುವ ಕೆಲಸ‌ ಮಾಡಬಾರದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯನ್ನು ಬೆಳೆಯಲು ಅವಕಾಶ ಕೊಡಬೇಕು. ೨೦ ವರ್ಷದ ಹಿಂದೆ ಬೆಳಗಾವಿಯಲ್ಲಿ ಹಿಂದೂ,‌ ಮುಸ್ಲಿಂ ಗಲಾಟೆಯಾಗಿ ಅಭಿವೃದ್ಧಿ ಕುಂಠಿತವಾಗಿತ್ತು. ಸದ್ಯ ಈಗ ಇಂತಹ ಗಲಾಟೆಗಳು ತಣ್ಣಗಾಗಿದ್ದು, ಈಗ ಬೆಳಗಾವಿ ಬೆಳೆಯುತ್ತಿದೆ. ಬೆಳಗಾವಿ ಬೆಳೆಯಲು ಅವಕಾಶ ಮಾಡಿಕೊಡಬೇಕಿದೆ. ನಗರದಲ್ಲಿ ಯಾವುದೊಂದು ವಿಷಯಕ್ಕೆ ದೊಡ್ಡದಾಗಿ ಮಾಡುವುದು ಸರಿಯಲ್ಲ. ಠಾಣೆಗೆ ದೂರು ನೀಡಲು ಜನರು ಬಂದರೊಂದಿಗೆ ಪೊಲೀಸರು ಸಂಯಮದಿಂದ ನಡೆದುಕೊಳ್ಳಬೇಕು. ಹೋರಾಟಗಾರರ ಮನೆಗೆ ಬೆಂಕಿ ಹಚ್ಚುವುದಾಗಿ ಹೇಳುವುದು ಪೊಲೀಸರ ನಡೆ ಸರಿಯಿಲ್ಲ. ಬೆಳಗಾವಿ ಬೆಳೆಯುತ್ತಿರುವ ನಗರ ಇದಕ್ಕೆ ಭಂಗ ತರುವ ಕೆಲಸ‌ ಮಾಡಬಾರದು ಎಂದು ತಿಳಿ ಹೇಳಿದರು.
ಬಿಜೆಪಿ ಸರ್ಕಾರಕ್ಕೆ ಧಮ್‌ ಇಲ್ಲ: ಸರ್ಕಾರಕ್ಕೆ ಇಂಥ ಪ್ರಕರಣದಲ್ಲಿ ಗಟ್ಟಿ ಕ್ರಮ ತೆಗೆದುಕೊಳ್ಳುವ ಅಥವಾ ಯಾವುದೇ ಪ್ರಕರಣದಲ್ಲಿ ಕ್ರಮ ಜರುಗಿಸುವ ಧಮ್ ಬಿಜೆಪಿ ಸರ್ಕಾರಕ್ಕಿಲ್ಲ. ಬಿಜೆಪಿ ಅವರು ಧಮ್ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಉಸ್ತುವಾರಿ ಸಚಿವರು, ಶಾಸಕರಿಗೆ ಇರುವ ಶಕ್ತಿ ಸರಕಾರಕ್ಕೆ ಇಲ್ಲ. ಇದು ಬೇರೆ ಬೇರೆ ವಿಷಯದಲ್ಲಿಯೂ ಸಾಭೀತಾಗಿದೆ. ಇದನ್ನು ಹೆಚ್ಚು ಮುಂದುವರೆಸವುದು ಸರಿಯಲ್ಲ. ಅಲ್ಲದೆ, ಪೊಲೀಸರು ಕನ್ನಡದ ಧ್ವಜದ ಬಗ್ಗೆ ಬಳಕೆ ಮಾಡಿರುವ ಪದ‌ ಸರಿಯಲ್ಲ ಎಂದರು.
ಸರ್ವೆಯಲ್ಲಿ ಹೆಸರು ಬಂದವರಿಗೆ ಟಿಕೆಟ್: ಈಗಾಗಲೇ ಬೆಳಗಾವಿಯ ಎಲ್ಲ ಕ್ಷೇತ್ರದಲ್ಲಿ ಸರ್ವೆ ನಡೆಸಲಾಗುತ್ತಿದೆ. ೨ನೇ ಬಾರಿಯೂ ಸರ್ವೆ ಕಲಸ ನಡೆಯುತ್ತಿದೆ. ಎಐಸಿಸಿಯಿಂದ, ಕೆಪಿಸಿಸಿ, ಸಿಎಲ್ ಪಿ ಕಡೆಯಿಂದ ಪ್ರತಿ ಕ್ಷೇತ್ರದಲ್ಲಿ ಸುಮಾರು 10 ಜನ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸರ್ವೆದಲ್ಲಿ ಯಾರ ಹೆಸರು ಬರುತ್ತದೆಯೋ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುತ್ತೇವೆ. ಸವದತ್ತಿ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲಬೇಕೆಂಬ ಆಸೆ ನಮ್ಮಗೂ ಇದೆ. ಆದ್ದರಿಂದ ಅಲ್ಲಿಯೂ ಕೂಡಾ ಚುನಾವಣೆ ವೇಳೆ ಹೆಚ್ಚು ಮುತುವರ್ಜಿ ವಹಿಸಲಾಗುವುದು ಎಂದರು.

ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಭೇಟಿಯ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಬಿ.ಇನಾಮದಾರ ನಮ್ಮ ಪಕ್ಷದ ನಾಯಕರು,‌ ಮಾಜಿ ಶಾಸಕರು ಪಕ್ಷ ಸಂಘಟನೆ ಸೇರಿದಂತೆ ಸಾಕಷ್ಟು ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವು ಎಂದು ಪ್ರತಿಕ್ರಿಯಿಸಿದರು. ಸವದತ್ತಿ ಮತಕ್ಷೇತ್ರದಲ್ಲಿ ಎಚ್.ಎಂ.ರೇವಣ್ಣ ಟಿಕೆಟ್ ಗಾಗಿ ಅರ್ಜಿ ಹಾಕಿದ್ದು ಅವರಿಗಾಗಿಯೋ ಅಥವಾ ಸಿದ್ದರಾಮಯ್ಯನವರ ಸಲುವಾಗಿಯೋ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರ್ಜಿ ಹಾಕಲು ಎಲ್ಲರಿಗೂ ಅವಕಾಶ ಇದೆ. ಸವದತ್ತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕೆಂಬ ಉದ್ದೇಶ ಇದೆ‌ ಅಷ್ಟೆ ಎಂದರು.
ಗಡಿ ಭಾಗದಲ್ಲಿ ಚುನಾವಣೆ ಗಿಮಿಕ್: ಮಹಾರಾಷ್ಟ್ರದಲ್ಲಿರುವ ಜತ್, ಅಕ್ಕಲಕೋಟೆಯ ಜನ ಕರ್ನಾಟಕಕ್ಕೆ ಬರುವುದಗಾಗಿ ಹೇಳಿದ್ದಾರೆ. ಅವರು ಇಲ್ಲಿ ಬರೋಕೆ ಆಗಲ್ಲ. ನಾವು ಅಲ್ಲಿ ಹೋಗೊಕ್ಕೆ ಆಗಲ್ಲ. ಅದು ಕೇವಲ ಚರ್ಚೆಗೆ ಸಿಮೀತವಾಗುತ್ತದೆ. ಒಂದು ಬಾರಿ ವಿಭಜನೆಯಾದರೆ ಅಂತಿಮ‌ ಚರ್ಚೆ. ಈ ಭಾಗದ ಜನರಿಗೆ ಕುಡಿಯು ನೀರು ಕೊಡದೆ ಇರುವುದು ಮಹಾರಾಷ್ಟ್ರದ ರಾಜಕೀಯ ಗಿಮಿಕ್. ಸಚಿವರು ಬೆಳಗಾವಿ ಒಳಗೆ ಬರಲು ಪೊಲೀಸರು ಬಿಡುವುದಿಲ್ಲ. ಅವರನ್ನು ನಿಪ್ಪಾಣಿಯಲ್ಲಿಯೇ ತಡೆ ಹಿಡಿಯುತ್ತಾರೆ ಎಂದರು.
ಸಿದ್ದರಾಮ್ಯನವರ ಸ್ಪರ್ಧೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರ ಬಗ್ಗೆ ಅಂತಿಮ‌ ನಿರ್ಧಾರ ಅವರೆ ತೆಗೆದುಕೊಳ್ಳುತ್ತಾರೆ ಎಂದರು.
ಪರಿಶಿಷ್ಟ ಸ್ವಾಮೀಜಿ ನೇತೃತ್ವದಲ್ಲಿ ದಲಿತ ಸಿಎಂ ಆಗಬೇಕೆಂಬ ಸಮಾವೇಶ ನಡೆಸುತ್ತಿದ್ದಾರೆ. ಅಹಿಂದ ಸಂಘಟನೆಯನ್ನು ಗಟ್ಟಿಗೊಳಿಸುವುದು ಬಿಜೆಪಿಗೆ ಸಂಬಂಧ ಇಲ್ಲ. ಜಾರಕಿಹೊಳಿ ಸಹೋದರರು ಅಹಿಂದ ಸಮಾವೇಶ ಮಾಡುತ್ತಿರುವ ಸುದ್ದಿಗಾರರ ಪ್ರಶ್ನೆಗೆ ನನಗೆ ಕರೆದಿಲ್ಲ. ಕರೆದರೆ ನೋಡುತ್ತೇನೆ ಎಂದರು.
ಯಮಕನಮರಡಿ‌ ಕ್ಷೇತ್ರದಿಂದ ಸ್ಪರ್ಧೆ ಖಚಿತ: ಈ ಭಾರಿಯೂ ನಾನು ಯಮಕನಮರಡಿ‌ ಮತಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧನಾಗಿದ್ದು, ನನ್ನ ಸೋಲಿಸಲು ಕಳೆದ ಮೂರು ವರ್ಷದಿಂದ ಬಿಜೆಪಿಯವರು ಐದಾರು ಜನರನ್ನು ಗುರಿ ಮಾಡಿದ್ದಾರೆ. ನಮಗೆ ಬಿಜೆಪಿಯಿಂದ ತೊಂದರೆ ಇಲ್ಲ. ನಮ್ಮ ಕಾರ್ಯಕರ್ತರು ಸಾಕಷ್ಟು ತಯಾರಿಯಲ್ಲಿದ್ದು, ಚುನಾವಣೆ ಎದುರಿಸಲು ನಾವು ಕೂಡಾ ಸಜ್ಜಾಗಿದ್ದೇವೆ ಎಂದರು


Jana Jeevala
the authorJana Jeevala

Leave a Reply